ಆ್ಯಪ್ನಗರ

ಕೆಂಪು ಈರುಳ್ಳಿಗೆ ರಫ್ತು ನಿಷೇಧದ ಒಡೆತ

ಕೇಂದ್ರ ಸರಕಾರ ಈರುಳ್ಳಿ ರಫ್ತಿಗೆ ನಿಷೇಧ ವಿಧಿಸಿರುವುದರಿಂದ ತಾಲೂಕಿನಲ್ಲಿಹೆಚ್ಚಾಗಿ ಬೆಳೆಯುವ ಗುಲಾಬಿ ಈರುಳ್ಳಿ ಬೆಳೆಗಾರರು ಬೀದಿಗೆ ಬೀಳುವಂತಾಗಿದೆ.

Vijaya Karnataka 6 Oct 2019, 5:00 am
ಸ್ಥಳೀಯವಾಗಿ ಬೇಡಿಕೆ ಇಲ್ಲ, ವಿದೇಶಗಳಿಗೆ ರಫ್ತು ಮಾಡುವಂತಿಲ್ಲ!
Vijaya Karnataka Web 20484BPL1_10

ಬಾಗೇಪಲ್ಲಿ:
ಕೇಂದ್ರ ಸರಕಾರ ಈರುಳ್ಳಿ ರಫ್ತಿಗೆ ನಿಷೇಧ ವಿಧಿಸಿರುವುದರಿಂದ ತಾಲೂಕಿನಲ್ಲಿಹೆಚ್ಚಾಗಿ ಬೆಳೆಯುವ ಗುಲಾಬಿ ಈರುಳ್ಳಿ ಬೆಳೆಗಾರರು ಬೀದಿಗೆ ಬೀಳುವಂತಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಿಟ್ಟರೆ ಬಾಗೇಪಲ್ಲಿತಾಲೂಕಿನಲ್ಲಿ ಶೇ. 40 ರಷ್ಟು ರೈತರು ಗುಲಾಬಿ ಈರುಳ್ಳಿ ಬೆಳೆಯುತ್ತಾರೆ. ಈ ಭಾಗದ ಮಣ್ಣಿನ ಗುಣಕ್ಕೆ ಒಳ್ಳೆಯ ಇಳುವರಿ ಬರುತ್ತದೆ. ಈ ರುಳ್ಳಿಗೆ ಕರ್ನಾಟಕ ರಾಜ್ಯ ಸೇರಿದಂತೆ ದೇಶದ ಯಾವ ರಾಜ್ಯದಲ್ಲಿಅಷ್ಟೇನೂ ಬೆಡಿಕೆ ಇಲ್ಲ. ಆದ್ದರಿಂದ ಬೇಡಿಕೆಯುಳ್ಳ ದೇಶಗಳಾದ ಮಲೇಷಿಯಾ, ಶ್ರೀಲಂಕಾ ದೇಶಗಳಿಗೆ ರಫ್ತಾಗುತ್ತದೆ. ಆದರೆ, ಪ್ರಸ್ತುತ ಏರಿಕೆಯಾಗಿರುವ ಈರುಳ್ಳಿ ಬೆಲೆ ಏರಿಕೆ ನಿಯಂತ್ರಣ ಉದ್ದೇಶದಿಂದ ಕೇಂದ್ರ ಸರಕಾರ ಈರುಳ್ಳಿ ರಫ್ತಿಗೆ ನಿಷೇಧ ಹೇರಿಕೆಯಿಂದ ಬೆಳೆಗಾರರು ತಲ್ಲಣಗೊಂಡಿದ್ದಾರೆ.

ಖರೀದಿಗೆ ಒಲವು ತೋರದ ವ್ಯಾಪಾರಸ್ಥರು: ಬಾಗೇಪಲ್ಲಿತಾಲೂಕಿನಲ್ಲಿಬೆಳೆಯುವ ಗುಲಾಬಿ ಈರುಳ್ಳಿಗೆ ರಾಜ್ಯದ ಯಾವುದೇ ಭಾಗದಲ್ಲೂವಿಶೇಷ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಲ್ಲ, ರೈತರ ಜಮೀನಿಗೆ ವ್ಯಾಪಾರಸ್ಥರು ತೆರಳಿ, ಅಲ್ಲಿಯೇ ಖರೀದಿಸಿ ನೇರ ವಿದೇಶಗಳಿಗೆ ರಫ್ತು ಮಾಡುತ್ತಾರೆ. ಆದರೆ ರಫ್ತು ನಿಷೇದಿಂದ ವ್ಯಾಪಾರಸ್ಥರು ಇತ್ತ ಸುಳಿಯುತ್ತಿಲ್ಲ.

ರಫ್ತಿಗೆ ಅವಕಾಶ ಕಲ್ಪಿಸಿ: ಬಾಗೇಪಲ್ಲಿ, ಚಿಂತಾಮಣಿ ತಾಲೂಕುಗಳ ಗುಲಾಬಿ ಈರುಳ್ಳಿ ಬಂಪರ್‌ ಬೆಳೆ ಬಂದಿದ್ದು, ಕಟಾವು ಮಾಡಿಟ್ಟಿದ್ದು, ಕೊಳ್ಳುವವರಿಲ್ಲದೆ ಕೊಳೆಯುವ ಹಂತ ತಲುಪುತ್ತಿದೆ. ಈರುಳ್ಳಿ ರಪ್ತು ನಿಷೇಧದ ತಿರ್ಮಾನವನ್ನು ಕೇಂದ್ರ ಸರಕಾರ ಹಿಂಪಡೆಯದಿದ್ದರೆ ಬೆಳೆಗಾರರು ಬೀದಿಗೆ ಬೀಳಬೇಕಾಗುತ್ತದೆ.

ಈ ಬಾರಿ ಗುಲಾಬಿ ಈರುಳ್ಳಿ ಬೆಳೆಗೆ ಅನುಕೂಲಕರ ವಾತಾವರಣವಿದ್ದು, ಉತ್ತಮ ಇಳುವರಿ ಬಂದಿದೆ. ಶೇ. 40ರಷ್ಟು ರೈತರು ಬೆಳೆ ಕಟಾವು ಮಾಡಿ ಮಾರಾಟಕ್ಕಾಗಿ ಕಾಯುತ್ತಿದ್ದಾರೆ. ಆದರೆ ಈರುಳ್ಳಿ ರಫ್ತು ನಿಷೇಧದಿಂದ ವ್ಯಾಪಾರಸ್ಥರು ಖರೀದಿಗೆ ಮುಂದಾಗುತ್ತಿಲ್ಲ. ಸರಕಾರವೇ ಗುಲಾಬಿ ಈರುಳ್ಳಿ ಖರೀದಿಸಿ, ರೈತರ ನೆರವಿಗೆ ನಿಲ್ಲಬೇಕು.
-ಅಕ್ಕುಲಪ್ಪ ರೈತ, ಪಟ್ರವಾರಿಪಲ್ಲಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ