ಆ್ಯಪ್ನಗರ

ಅಂತರ್ಜಲ ಮಟ್ಟ ಹೆಚ್ಚಿಸಲು ಕಲ್ಯಾಣಿಗಳ ಸ್ವಚ್ಛತೆ

ಒಳ್ಳೆಯ ಮಿತ್ರ, ಗುಣಮಟ್ಟದ ಶಿಕ್ಷ ಣ, ಕುಡಿವ ನೀರು ಎಲ್ಲಿರುತ್ತದೆ ಅಲ್ಲಿ ರಾಜ್ಯಗಳನ್ನು ನಿರ್ಮಾಣ ಮಾಡಬಹುದು ಎಂದು ತಾಲೂಕು ಪಂಚಾಯಿತಿ ಇಒ ಸಿ. ಶ್ರೀನಿವಾಸ ತಿಳಿಸಿದರು.

Vijaya Karnataka 14 May 2019, 5:00 am
ಬಾಗೇಪಲ್ಲಿ: ಒಳ್ಳೆಯ ಮಿತ್ರ, ಗುಣಮಟ್ಟದ ಶಿಕ್ಷ ಣ, ಕುಡಿವ ನೀರು ಎಲ್ಲಿರುತ್ತದೆ ಅಲ್ಲಿ ರಾಜ್ಯಗಳನ್ನು ನಿರ್ಮಾಣ ಮಾಡಬಹುದು ಎಂದು ತಾಲೂಕು ಪಂಚಾಯಿತಿ ಇಒ ಸಿ. ಶ್ರೀನಿವಾಸ ತಿಳಿಸಿದರು.
Vijaya Karnataka Web cleanliness of kalyani to increase groundwater level
ಅಂತರ್ಜಲ ಮಟ್ಟ ಹೆಚ್ಚಿಸಲು ಕಲ್ಯಾಣಿಗಳ ಸ್ವಚ್ಛತೆ


ತಾಲೂಕಿನ ಪಾತಪಾಳ್ಯ ಹೋಬಳಿ ತೊಳ್ಳಪಲ್ಲಿ ಗ್ರಾಪಂ ವ್ಯಾಪ್ತಿಯ ಐತಿಹಾಸಿಕ ಗುಮ್ಮನಾಯಕನಪಾಳ್ಯದಲ್ಲಿ ಕಲ್ಯಾಣಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕಾಪಾಡಲು ಸುಸ್ಥಿರವಾದ ಕೆಲಸಗಳನ್ನು ಮಾಡಲು ಕಲ್ಯಾಣಿಗಳನ್ನು ಸ್ವಚ್ಛ ಮಾಡಲಾಗುತ್ತಿದೆ. ಹಿಂದಿನ ಕಾಲದಲ್ಲಿ ದೇವಸ್ಥಾನಗಳ ಬಳಿ ಜನರ ಅನುಕೂಲಕ್ಕಾಗಿ, ಶುದ್ಧ ಕುಡಿವ ನೀರಿಗಾಗಿ ಕಲ್ಯಾಣಿಗಳನ್ನು ಪಾಳ್ಯೇಗಾರರು ನಿರ್ಮಾಣ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕಲ್ಯಾಣಿಗಳಲ್ಲಿ ಜನರು ಕಸ ಕಡ್ಡಿ ತುಂಬಿಸಿ ಅವ್ಯವಸ್ಥಿತವಾಗಿ ಕಾಣುವಂತೆ ಮಾಡಿದ್ದಾರೆ ಎಂದರು.

ಇಂದು ಜಲ ವರ್ಷವಾದ ಕಾರಣದಿಂದ ತಾಪಂ ಸಿಬ್ಬಂದಿ, ಗ್ರಾಪಂ ಪಿಡಿಒ, ಕಾರ್ಯದರ್ಶಿ, ಸಿಬ್ಬಂದಿಯೊಂದಿಗೆ ಸೇರಿ ಗುಮ್ಮನಾಯಕನಪಾಳ್ಯದ ಕಲ್ಯಾಣಿಯಲ್ಲಿ ಹೂಳೆತ್ತಿ, ಅದನ್ನು ರೈತರ ಜಮೀನುಗಳಿಗೆ ಹಾಕಿಸಲಾಗಿದೆ. ಕಳೆದ ವರ್ಷ ಮಳೆಯ ಅಭಾವದಿಂದ ಈ ಬಾರಿ ಕುಡಿವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದರೆ ಜಲಯುದ್ಧ ಮಾಡುವ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಗ್ರಾಮಸ್ಥರು ಮರಗಿಡಗಳನ್ನು ಬೆಳೆಸುವ ಮೂಲಕ ಮತ್ತು ರಾಜ ಕಾಲುವೆಗಳನ್ನು ಪೋಷಣೆ ಮಾಡುವ ಮೂಲಕ ನೀರಿನ ಮೂಲಗಳನ್ನು ಸಂರಕ್ಷ ಣೆ ಮಾಡಬೇಕು. ಕೆರೆ ಕುಂಟೆಗಳು ಒತ್ತುವರಿಯಾಗದೆ ಹಾಗೆ ನೋಡಿಕೊಂಡು, ಅಂತರ್ಜಲ ಮಟ್ಟ ಕಾಪಾಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಣಾಧಿಕಾರಿಗಳು ಈಗಾಗಲೇ ಕಲ್ಯಾಣಿಗಳ ಸ್ವಚ್ಛತೆಗೆ ಚಾಲನೆ ನೀಡಿದ್ದು, ಅದರಂತೆ ನಾವು ಇಂದು ಕಲ್ಯಾಣಿ ಸ್ವಚ್ಛ ಮಾಡಲಾಗುತ್ತಿದೆ. ತಾಲೂಕಿನಲ್ಲಿ 10 ಕಲ್ಯಾಣಿಗಳ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಸ್ವಚ್ಛ ಮಾಡಿರುವ ಕಲ್ಯಾಣಿಗಳಿಗೆ ಬೇಲಿ ಹಾಕಿಸಿ, ರಕ್ಷ ಣೆ ನೀಡಲಾಗುವುದು ಎಂದರು.

ನರೇಗಾ ಎಡಿ ರವೀಂದ್ರ, ತಾಂತ್ರಿಕ ಸಂಯೋಜಕ ಮಂಜುನಾಥ, ವಸತಿ ನೋಡೆಲ್‌ ಅಧಿಕಾರಿ ರಂಗಪ್ಪ, ಎಸ್‌ಬಿಐ ನೋಡೆಲ್‌ ಅಧಿಕಾರಿ ರವಿ ಸೇರಿದಂತೆ ಎಲ್ಲ ಪಿಡಿಒಗಳು ಮತ್ತು ಸಿಬ್ಬಂದಿ ಭಾಗಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ