ಆ್ಯಪ್ನಗರ

ಲಾಕ್‌ಡೌನ್‌ ಪರಿಣಾಮ: ಚಿಕ್ಕಬಳ್ಳಾಪುರದಲ್ಲಿ ದನಕರುಗಳಿಗೆ ಮೇವಾದ ಹೂ ಕೋಸು!

ಕೊರೊನಾ ಎಫೆಕ್ಟ್‌ನಿಂದ ಬೇಸಿಗೆಯಲ್ಲಿ ನೀರಿನ ಅಭಾವದ ನಡುವೆ ರೈತ ಬೆವರು ಸುರಿಸಿ ಬೆಳೆದ ಹೂ, ಹಣ್ಣು, ತರಕಾರಿ ತೋಟದಲ್ಲಿ ಕೊಳೆಯುವಂತಾಗಿದ್ದು, ಸಾವಿರಾರು ಕೋಟಿ ನಷ್ಟ ಅನುಭವಿಸುವಂತಾಗಿದೆ.

Vijaya Karnataka Web 3 Apr 2020, 3:55 pm
ಚಿಕ್ಕಬಳ್ಳಾಪುರ: ತಾಲೂಕಿನ ನಲ್ಲಕದಿರೇನಹಳ್ಳಿ ರೈತ ಯರ್ರಪ್ಪ ಅವರು ತಮ್ಮ ತೋಟದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಸಮೃದ್ಧಿಯಾಗಿ ಬೆಳೆದಿದ್ದ ಹೂಕೋಸಿಗೆ ಇದೀಗ ಬೆಲೆ ಇಲ್ಲದೇ ಕೈ ಸುಟ್ಟುಕೊಂಡಿದ್ದಾರೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ರೈತನಿಗೆ ನಿರಾಸೆ ಮೂಡಿಸಿದೆ. ಸಾವಯುವ ಕೃಷಿ ಮಾಡಿ ಬೆಳೆದಿದ್ದ ಹೂ ಕೋಸನ್ನು ತೋಟದಲ್ಲಿ ಕೊಳೆಯಲು ಬಿಟ್ಟು, ದನ ಕರುಗಳ ಮೇವಿಗೆ ಬಳಸಿಕೊಳ್ಳಲು ಮುಂದಾಗಿದ್ದಾರೆ.
Vijaya Karnataka Web cauliflower agriculture
ಚಿಕ್ಕಬಳ್ಳಾಪುರ ತಾಲೂಕಿನ ನಲ್ಲಕದಿರೇನಹಳ್ಳಿ ರೈತ ಯರ್ರಪ್ಪ ಅವರು ಬೆಳೆದ ಹೂಕೋಸು ಖರೀದಿಸುವವರಿಲ್ಲದೇ ಕೊಳೆಯುತ್ತಿದೆ.


ಟೊಮೇಟೊಗೂ ಇದೇ ಗತಿ
ಒಂದೂವರೆ ಎಕರೆಯಲ್ಲಿ ಟೊಮೇಟೊ ಬೆಳೆದಿದ್ದು, ಸದ್ಯ ಮಾರುಕಟ್ಟೆಯಲ್ಲಿ 15 ಕೆ.ಜಿ ಬಾಕ್ಸ್‌ 70 ರೂ.ಗೆ ಮಾರಾಟವಾಗುತ್ತಿದೆ. ಟೊಮೇಟೊ ಬಿಡಿಸಲು ಕೂಲಿ, ಸಾಗಾಟದ ಖರ್ಚು, ಮಾರುಕಟ್ಟೆ ಸುಂಕಕ್ಕೆ ಬರುವ ಹಣ ಸಾಲದೇ ತಿಪ್ಪೆಗೆ ಎಸೆದಿದ್ದೇವೆ ಎಂದು ಅವರು ಅಳಲು ತೋಡಿಕೊಂಡರು.

ಇದು ಒಬ್ಬರ ಕಥೆಯಲ್ಲ: ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರು ಬೇಸಿಗೆಯಲ್ಲಿ, ಟ್ಯಾಂಕರ್‌ ಮೂಲಕ ನೀರುಣಿಸಿ ಬೆಳೆದ ಬೆಳೆಗಳು ಸದ್ಯ ಮಣ್ಣು ಪಾಲಾಗಿದೆ. ಸರಕಾರ ರೈತರ ಸಂಕಷ್ಟಕ್ಕೆ ನೆರವಾಗಬೇಕು ಎಂಬುದು ರೈತರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ