ಆ್ಯಪ್ನಗರ

ಜಿಲ್ಲಾ ಮಟ್ಟದ ವಾಲಿಬಾಲ್‌ ಪಂದ್ಯಾವಳಿ ಜು.6, 7ಕ್ಕೆ

ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಯುವಜನತೆಯನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಧ್ಯೇಯದೊಂದಿಗೆ ಆವಳಿ ಜಿಲ್ಲೆಗಳ ಜಿಲ್ಲಾ ಮಟ್ಟದ ವಾಲಿಬಾಲ್‌ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವ ಶಕ್ತಿ ರಾಜ್ಯಾಧ್ಯಕ್ಷ ಶಿವಪ್ರಕಾಶ ರೆಡ್ಡಿ ತಿಳಿಸಿದರು.

Vijaya Karnataka 27 May 2019, 5:00 am
ಚಿಂತಾಮಣಿ ಗ್ರಾಮಾಂತರ: ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಯುವಜನತೆಯನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಧ್ಯೇಯದೊಂದಿಗೆ ಆವಳಿ ಜಿಲ್ಲೆಗಳ ಜಿಲ್ಲಾ ಮಟ್ಟದ ವಾಲಿಬಾಲ್‌ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವ ಶಕ್ತಿ ರಾಜ್ಯಾಧ್ಯಕ್ಷ ಶಿವಪ್ರಕಾಶ ರೆಡ್ಡಿ ತಿಳಿಸಿದರು.
Vijaya Karnataka Web july 6th 7th district level volleyball tournament
ಜಿಲ್ಲಾ ಮಟ್ಟದ ವಾಲಿಬಾಲ್‌ ಪಂದ್ಯಾವಳಿ ಜು.6, 7ಕ್ಕೆ


ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಚಿಲಕಲನೇರ್ಪು ಅಕ್ಷ ರ ಶಾಲೆಯ ಆವರಣದಲ್ಲಿ ಜು.6 ಮತ್ತು 7ರಂದು ಜಿಲ್ಲಾ ಮಟ್ಟದ ವಾಲಿಬಾಲ್‌ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಹುಮಾನವಾಗಿ 50 ಸಾವಿರ ರೂ., ದ್ವೀತಿಯ ಬಹುಮಾನವಾಗಿ 30 ಸಾವಿರ ಹಾಗೂ ತೃತೀಯ ಬಹುಮಾನವಾಗಿ 20ಸಾವಿರ ರೂ. ಜತೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು ಎಂದರು.

ಆಮೆರಿಕದ ರಾಯಲ್‌ ಟೆಕ್ಸಾಸ್‌ ಪ್ರೀಮಿಯರ್‌ ಲೀಗ್‌, ಚಿಲಕಲನೇರ್ಪು ಎಜುಕೇಷನ್‌ ಟ್ರಸ್ಟ್‌ ಮತ್ತು ಯುವಶಕ್ತಿಯ ಜಂಟಿ ಸಹಯೋಗದಲ್ಲಿ ನಡೆಯುವ ಈ ಕ್ರೀಡಾಕೂಟಕ್ಕೆ ಸಂಚಾಲಕರಾಗಿ ಅಕ್ಷ ರ ಶಾಲೆಯ ನಿರಂಜನ್‌ ಮತ್ತು ರಾಘವೇಂದ್ರ, ಯುವಶಕ್ತಿಯ ಬಾಬುರೆಡ್ಡಿ, ಮಂಜುನಾಥ ರೆಡ್ಡಿ ಕಾರ್ಯನಿರ್ವಹಿಸಲಿದ್ದಾರೆ. ಪಂದ್ಯಾವಳಿಯ ಚಿಂತಾಮಣಿ ಸಂಚಾಲಕರಾಗಿ ಯುವಶಕ್ತಿ ತಾಲೂಕು ಪ್ರಧಾನ ಕಾರ್ಯದರ್ಶಿ ನವೀನ್‌ ಮತ್ತು ಕುರುಟಹಳ್ಳಿ ಮಹೇಶ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಅಕ್ಷ ರ ಶಾಲೆಯ ನಿರಂಜನ್‌ ಮಾತನಾಡಿ, ಆರಂಭಿಕ ಹಂತದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ವಾಲಿಬಾಲ್‌ ಪಂದ್ಯಾವಳಿ ನಡೆಯಲಿದ್ದು, ಭವಿಷ್ಯದಲ್ಲಿ ಇಡೀ ಬಯಲುಸೀಮೆಗೆ ವಿಸ್ತರಿಸಲಾಗುವುದು ಎಂದರು.

ಅಕ್ಷ ರ ಶಾಲೆಯ ರಾಘವೇಂದ್ರ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿ ತಂಡ 3 ಸಾವಿರ ರೂ. ನೋಂದಣಿ ಶುಲ್ಕ ತರಬೇಕು. ತಂಡದಿಂದ ಪ್ರತಿಯೊಬ್ಬ ಸದಸ್ಯ ಆವಳಿ ಜಿಲ್ಲೆಯ ನಿವಾಸಿಯಾಗಿರುವುದಕ್ಕೆ ಆಧಾರ್‌ ಅಥವಾ ಸಮಾನಾಂತರ ದಾಖಲೆ ನೀಡಬೇಕು. ಪ್ರತಿ ತಂಡದ 7 ಆಟಗಾರರಿಗೆ ಉಚಿತ ಜೆರ್ಸಿ ಮತ್ತು ಊಟ ನೀಡಲಾಗುವುದು ಎಂದರು.

ಆಸಕ್ತ ತಂಡಗಳ ಪ್ರತಿನಿಧಿ ಮೊ. 88617 31378, 91130 51472, 86182 51145, 97411 66555 ಸಂಪರ್ಕಿಸಬಹುದು ಎಂದು ತಿಳಿಸಿದರು.

ಯುವಶಕ್ತಿಯ ರಾಜ್ಯ ಉಪಾಧ್ಯಕ್ಷ ವಿಜಯ್‌, ರಾಜ್ಯ ಜಂಟಿ ಕಾರ್ಯದರ್ಶಿ ಬಾಬುರೆಡ್ಡಿ, ಜಂಟಿ ಸಂಘಟನಾ ಕಾರ್ಯದರ್ಶಿ ಮಂಜುನಾಥ್‌, ರಾಜ್ಯ ಸಮಿತಿಯ ರಾಘವೇಂದ್ರ, ನವೀನ್‌, ತಾಲೂಕು ಪದಾಧಿಕಾರಿಗಳಾದ ನವೀನ್‌ ವೆಂಕಟಗಿರಿಕೋಟೆ, ಹೆಬ್ಬರಿ ನವೀನ್‌, ಸುಧಾಕರ್‌, ಶ್ರೀನಿವಾಸ, ಹರೀಶ್‌, ಮಹೇಶ್‌ ಸೇರಿದಂತೆ ಮತಿತ್ತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ