ಆ್ಯಪ್ನಗರ

ಸಹಕಾರವಿದ್ದಲ್ಲಿಕಾರ್ಯ ಸಿದ್ಧಿ

ಪ್ರಜೆಗಳ ಜತೆಗೆ ಪ್ರಜಾಪ್ರತಿನಿಧಿಗಳು ಕೈ ಜೋಡಿಸಿದಾಗ ಉದ್ದೇಶಿತ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಗು ತ್ತದೆ ಎಂದು ಪುದುಚೇರಿ ರಾಜ್ಯದ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

Vijaya Karnataka 6 Oct 2019, 5:00 am
ಚಿಕ್ಕಬಳ್ಳಾಪುರ: ಪ್ರಜೆಗಳ ಜತೆಗೆ ಪ್ರಜಾಪ್ರತಿನಿಧಿಗಳು ಕೈ ಜೋಡಿಸಿದಾಗ ಉದ್ದೇಶಿತ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಗು ತ್ತದೆ ಎಂದು ಪುದುಚೇರಿ ರಾಜ್ಯದ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
Vijaya Karnataka Web if co operative work will done
ಸಹಕಾರವಿದ್ದಲ್ಲಿಕಾರ್ಯ ಸಿದ್ಧಿ

ತಾಲೂಕಿನ ಸತ್ಯಸಾಯಿ ಗ್ರಾಮದ ಹೃದಯಮಂದಿರದ ಯಾಗಮಂಟಪ ದಲ್ಲಿನಡೆಯುತ್ತಿರುವ ನವರಾತ್ರಿ ಮಹೋತ್ಸವದ 7ನೇ ದಿನವಾದ ಶನಿವಾರ ಕಾಳರಾತ್ರಿ ಮಾತೆಯ ಆರಾಧನೆ, ದುರ್ಗಾಪೂಜೆ, ಮಹಾ ರುದ್ರ ಯಾಗಗಳ ಸಮಾ ರಂಭ ದಲ್ಲಿಮಾತನಾಡಿದರು. ಅಭಿವೃದ್ಧಿಗೆ ಸಹಕಾರಿ: ನಾನು ಪ್ರತಿನಿಧಿಸುತ್ತಿರುವ ಪುದುಚೇರಿ ರಾಜ್ಯವು ದಕ್ಷಿಣ ಭಾರತದಲ್ಲಿಅತ್ಯಂತ ಚಿಕ್ಕ ರಾಜ್ಯವಾಗಿದೆ. ನಾಡಿನ ಸರ್ವಾಂ ಗೀಣ ಅಭಿವೃದ್ಧಿಗೆ ದಾರಿಯನ್ನು ಹುಡುಕುವಾಗ ಭರವಸೆಯ ಬೆಳಕಾಗಿ ದೊರಕಿದ್ದು ಸತ್ಯಸಾಯಿ ಸಂಸ್ಥೆ. ಅದರ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿನಮ್ಮ ರಾಜ್ಯವು ಮುನ್ನಡೆಯಲು ಸಾಧ್ಯವಾಗಿದೆ ಎಂದರು. ಪುದುಚೇರಿ ಅಭಾರಿ: ಸತ್ಯಸಾಯಿ ಸಂಸ್ಥೆ ಮಾನವ ಸೇವೆಯನ್ನೇ ಮಾಧವ ಸೇವೆ ಯನ್ನಾಗಿ ಮಾಡಿಕೊಂಡಿದೆ. ನಮ್ಮ ರಾಜ್ಯದ ಜನತೆ ಶಿಕ್ಷಣ ಸಂಸ್ಥೆಗಳನ್ನು ಬಯ ಸಿತು. ಅದನ್ನು ಬಾಬಾ ರವರ ಸಂಸ್ಥೆಯು ಉದಾರವಾಗಿ ನೀಡಿ ಸರ್ವವೂ ಉಚಿತ ವಾಗಿ ದೊರೆಯುವಂತೆ ಮಾಡಿದೆ. ಇದರಿಂದ ಈ ಸಂಸ್ಥೆಗೆ ಪುದುಚೇರಿ ಜನತೆ ಸದಾ ಆಭಾರಿಯಾಗಿದ್ದಾರೆ. ಅಲ್ಲದೇ, ಸಂಸ್ಥೆ ಆದರ್ಶವನ್ನು ಇತರರೂ ಪಾಲಿಸಿ ದರೆ ನೆಮ್ಮದಿಯ ನಾಳೆಯನ್ನು ಭರವಸೆ ಯಿಂದ ನಿರೀಕ್ಷಿಸಬಹುದು ಎಂದರು. ಆಚರಣೆಯ ಮಹತ್ವ ಅರಿಯಿರಿ: ಸಮಾರಂಭದ ಸಾನ್ನಿಧ್ಯವಹಿಸಿದ್ದ ಸದ್ಗುರು ಮಧುಸೂದನ ಸಾಯಿ ಮಾತನಾಡಿ, ಅನ್ನ, ಅಕ್ಷರ, ಆರೋಗ್ಯ, ಆಯುಷ್ಯ ಗಳನ್ನು ಪರಿಪಾಲಿಸುವ ಲೋಕಮಾತೆ ಯರೇ ದುರ್ಗಾ, ಲಕ್ಷಿತ್ರ್ಮ, ಸರಸ್ವತಿಯರು. ಈ ಮಾತೆಯರನ್ನು ಯಾಗ ಸಂದರ್ಭದಲ್ಲಿಸ್ಮರಿಸುವುದರಿಂದ ಪಂಚೇಂದ್ರಿಯಗಳು ಕಾರ್ಯಶೀಲವಾಗಿರುತ್ತವೆ. ಆದುದ ರಿಂದ ಆಚರಣೆಯ ಮಹತ್ವವನ್ನರಿತು ಮನನ ಮಾಡುತ್ತಾ ಜೀವನದಲ್ಲಿಅಳ ವಡಿಸಿದರೆ ಲೋಕದಲ್ಲಿರುವ ಎಲ್ಲಜೀವಿ ಗಳಿಗೂ ಒಳಿತಾಗುತ್ತದೆ. ಅಲ್ಲದೆ ನಾವು ಪ್ರಾರ್ಥಿಸುವ ಸಾರ್ವತ್ರಿಕ ಪ್ರಾರ್ಥನೆಗೆ ಅರ್ಥ ಬರುತ್ತದೆ. ಹಾಗಾಗಿ ಯಾವುದೇ ಕಾರ್ಯ, ಕರ್ಮ, ಕ್ರಿಯೆಗಳ ಅಂತ ರಾರ್ಥವನ್ನು ಅರಿತು ಅದರಂತೆ ನಡೆ ಯಬೇಕು ಎಂದು ತಿಳಿಸಿದರು. ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯ ಗುಲ್ಬರ್ಗಾದ ಕುಲಾಧಿಪತಿ ಬಿ.ಎನ್‌.ನರಸಿಂಹಮೂರ್ತಿ ಮಾತ ನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ