ಆ್ಯಪ್ನಗರ

ಉಪ ಚುನಾವಣೆ ಕೇಂದ್ರ ಸರ್ಕಾರದ ಪಿತೂರಿ: ಮೊಯ್ಲಿ

ರಾಜಕೀಯ ಉದ್ದೇಶದಿಂದ ಕೇಂದ್ರ ಸರಕಾರ ಉಪ ಚುನಾವಣೆ ಮಾಡ ಹೊರಟಿದೆ.

Vijaya Karnataka Web 10 Oct 2018, 2:17 pm
ಚಿಕ್ಕಬಳ್ಳಾಪುರ: ಉಪಚುನಾವಣೆ ಕೇಂದ್ರ ಸರ್ಕಾರದ ಪಿತೂರಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.
Vijaya Karnataka Web veerappa moily


ಚಿಕ್ಕಬಳ್ಳಾಪುರದಲ್ಲಿ ಮಾತನಾಡುತ್ತಿದ್ದ ಅವರು, ನಮಗೆ ಲೋಕಸಭಾ ಉಪ ಚುನಾವಣೆ ಅವಶ್ಯಕತೆ (ಆಯ್ಕೆ) ಇರಲಿಲ್ಲ. ಆದರೆ ರಾಜಕೀಯ ಉದ್ದೇಶದಿಂದ ಕೇಂದ್ರ ಸರಕಾರ ಉಪ ಚುನಾವಣೆ ಮಾಡಲು ಹೊರಟಿದೆ ಎಂದರು.

ಸಾಮಾನ್ಯವಾಗಿ ಮುಖ್ಯ ಚುನಾವಣೆಗೆ 6 ತಿಂಗಳು ಇರುವಾಗ ಉಪಚುನಾವಣೆ ಮಾಡುವುದಿಲ್ಲ. ಹೀಗಿದ್ದೂ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ.ಇದರಲ್ಲಿ ಏನೋ ಒಂದು ರಾಜಕೀಯ ಉದ್ದೇಶ ಇದ್ದೇ ಇರಬೇಕು. ಚುನಾವಣಾ ಆಯೋಗಕ್ಕೆ ರಾಜಕೀಯ ನಂಟಿರಬಾರದು ಎಂದು ಅವರು ಹೇಳಿದ್ದಾರೆ.

ಆಯೋಗ ಏನು ಹೇಳಿದೆ

ಲೋಕಸಭಾ ಚುನಾವಣೆಗೆ 6 ತಿಂಗಳಿದೆ ಎನ್ನುವಾಗಲೇ ಕರ್ನಾಟಕದಲ್ಲಿ ಉಪ ಚುನಾವಣೆ ಘೋಷಣೆಯಾಗಿರುವುದು ಹಲವು ರಾಜಕೀಯ ಪಕ್ಷಗಳಿಗೆ ಅಸಮಾಧಾನ ತಂದಿದೆ. ಆದರೆ ಆಯೋಗ ಹೇಳುವ ಪ್ರಕಾರ 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 151ಎ ಪ್ರಕಾರ ದೇಶದ ಯಾವುದೇ ಭಾಗದಲ್ಲಿ ಸಂಸದ ಅಥವಾ ಶಾಸಕ ಮೃತನಾದರೆ ಅಥವಾ ರಾಜೀನಾಮೆ ಸಲ್ಲಿಸಿದರೆ, ತೆರವಾದ ಸ್ಥಾನವನ್ನು ಆರು ತಿಂಗಳಿನಲಿ ಚುನಾವಣೆ ಮೂಲಕ ಭರ್ತಿಗೊಳಿಸುವುದು ಆಯೋಗದ ಜವಾಬ್ದಾರಿ. ಹೀಗಾಗಿ ಕರ್ನಾಟಕದ ಮೂರು ಲೋಕಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವುದು ಅನಿವಾರ್ಯವಾಗಲಿದೆ.

ಬಳ್ಳಾರಿ , ಶಿವಮೊಗ್ಗ, ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ನವೆಂಬರ್ 3ಕ್ಕೆ ಉಪಚುನಾವಣೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ