ಆ್ಯಪ್ನಗರ

ಮಳೆ ನೀರಲ್ಲಿಮುದುಡಿ ಹೋಗುವ ಹೂವಿನ ವ್ಯಾಪಾರ

ನಗರದ ತರಕಾರಿ ಮಾರುಕಟ್ಟೆಯ ಮಹಡಿಯಲ್ಲಿನಗರಸಭೆಯವರು ಸಗಟು ಹೂವಿನ ವ್ಯಾಪಾರಸ್ಥರಿಗಾಗಿ ಪ್ಲಾಟ್‌ಗಳ ನಿರ್ಮಾಣ ಮಾಡಿದ್ದು, ಅವು ಅವೈಜ್ಞಾನಿಕವಾಗಿ ನಿರ್ಮಾಣವಾಗಿವೆ. ಮಳೆಗಾಲದಲ್ಲಿಪ್ಲಾಟ್‌ಗಳ ಒಳಗೆ ಮಳೆ ನೀರು ಹರಿಯುತ್ತದೆ. ಇದರಿಂದ ಹೂವಿನ ವಹಿವಾಟು ಮಾಡಲು ತೊಂದರೆಯಾಗುತ್ತಿದೆ ಎಂದು ಸಗಟು ಹೂವಿನ ವ್ಯಾಪಾರಸ್ಥರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

Vijaya Karnataka 18 Sep 2019, 4:40 pm
ಮಾರ್ಕೆಟ್‌ ಅಂಕಣಕ್ಕೆ ನುಗ್ಗುವ ನೀರು | ಚಾವಣಿಯೂ ಹಾಳಾಗಿ ಸೋರುವ ನೀರು | ಗ್ರಾಹಕರಿಲ್ಲ, ವ್ಯಾಪಾರಿಗಳೂ ಬರುತ್ತಿಲ್ಲ
Vijaya Karnataka Web 17GBD-1_10

ದೇವಿಮಂಜುನಾಥ್‌
ಗೌರಿಬಿದನೂರು:
ನಗರದ ತರಕಾರಿ ಮಾರುಕಟ್ಟೆಯ ಮಹಡಿಯಲ್ಲಿನಗರಸಭೆಯವರು ಸಗಟು ಹೂವಿನ ವ್ಯಾಪಾರಸ್ಥರಿಗಾಗಿ ಪ್ಲಾಟ್‌ಗಳ ನಿರ್ಮಾಣ ಮಾಡಿದ್ದು, ಅವು ಅವೈಜ್ಞಾನಿಕವಾಗಿ ನಿರ್ಮಾಣವಾಗಿವೆ. ಮಳೆಗಾಲದಲ್ಲಿಪ್ಲಾಟ್‌ಗಳ ಒಳಗೆ ಮಳೆ ನೀರು ಹರಿಯುತ್ತದೆ. ಇದರಿಂದ ಹೂವಿನ ವಹಿವಾಟು ಮಾಡಲು ತೊಂದರೆಯಾಗುತ್ತಿದೆ ಎಂದು ಸಗಟು ಹೂವಿನ ವ್ಯಾಪಾರಸ್ಥರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪ್ರತಿಯೊಂದು ಪ್ಲಾಟ್‌(ಅಂಕಣ)ಗೆ ಮುಂಗಡ ಹಣವನ್ನು ಪಡೆದುಕೊಂಡು ಬಾಡಿಗೆ ನಿಗದಿಪಡಿಸಲಾಗಿದೆ. ಆದರೆ ಇಲ್ಲಿಯಾವುದೇ ಮೂಲ ಸೌಕರ‍್ಯಗಳಿಲ್ಲದೆ ಪರದಾಡುವಂತಾಗಿದೆ. ಮಳೆಗಾಲದಲ್ಲಿವಹಿವಾಟು ಮಾಡಲಾಗುತ್ತಿಲ್ಲ. ರೈತರು ಹೂವುಗಳನ್ನು ಮಾರುಕಟ್ಟೆಗೆ ತರಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ರೈತರಿಗೂ ವ್ಯಾಪಾರಸ್ಥರಿಗೂ ನಷ್ಟವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ನಗರಭೆ ಅಧಿಕಾರಿಗಳು ಹೂವಿನ ಮಾರುಕಟ್ಟೆಗೆ ಮೂಲ ಸೌಕರ‍್ಯ ನೀಡಿ ಮೇಲ್ಚಾವಣೆಯನ್ನು ಸರಿಪಡಿಸಬೇಕಿದೆ ಎಂದು ಸಗಟು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.

ರೈತರು ವಿವಿಧ ಗ್ರಾಮಗಳಿಂದ ಬೆಳೆದ ಹೂಗಳನ್ನು ಮಾರುಕಟ್ಟೆಗೆ ಕಷ್ಟಪಟ್ಟು ತರುತ್ತಾರೆ. ಆದರೆ, ಮಳೆಗಾಲದಲ್ಲಿಮಾರುಕಟ್ಟೆಯ ಮೇಲ್ಚಾವಣೆಯ ಅವೈಜ್ಞಾನಿಕ ನಿರ್ಮಾಣದಿಂದ ನೀರು ಕೆಳಗೆ ಸುರಿಯುತ್ತದೆ. ಇದರಿಂದ ಹೂವುಗಳು ನೀರಲ್ಲಿನೆಂದು ಹಾಳಾಗುತ್ತಿವೆ. ನಗರಸಭೆ ಕ್ರಮಕ್ಕೆ ಮುಂದಾಗಬೇಕಿದೆ. ಇದರಿಂದ ರೈತರಿಗೂ ವ್ಯಾಪಾರಸ್ಥರಿಗೂ ಮತ್ತು ಗ್ರಾಹಕರಿಗೂ ಅನುಕೂಲವಾಗಲಿದೆ.
-ಬಾಬು, ಹೂವಿನ ಸಗಟು ವ್ಯಾಪಾರಿ

ಇರುವ ಅಲ್ಪಸ್ವಲ್ಪ ನೀರಲ್ಲೇ ಹೂವು ಬೆಳೆದು ಮಾರುಕಟ್ಟೆಗೆ ತಂದರೆ ಮಳೆಗಾಲದಲ್ಲಿಹೂವಿನ ಮೂಟೆಗಳು ನೆಂದು ಅತಿಯಾದ ಭಾರವಾಗುತ್ತದೆ. ವ್ಯಾಪಾರಸ್ಥರು ನೆಂದ ಹೂವು ನಮಗೆ ಬೇಡ ಎನ್ನುತ್ತಾರೆ. ಮಾರುಕಟ್ಟೆ ವ್ಯವಸ್ಥಿತವಾಗಿ ನಿರ್ಮಾಣವಾಗಿದ್ದರೆ ರೈತರಿಗೆ ಈ ಅವಸ್ಥೆ ಬರುತ್ತಿರಲಿಲ್ಲ.
-ಲೋಕೇಶ್‌ ಗೌಡ, ರೈತ ಗುಂಡಾಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ