ಆ್ಯಪ್ನಗರ

ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ಚುರುಕು

ಕೃಷಿ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿಅಭಿವೃದ್ಧಿಪಡಿಸಿರುವ ಮೊಬೈಲ್‌ ಆ್ಯಪ್‌ ಮೂಲಕ ಸೆ.1ರಿಂದ ಹಮ್ಮಿಕೊಂಡಿರುವ ಬೆಳೆ ಸಮೀಕ್ಷೆ ಕಾರ್ಯ ಜಿಲ್ಲೆಯಾದ್ಯಂತ ಚುರುಕುಗೊಂಡಿದೆ.

Vijaya Karnataka 10 Sep 2019, 5:00 am
ಸಮೀಕ್ಷೆಗೆ 25 ಪರಿಣಿತ ತರಬೇತುದಾರರು, 856 ಸಮೀಕ್ಷೆಗಾರರಿಗೆ ತರಬೇತಿ
Vijaya Karnataka Web 9CBPK1_10

ಎಂ.ಕೃಷ್ಣಪ್ಪ ಕೆಎನ್‌ಹಳ್ಳಿ
ಚಿಕ್ಕಬಳ್ಳಾಪುರ:
ಕೃಷಿ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿಅಭಿವೃದ್ಧಿಪಡಿಸಿರುವ ಮೊಬೈಲ್‌ ಆ್ಯಪ್‌ ಮೂಲಕ ಸೆ.1ರಿಂದ ಹಮ್ಮಿಕೊಂಡಿರುವ ಬೆಳೆ ಸಮೀಕ್ಷೆ ಕಾರ್ಯ ಜಿಲ್ಲೆಯಾದ್ಯಂತ ಚುರುಕುಗೊಂಡಿದೆ.

ಜಿಲ್ಲೆಯ 6 ತಾಲೂಕುಗಳಲ್ಲಿನಡೆಯುವ ಈ ಸಮೀಕ್ಷೆಗಾಗಿ ಜಿಲ್ಲೆಯಲ್ಲಿಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆ ಸೇರಿದಂತೆ 220 ಸರಕಾರಿ ಅಧಿಕಾರಿಗಳನ್ನು ಮೇಲ್ವಿಚಾರಕರಾಗಿ ನಿಯೋಜಿಸಲಾಗಿದೆ. ಇವರು ಬೆಳೆ ಸಮೀಕ್ಷೆದಾರರು ಸಂಗ್ರಹಿಸಿದ ಮಾಹಿತಿಯನ್ನು ಪರಿಶೀಲಿಸಿ ದೃಢೀಕರಿಸಿ ಖಾತರಿ ಪಡಿಸಿಕೊಳ್ಳುತ್ತಾರೆ. ಉಭಯ ಇಲಾಖೆಗಳ ಜಂಟಿ ಸಹಯೋಗದ ಈ ಕಾರ್ಯಕ್ಕಾಗಿ 25 ಪರಿಣಿತ ತರಬೇತುದಾರರು ಮತ್ತು 856 ಸಮೀಕ್ಷೆಗಾರರಿಗೆ ತರಬೇತಿ ನೀಡಲಾಗಿದೆ. ತಾಲ್ಲೂಕು ಮಟ್ಟದ 18 ಅಧಿಕಾರಿಗಳನ್ನು ಗುಣಮಟ್ಟ ಪರಿವೀಕ್ಷಕರಾಗಿ ಆಯ್ಕೆ ಮಾಡಲಾಗಿದೆ. ಇವರು ಬೆಳೆ ಸಮೀಕ್ಷಾ ಕಾರ್ಯದ ಪ್ರಗತಿ ಉಸ್ತುವಾರಿ ಹಾಗೂ ಗುಣಮಟ್ಟದ ಮಾಹಿತಿ ಸಂಗ್ರಹಣೆ ಬಗ್ಗೆ ಖಚಿತ ಪಡಿಸಿಕೊಳ್ಳಲಿದ್ದಾರೆ.

ಆ್ಯಪ್‌ ಮೂಲಕ ಸಮೀಕ್ಷೆ: ರೈತರು ಬೆಳೆದ ಬೆಳೆಯ ಬಗ್ಗೆ ಪ್ರಾಯೊಗಿಕವಾಗಿ ಕೆಲವು ಗ್ರಾಮಿಣ ಭಾಗದಲ್ಲಿತುಲನೆ ಮಾಡಿದಾಗ ವಾಸ್ತವಕ್ಕೂ, ಅಂದಾಜಿಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿತ್ತು. ಇದನ್ನು ಗಮನಿಸಿದ ಸರಕಾರ ಕಳೆದ ಎರಡು ವರ್ಷಗಳಿಂದ ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮಿಕ್ಷೆ ನಡೆಸುತ್ತಿದೆ. ಈ ವರ್ಷದಿಂದ ವ್ಯವಸ್ಥಿತವಾಗಿ ರಾಜ್ಯದಲ್ಲಿಸಮಿಕ್ಷೆ ನಡೆಸಲು ಕೃಷಿ ಇಲಾಖೆ ತೀರ್ಮಾನಿಸಿದೆ.

ಯಾವ ಸರ್ವೆ ನಂಬರ್‌ ಜಮೀನಿನಲ್ಲಿರೈತ ಯಾವ ಬೆಳೆ ಬೆಳೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಈ ಸಮಿಕ್ಷೆಯಲ್ಲಿದಾಖಲಾಗಲಿದೆ. ಈ ಮಾಹಿತಿ ಸರಕಾರಕ್ಕೆ ಸುಳ್ಳು ಮಾಹಿತಿ ಕೊಡುವುದನ್ನು ತಡೆಯುವ ಜತೆಗೆ ಬಿತ್ತನೆ ಗುರಿ ಸಾಧನೆ, ಬೆಳೆ ಹಾನಿ, ಬೆಳೆ ವಿಮೆ, ಬರ ಮುಂತಾದ ವಿಚಾರಗಳಲ್ಲಿಸರಕಾರ ಬಳಸಿಕೊಳ್ಳಲು ಈ ಸಮೀಕ್ಷೆ ನೆರವಿಗೆ ಬರಲಿದೆ.

ನಿಖರ ಮಾಹಿತಿ ಕಲೆ: ರಾಜ್ಯ ಸರಕಾರಗಳು ಬರ, ಅತಿವೃಷ್ಟಿ ಸಂದರ್ಭದಲ್ಲಿಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸುವುದು ವಾಡಿಕೆ. ಆಗ ವಾಸ್ತಕ್ಕೂ ಹಾಗೂ ಅಂಕಿ ಅಂಶಗಳಿಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿರುವುದರಿಂದ ಆಡಳಿತಾತ್ಮಕ ತೊಂದರೆ ಉಂಟಾಗಿ ಪರಿಹಾರ ಬಿಡುಗಡೆ ತಡವಾಗುವುದು ಸೇರಿದಂತೆ ಅನೇಕ ಸಮಸ್ಯೆ ಎದುರಾಗುತ್ತಿವೆ. ಆದ್ದರಿಂದ ನಿಖರ ಮಾಹಿತಿ ಕಲೆ ಹಾಕಲು ಇಲಾಖೆ ಈ ಆ್ಯಪ್‌ ಮೊರೆ ಹೋಗಲಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ.

ಪರಿಹಾರ ವಿತರಣೆಗೆ ಅನುಕೂಲ: ರೈತರು ಯಾವ ಬೆಳೆಯನ್ನು ಎಷ್ಟು ಎಕರೆ ಪ್ರದೇಶದಲ್ಲಿಬೆಳೆದಿದ್ದಾರೆ. ಬರ, ನೆರೆಯಂತಹ ಪ್ರಕೃತಿ ವಿಕೋಪದಲ್ಲಿಎಷ್ಟು ಪ್ರದೇಶದಲ್ಲಿಯಾವೆಲ್ಲಬೆಳೆಗಳು ನಷ್ಟವಾಗಿವೆ ಎಂಬ ಮಾಹಿತಿಯನ್ನು ನಿಖರವಾಗಿ ಆ್ಯಪ್‌ ಮೂಲಕ ಪಡೆದುಕೊಳ್ಳಬಹುದು. ಪರಿಹಾರ ಕೋರಿ ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಲು ಹಾಗೂ ಪರಿಹಾರ ಬಿಡುಗಡೆ ನಂತರ ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಿಸಲು ಈ ಸಮಿಕ್ಷೆ ಅನುಕೂಲವಾಗಲಿದೆ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.

2 ಲಕ್ಷ ಪ್ಲಾಟ್‌ ಸಮೀಕ್ಷೆ
ಜಿಲ್ಲೆಯಲ್ಲಿಒಟ್ಟು 6.42 ಲಕ್ಷ ಪ್ಲಾಟ್‌ಗಳ ಸಮೀಕ್ಷೆ ನಡೆಸಬೇಕಿದೆ. ಆ ಪೈಕಿ ಸೆ.1ರಿಂದ ಈವರೆಗೆ ಸುಮಾರು 2 ಲಕ್ಷ ಪ್ಲಾಟ್‌ಗಳ ಸಮೀಕ್ಷೆ ಕಾರ್ಯ ನಡೆದು, ದತ್ತಾಂಶವನ್ನು ಮೊಬೈಲ್‌ ಆ್ಯಪ್‌ ಮೂಲಕ ಅಪ್ಲೋಡ್‌ ಮಾಡಲಾಗಿದೆ. ಆ ದತ್ತಾಂಶದ ಪರಿಶೀಲನೆ ಕಾರ್ಯ ನಡೆದಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿಕ್ಕಬಳ್ಳಾಪುರ ಜಿಲ್ಲೆಯು ಸಮೀಕ್ಷೆ ಕಾರ್ಯದಲ್ಲಿಮುಂದಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ಮಾಡುವುದರಿಂದ ಸಾಕಷ್ಟು ಪ್ರಯೋಜನವಿದೆ. ಹಾಗಾಗಿ ರೈತರು ಸಮೀಕ್ಷೆದಾರರೊಂದಿಗೆ ಸಹಕರಿಸಿ ನಿಖರ ಮಾಹಿತಿ ನೀಡಬೇಕು.
-ರೂಪಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ