ಆ್ಯಪ್ನಗರ

ರಾಜಕಾಲುವೆ ಸ್ವಚ್ಛತಾ ಕಾರ್ಯ ಆರಂಭ

ನಗರ ಹೊರವಲಯದ ಚಿಂತಾಮಣಿ ಮಾರ್ಗದ ಟೋಲ್‌ಗೇಟ್‌ ಬಳಿ ಹಾದುಹೋಗುವ ರಾಜಕಾಲುವೆಯಲ್ಲಿನ ತ್ಯಾಜ್ಯದ ಹೂಳೆತ್ತಿ, ಎರಡೂ ಕಡೆ ಕಾಂಕ್ರೀಟ್‌ ತಡೆಗೋಡೆಯನ್ನು ನಿರ್ಮಿಸುವ ಕಾರ್ಯ ಆರಂಭವಾಗಿದೆ.

Vijaya Karnataka 23 Jul 2019, 5:00 am
ಶಿಡ್ಲಘಟ್ಟ: ನಗರ ಹೊರವಲಯದ ಚಿಂತಾಮಣಿ ಮಾರ್ಗದ ಟೋಲ್‌ಗೇಟ್‌ ಬಳಿ ಹಾದುಹೋಗುವ ರಾಜಕಾಲುವೆಯಲ್ಲಿನ ತ್ಯಾಜ್ಯದ ಹೂಳೆತ್ತಿ, ಎರಡೂ ಕಡೆ ಕಾಂಕ್ರೀಟ್‌ ತಡೆಗೋಡೆಯನ್ನು ನಿರ್ಮಿಸುವ ಕಾರ್ಯ ಆರಂಭವಾಗಿದೆ.
Vijaya Karnataka Web commencement of cleanup work
ರಾಜಕಾಲುವೆ ಸ್ವಚ್ಛತಾ ಕಾರ್ಯ ಆರಂಭ


ನಗರಸಭೆಯ ನಗರೋತ್ಥಾನ ಯೋಜನೆ ಹಂತ-3ರಲ್ಲಿ ರಾಜಕಾಲುವೆಯ ಕಾಮಗಾರಿಯನ್ನು 50 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು ಕಾಲುವೆಯಲ್ಲಿ ಅನೇಕ ವರ್ಷಗಳಿಂದಲೂ ತುಂಬಿ ತುಳುಕಿದ್ದ ಕಸ, ಕಡ್ಡಿ, ತ್ಯಾಜ್ಯವನ್ನು ತೆಗೆಯಲಾಗುತ್ತಿದೆ.

ನಗರಸಭೆ ಸದಸ್ಯರಾದ ರಾಘವೇಂದ್ರ, ನಂದುಕಿಷನ್‌, ಲಕ್ಷ್ಮೀನಾರಾಯಣ್‌, ರಮೇಶ್‌ ಇನ್ನಿತರರು ಈ ಕಾಲುವೆಯನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ ಇದೇ ಜು.10ರಂದು ಕಾಲುವೆಗೆ ಇಳಿದು ಕೊಳಚೆ ನೀರಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾಲುವೆ ಸ್ವಚ್ಛತೆ, ದುರಸ್ತಿ ಕಾಮಗಾರಿಗೆ ಹಣ ಮಂಜೂರು ಆಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದು ಗುತ್ತಿಗೆದಾರರೊಬ್ಬರಿಗೆಗುತ್ತಿಗೆಯನ್ನೂ ನೀಡಲಾಗಿದೆ. ಅಧಿಕಾರಿಗಳ ನಿರ್ಲಕ್ಷ ್ಯದಿಂದ ಕಾಮಗಾರಿ ಆರಂಭವಾಗಿಲ್ಲ ಎಂದು ದೂರಿದ್ದರು. ಕಾಮಗಾರಿಗೆ ಈಗಲೇ ಚಾಲನೆ ನೀಡಬೇಕು. ಅದುವರೆಗೂ ನಾವು ಕಾಲುವೆಯಿಂದ ಮೇಲೆ ಬರುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಭಟಿಸಿದ್ದರು.

ಇದೀಗ ನಗರೋತ್ಥಾನ ಯೋಜನೆ ಹಂತ-3ರಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ಈ ರಾಜಕಾಲುವೆಯಲ್ಲಿ ಸದ್ಯಕ್ಕೆ 120 ಮೀಟರ್‌ ಉದ್ದದ ಕಾಲುವೆಯ ಸ್ವಚ್ಛತೆ, ದುರಸ್ತಿ ಹಾಗೂ ತಡೆಗೋಡೆ ನಿರ್ಮಿಸುವ ಕಾರ್ಯ ನಡೆಯಲಿದ್ದು, ಎರಡನೇ ಹಂತದಲ್ಲಿ ಮತ್ತೆ 50 ಲಕ್ಷ ರೂ. ಕಾಲುವೆ ಕಾಮಗಾರಿಗಾಗಿ ಮೀಸಲಿಡಲಾಗಿದೆ.

ನಗರದ ಮಧ್ಯಭಾಗದಲ್ಲಿ ಹಾದುಹೋಗುವ ರಾಜಕಾಲುವೆಗೆ ಎಲ್ಲ ವಾರ್ಡ್‌ಗಳಿಂದಲೂ ಚರಂಡಿ, ಮನೆ, ಹೋಟೆಲ್‌ಗಳ ವ್ಯರ್ಥ ನೀರು ಹರಿದು ಗೌಡನಕೆರೆ ಸೇರುತ್ತದೆ. ಇದರಲ್ಲಿ ಅನೇಕ ವರ್ಷಗಳಿಂದಲೂ ಹೂಳು ತೆಗೆಯದೆ ತ್ಯಾಜ್ಯ ತುಂಬಿ, ಗಿಡಗಂಟಿಗಳು ಆಳುದ್ದ ಬೆಳೆದು ನಿಂತಿದ್ದವು. ಸೊಳ್ಳೆಗಳ ಹಾವಳಿಯಿಂದ ಸ್ಥಳೀಯರು ರೋಗದ ಭೀತಿಯಲ್ಲಿದ್ದರು.

ತ್ಯಾಜ್ಯಕ್ಕೆ ಮುಕ್ತಿ: ಇದೀಗ ಈ ಕಾಲುವೆಯಲ್ಲಿನ ತ್ಯಾಜ್ಯಕ್ಕೆ ಮುಕ್ತಿ ದೊರೆಯುತ್ತಿದೆ. ಕಾಲುವೆಯ ಎರಡೂ ಕಡೆ ಕಾಂಕ್ರಿಟ್‌ನ ತಡೆಗೋಡೆ ನಿರ್ಮಾಣ ಆಗಲಿದೆ. ಮಕ್ಕಳು ಕಾಲುವೆಗೆ ಬೀಳುವ ಭಯ ಇಲ್ಲವಾಗಿದೆ. ಕಾಲುವೆಯ ಆಸುಪಾಸಿನ ವಾಸಿಗಳಲ್ಲಿ ಸಂತಸ ಮನೆ ಮಾಡಿದೆ.

ಶಿಡ್ಲಘಟ್ಟ ನಗರದ ಚಿಂತಾಮಣಿ ಮಾರ್ಗದ ಟೋಲ್‌ಗೇಟ್‌ ಬಳಿ ಹಾದುಹೋಗುವ ರಾಜಕಾಲುವೆಯ ಸ್ವಚ್ಛತಾ ಕಾರ್ಯವನ್ನು ನಗರೋತ್ಥಾನ ಯೋಜನೆ ಹಂತ-3ರಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇದೀಗ 120 ಮೀ. ಉದ್ದದ ಕಾಲುವೆಯ ಕಾಮಗಾರಿ ಕೈಗೊಂಡಿದ್ದು, ನಂತರದಲ್ಲಿ ಮತ್ತೆ 50 ಲಕ್ಷ ರೂ.ಗಳನ್ನು ಇದಕ್ಕೆ ಮೀಸಲಿಟ್ಟು ಉಳಿದ ಕಾಮಗಾರಿಯನ್ನು ಕೈಗೊಳ್ಳಲಾಗುವುದು.
-ಜಿ.ಎನ್‌.ಚಲಪತಿ | ಪೌರಾಯುಕ್ತರು, ಶಿಡ್ಲಘಟ್ಟ ನಗರಸಭೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ