ಆ್ಯಪ್ನಗರ

ವಿಶೇಷ ಕಾರ್ಯನಿರ್ವಹಣೆಗೆ ನಾಲ್ವರು ವೈದ್ಯರ ನಿಯೋಜನೆ

ಜಿಲ್ಲೆಯ ಚಿಂತಾಮಣಿ ನಗರದ ಹೂವಿನಪೇಟೆಯ ಗಂಗಮ್ಮ ದೇವಸ್ಥಾನದ ಪ್ರಸಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ಕಾರ್ಯನಿರ್ವಹಣೆಗೆ ನಾಲ್ವರ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ.

Vijaya Karnataka 29 Jan 2019, 5:00 am
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ಹೂವಿನಪೇಟೆಯ ಗಂಗಮ್ಮ ದೇವಸ್ಥಾನದ ಪ್ರಸಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ಕಾರ್ಯನಿರ್ವಹಣೆಗೆ ನಾಲ್ವರ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ.
Vijaya Karnataka Web four doctors assignment for special functioning
ವಿಶೇಷ ಕಾರ್ಯನಿರ್ವಹಣೆಗೆ ನಾಲ್ವರು ವೈದ್ಯರ ನಿಯೋಜನೆ


ಜ.25ರಂದು ಸಂಜೆ 7 ಗಂಟೆಗೆ ಸುಮಾರಿನಲ್ಲಿ ಪ್ರಸಾದ ಸ್ವೀಕರಿಸಿದ್ದ ಒಟ್ಟು 30 ರಿಂದ 40 ಜನರ ಪೈಕಿ 17 ಮಂದಿ ಅಸ್ವತ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ ಒಟ್ಟು 5 ಜನ ಮಕ್ಕಳು ಹಾಗೂ 12 ಜನ ವಯಸ್ಕರಾಗಿದ್ದರು. ಇವರಲ್ಲಿ ಕವಿತಾ ಮತ್ತು ಸರಸ್ವತಮ್ಮ ಅವರು ಮೃತಪಟ್ಟಿರುತ್ತಾರೆ. ಉಳಿದಂತೆ ಅಸ್ವಸ್ಥರಾಗಿರುವರನ್ನು ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇವರಲ್ಲಿ ಐವರು ರೋಗಿಗಳು ಆರ್‌.ಎಲ್‌.ಜಾಲಪ್ಪ ವೈದ್ಯಕೀಯ ಆಸ್ಪತ್ರೆ ಕೋಲಾರ, ಇಬ್ಬರು ಖಾಸಗಿ ಡೆಕ್ಕನ್‌ ಆಸ್ಪತ್ರೆ ಚಿಂತಾಮಣಿ, ಒಬ್ಬರು ಸಿಲಿಕಾನ್‌ ಸಿಟಿ ಆಸ್ಪತ್ರೆ, ಹೊಸಕೋಟೆ ಹಾಗೂ ಇನ್ನೊಬ್ಬರು ಸಾರ್ವಜನಿಕ ಆಸ್ಪತ್ರೆ, ಚಿಂತಾಮಣಿಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.

ಈ ಬಗ್ಗೆ ಆರೋಗ್ಯ ಇಲಾಖೆ ರೋಗಿಗಳ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಚಿಂತಾಮಣಿ ನಗರದ ಗಂಗಮ್ಮ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ವಾಂತಿ ಭೇದಿ ಹೊಟ್ಟೆ ನೋವು ಇತ್ಯಾದಿ ರೋಗಲಕ್ಷ ಣವಿರುವ ಸಾರ್ವಜನಿಕರು ತಾಲೂಕು ಆಸ್ಪತ್ರೆಯಲ್ಲಿ ಕೂಡಲೇ ದಾಖಲಾಗುವುದು. ಇದರ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಅಲ್ಲದೆ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇದಕ್ಕಾಗಿ ವಿಶೇಷ ಕಾರ್ಯನಿರ್ವಹಿಸಲು ನಾಲ್ವರು ವೈದ್ಯರನ್ನು ನಿಯೋಜಿಸಿ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅದಲ್ಲದೆ, 2 ಆಂಬ್ಯುಲೆನ್ಸ್‌ಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹೆಚ್ಚುವರಿಯಾಗಿ ಸಾರ್ವಜನಿಕ ಆಸ್ಪತ್ರೆ ಚಿಂತಾಮಣಿಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ.ಬಿ.ಎಂ.ರವಿಶಂಕರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ