ಆ್ಯಪ್ನಗರ

ರೇಷ್ಮೆಗೂಡು ಮಾರುಕಟ್ಟೆಗೆ ಆಯುಕ್ತರ ಭೇಟಿ

ರೇಷ್ಮೆಗೂಡಿನ ಗೋದಾಮುಗಳಲ್ಲಿಸರತಿಯಾಗಿ ಮೊದಲು ಬಂದವರಿಗೆ ಆದ್ಯತೆಯಂತೆ ಎಲ್ಲರೇಷ್ಮೆಬೆಳೆಗಾರರಿಗೂ ರೇಷ್ಮೆಗೂಡು ಹಾಕಿಕೊಳ್ಳಲು ಜಾಲರಿಗಳನ್ನು ಕೊಡಿ ಎಂದು ರೇಷ್ಮೆ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ಮಾರುಕಟ್ಟೆಯ ಅಧಿಕಾರಿಗಳಿಗೆ ಸೂಚಿಸಿದರು.

Vijaya Karnataka 16 Oct 2019, 3:17 pm
ಶಿಡ್ಲಘಟ್ಟ: ರೇಷ್ಮೆಗೂಡಿನ ಗೋದಾಮುಗಳಲ್ಲಿಸರತಿಯಾಗಿ ಮೊದಲು ಬಂದವರಿಗೆ ಆದ್ಯತೆಯಂತೆ ಎಲ್ಲರೇಷ್ಮೆಬೆಳೆಗಾರರಿಗೂ ರೇಷ್ಮೆಗೂಡು ಹಾಕಿಕೊಳ್ಳಲು ಜಾಲರಿಗಳನ್ನು ಕೊಡಿ ಎಂದು ರೇಷ್ಮೆ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ಮಾರುಕಟ್ಟೆಯ ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web commissioners visit to the silk market
ರೇಷ್ಮೆಗೂಡು ಮಾರುಕಟ್ಟೆಗೆ ಆಯುಕ್ತರ ಭೇಟಿ


ನಗರದಲ್ಲಿನ ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿದ್ದ ಅವರನ್ನು ಭೇಟಿ ಮಾಡಿದ ಕೆಲ ರೈತರು, ಶಿಡ್ಲಘಟ್ಟ ತಾಲೂಕಿನ ರೈತರಿಗೆ ಮಾತ್ರ ಮೊದಲು ಹಾಗೂ ಎರಡನೇ ಗೋದಾಮಿನಲ್ಲಿರೇಷ್ಮೆ Üೂಡು ಹಾಕಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಬೇರೆ ತಾಲೂಕು ಹಾಗೂ ಆಂಧ್ರದ ರೈತರಿಗೆ ಉಳಿದ ಗೋದಾಮುಗಳಲ್ಲಿಗೂಡು ಹಾಕಿಕೊಳ್ಳಲು ಜಾಲರಿಗಳನ್ನು ವಿತರಿಸಲಾಗುತ್ತಿದೆ. ಬೇರೆ ಗೋದಾಮುಗಳಲ್ಲಿಗೂಡಿನ ಬೆಲೆ ಸ್ವಲ್ಪ ಕಡಿಮೆ ಇರುತ್ತದೆಯಲ್ಲದೆ ಅಲ್ಲಿತೂಕ ಹಾಕಲು ಯಂತ್ರ ಇಲ್ಲ. ಹಾಗಾಗಿ ಅಲ್ಲಿನ ರೇಷ್ಮೆಗೂಡನ್ನು ತಂದು ಇಲ್ಲಿತೂಕ ಹಾಕಬೇಕಿದೆ. ಹಾಗಾಗಿ ಎಲ್ಲರಿಗೂ ಮೊದಲು ಬಂದವರಿಗೆ ಆದ್ಯತೆಯಂತೆ ಜಾಲರಿಗಳನ್ನು ವಿತರಿಸಿ ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂಧಿಸಿದ ಆಯುಕ್ತರು, ಯಾವ ಗೋದಾಮು ಆದರೇನು ರೇಷ್ಮೆಗೂಡಿನ ಗುಣಮಟ್ಟ ನೋಡಿ ತಾನೆ ಬಿಡ್‌ ನೀಡುವುದು ಎಂದು ರೀಲರನ್ನೆ ಪ್ರಶ್ನಿಸಿದರು. ಅದಕ್ಕೆ ರೀಲರುಗಳು ಉತ್ತರಿಸದೆ ಮೌನಕ್ಕೆ ಶರಣಾದರು. ನಂತರ ಆಯುಕ್ತರು ರೀಲರುಗಳ ಮನಸಿನಲ್ಲಿಇರುವ ಅನುಮಾನವನ್ನು ಹೋಗಲಾಡಿಸುವುದಕ್ಕಾಗಿಯಾದರೂ ಒಂದೊಂದು ತಾಲೂಕಿಗೂ ಸರತಿಯಂತೆ ಮೊದಲು ಹಾಗೂ ಎರಡನೆ ಗೋದಾಮಿನಲ್ಲಿಅವಕಾಶ ಕೊಡಿ ಎಂದು ಸೂಚಿಸಿದರು.

ಭರವಸೆ:
ಮಾರುಕಟ್ಟೆಯಲ್ಲಿಸ್ವಚ್ಛತೆ ಇಲ್ಲ, ರೀಲರುಗಳು ಹಾಗೂ ರೈತರಿಗೆ ಕುಡಿಯಲು ಶುದ್ಧ ನೀರಿನ ಸೌಲಭ್ಯ ಇಲ್ಲಎನ್ನುವುದು ಸೇರಿ ಹಲವು ಸಮಸ್ಯೆಗಳನ್ನು ಆಯುಕ್ತರ ಮುಂದಿಟ್ಟರು. ಎಲ್ಲವನ್ನೂ ಆಲಿಸಿದ ಆಯುಕ್ತರು ಎಲ್ಲಸಮಸ್ಯೆಗಳನ್ನು ಸಹ ಹಂತ ಹಂತವಾಗಿ ಪರಿಹರಿಸುವ ಭರವಸೆ ನೀಡಿದರು.

ನಂತರ ಇ-ಹರಾಜು ನಿರ್ವಹಣಾ ಕೊಠಡಿಗೆ ಭೇಟಿ ನೀಡಿ ಅಲ್ಲಿಇ-ಹರಾಜು ವ್ಯವಸ್ಥೆಯ ನಿರ್ವಹಣೆ ಕುರಿತು ಸಂಬಂಧಿಸಿದ ಆಧಿಕಾರಿಗಳು ಹಾಗೂ ನಿರ್ವಹಣೆ ಎಂಜಿನಿಯರ್‌ ಬಳಿ ಮಾಹಿತಿ ಪಡೆದುಕೊಂಡರು.

ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಕುಮಾರ್‌, ರೇಷ್ಮೆ ಇಲಾಖೆ ಉಪನಿರ್ದೇಶಕ ಬೈರಪ್ಪ, ರೇಷ್ಮೆಗೂಡು ಮಾರುಕಟ್ಟೆಯ ಉಪ ನಿರ್ದೇಶಕ ಸುಭಾಶ್‌ ಬಿ.ಸಾತೇನಹಳ್ಳಿ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರೈತ ಹಿತ್ತಲಹಳ್ಳಿ ಗೋಪಾಲಗೌಡ, ಎಚ್‌.ಕೆ.ಸುರೇಶ್‌ ಇನ್ನಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ