ಆ್ಯಪ್ನಗರ

ಸ್ವಯಂ ದೂರು ದಾಖಲಿಸಿಲು ಸಿಇಒ ಆದೇಶ

ಮಳ್ಳೂರು ಗ್ರಾಪಂ ಕಚೇರಿ ಎದುರು ಗ್ರಾಮಸ್ಥರು ನಡೆಸುತ್ತಿದ್ದ ಅನಿರ್ಧಿಷ್ಟ ಧರಣಿಗೆ ಸ್ಥಳಕ್ಕೆ ಶನಿವಾರ ಜಿಪಂ ಸಿಇಒ ಫೌಜಿಯಾ ತರುನ್ನಮ್‌ ಭೇಟಿ ನೀಡಿ, ಪ್ರತಿಭಟನಾಕಾರರು ಮತ್ತು ಗ್ರಾಪಂ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೂಡಲೇ ಜಿಲ್ಲಾಮಟ್ಟದ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದ ನಂತರ ಧರಣಿ ಹಿಂಪಡೆದರು.

Vijaya Karnataka 20 Oct 2019, 5:00 am
ಅಕ್ರಮ ಖಾತೆ ಕ್ರಮಕ್ಕೆ ಒತ್ತಾಯಿಸಿ ಮಳ್ಳೂರು ಗ್ರಾಪಂ ಎದುರು ನಡೆಯುತ್ತಿದ್ದ ಧರಣಿ ಅಂತ್ಯ
Vijaya Karnataka Web 19SDL4_10

ಶಿಡ್ಲಘಟ್ಟ:
ಮಳ್ಳೂರು ಗ್ರಾಪಂ ಕಚೇರಿ ಎದುರು ಗ್ರಾಮಸ್ಥರು ನಡೆಸುತ್ತಿದ್ದ ಅನಿರ್ಧಿಷ್ಟ ಧರಣಿಗೆ ಸ್ಥಳಕ್ಕೆ ಶನಿವಾರ ಜಿಪಂ ಸಿಇಒ ಫೌಜಿಯಾ ತರುನ್ನಮ್‌ ಭೇಟಿ ನೀಡಿ, ಪ್ರತಿಭಟನಾಕಾರರು ಮತ್ತು ಗ್ರಾಪಂ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೂಡಲೇ ಜಿಲ್ಲಾಮಟ್ಟದ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದ ನಂತರ ಧರಣಿ ಹಿಂಪಡೆದರು.

ಮಳ್ಳೂರು ಗ್ರಾಮ ಪಂಚಾಯಿತಿಯ ಅಂಕತಟ್ಟಿ ಗ್ರಾಮದಲ್ಲಿನಡೆದಿದೆ ಎನ್ನಲಾದ ಗ್ರಾಮ ಠಾಣೆ ಜಾಗದ ಅಕ್ರಮ ಖಾತೆ ರದ್ದುಪಡಿಸಬೇಕು, ಅಕ್ರಮದಲ್ಲಿಭಾಗಿಯಾದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕಳೆದ ಮೂರು ದಿನದಿಂದ ಧರಣಿ ನಡೆಸುತ್ತಿದ್ದರು.

ಸಿಇಒ ಅವರು ನೀಡಿದ ಭರವಸೆ ಮೇರೆಗೆ ಮೂರು ದಿನಗಳಿಂದಲೂ ನಡೆಸುತ್ತಿದ್ದ ಅನಿರ್ಧಿಷ್ಟ ಧರಣಿಯನ್ನು ಅಂಕತಟ್ಟಿ ಗ್ರಾಮಸ್ಥರು ಹಾಗೂ ಹಸಿರು ಸೇನೆ ರೈತ ಸಂಘದವರು ಕೈ ಬಿಟ್ಟರಲ್ಲದೆ ಒಂದೊಮ್ಮೆ ನೀವು ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಮತ್ತೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ದಾಖಲೆಗಳ ವಶ: ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲದಾಖಲೆಗಳನ್ನು ಕೂಡಲೆ ತಾಪಂ ವಶಕ್ಕೆ ಪಡೆದುಕೊಳ್ಳಬೇಕು, ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರಿಗೂ ನೋಟೀಸ್‌ ಜಾರಿ ಮಾಡಬೇಕು. ಅಹವಾಲು ಸಲ್ಲಿಸಿ ದಾಖಲೆಗಳನ್ನು ಒದಗಿಸಿ ಸಮಜಾಯಿಷಿ ನೀಡಲು ಎಲ್ಲರಿಗೂ ಅವಕಾಶ ಕೊಡಿ. ಪ್ರತಿ ಒಂದು ವಾರ ಇಲ್ಲವೇ ಎರಡು ವಾರಕ್ಕೊಮ್ಮೆ ಇಒ ಕಚೇರಿಯಲ್ಲಿನ್ಯಾಯಾಲಯ ನಡೆಸಿ ಆದಷ್ಟು ಬೇಗ ತನಿಖೆ ಮುಗಿಸಿ ವರದಿ ಕೊಡಿ ಎಂದು ಇಒಗೆ ಸೂಚಿಸಿದರು.

ಎಲ್ಲರಿಗೂ ನೋಟೀಸ್‌: ಈ ಪ್ರಕರಣದಲ್ಲಿದೂರುದಾರರು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಅಕ್ರಮ ಖಾತೆ ಮಾಡಿಸಿಕೊಂಡಿದ್ದಾರೆ ಎನ್ನುವ ವ್ಯಕ್ತಿಗಳಲ್ಲದೆ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಸಹ ವಿಚಾರಣೆಗೆ ಒಳಪಡಿಸಿ ಎಂದು ಆದೇಶಿಸಿದರು.

ಇನ್ನು ಅಂಕತಟ್ಟಿ ಗ್ರಾಮದಲ್ಲಿಈ ಪ್ರಕರಣಕ್ಕೆ ಸಂಬಂಧಿಸಿದ ಎರಡು ಗುಂಪುಗಳ ನಡುವೆ ಇತ್ತೀಚಿನ ದಿನಗಳಲ್ಲಿನಡೆದ ಘರ್ಷಣೆ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿದಾಖಲಾದ ದೂರುಗಳ ವಿವರವನ್ನು ಪೊಲೀಸರಿಗೆ ಕೇಳಿದರು.

ವಿವಾದಿತ ಜಮೀನಿನಲ್ಲಿಯಾವುದೇ ರೀತಿ ಚಟುವಟಿಕೆಗಳು ನಡೆಯದಂತೆ ನಿಗಾವಹಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕಾನೂನು ಪ್ರಕಾರವೇ ತನಿಖೆ ನಡೆಸಿ, ಅಕ್ರಮ ಖಾತೆ ಪ್ರಕರಣ ಬೇಧಿಸಲಾಗುವುದು, ಒಂದು ವೇಳೆ ಅಕ್ರಮ ಖಾತೆ ಆಗಿದ್ದರೆ ಖಾತೆ ರದ್ದುಪಡಿಸಿ ಅಕ್ರಮದಲ್ಲಿಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಗ್ರಾಮದಲ್ಲಿಮತ್ತೆ ಯಾರ ಮೇಲೂ ದೌರ್ಜನ್ಯ ನಡೆಯದಂತೆ ಸೂಕ್ತ ಪೊಲೀಸ್‌ ಬಂದೋಬಸ್‌್ತ ಏರ್ಪಡಿಸಲು ಪೊಲೀಸರಿಗೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ