ಆ್ಯಪ್ನಗರ

ಭಿಕ್ಷೆ ಬೇಡುತ್ತಿದ್ದ ವೃದ್ಧನಿಗೆ ಮಾಸಾಶನ: ಜಿಲ್ಲಾಧಿಕಾರಿ ಕ್ರಮ

ಚೇಳೂರು ಹೋಬಳಿಯಪುಲ್ಲವಾಂಡ್ಲಪಲ್ಲಿ ಗ್ರಾಮದ ವಾಸಿ 82 ವರ್ಷದ ಕಟ್ಲುಅಕ್ಕುಲಪ್ಪ ಸರಕಾರದ ಮಾಸಾಶನ ದೊರೆಯದೆ ಚೇಳೂರು ಪಟ್ಟಣದಲ್ಲಿ ಅಂಗಡಿಗಳ ಮುಂದೆ ಭಿಕ್ಷೆ ಬೇಡುತ್ತಿದ್ದರು. ಇವರಿಗೆ ಮಾಸಾಶನ ಕೊಡಿಸಲು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಸೂಚಿಸಿದ್ದು, ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

Vijaya Karnataka 26 Apr 2019, 5:00 am
ವಿಜಯ ಕರ್ನಾಟಕ ವರದಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ
Vijaya Karnataka Web majority of beggars seek masashana deputy commissioner action
ಭಿಕ್ಷೆ ಬೇಡುತ್ತಿದ್ದ ವೃದ್ಧನಿಗೆ ಮಾಸಾಶನ: ಜಿಲ್ಲಾಧಿಕಾರಿ ಕ್ರಮ


ವಿಕ ಸುದ್ದಿಲೋಕ ಚೇಳೂರು


ಚೇಳೂರು ಹೋಬಳಿಯಪುಲ್ಲವಾಂಡ್ಲಪಲ್ಲಿ ಗ್ರಾಮದ ವಾಸಿ 82 ವರ್ಷದ ಕಟ್ಲುಅಕ್ಕುಲಪ್ಪ ಸರಕಾರದ ಮಾಸಾಶನ ದೊರೆಯದೆ ಚೇಳೂರು ಪಟ್ಟಣದಲ್ಲಿ ಅಂಗಡಿಗಳ ಮುಂದೆ ಭಿಕ್ಷೆ ಬೇಡುತ್ತಿದ್ದರು. ಇವರಿಗೆ ಮಾಸಾಶನ ಕೊಡಿಸಲು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಸೂಚಿಸಿದ್ದು, ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

82 ವರ್ಷದ ವೃದ್ಧ ಕಟ್ಲುಅಕ್ಕುಲಪ್ಪ ಎಷ್ಟೋ ಬಾರಿ ಹಲವು ಸರಕಾರಿ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗಿದ್ದರು. ಆದರೂ ಅಧಿಕಾರಿಗಳು ಇವರಿಗೆ ಮಾಸಾಶನ ಕೊಡಿಸಿರಲಿಲ್ಲ. ಕೊನೆಗೆ ಬೇರೆ ದಾರಿ ಕಾಣದ ವೃದ್ಧ ಜೀವನೋಪಾಯಕ್ಕೆ ಭಿಕ್ಷೆ ಬೇಡುತ್ತಿದ್ದರು. ಹಿರಿಯ ನಾಗರಿಕನ ಇಂಥ ಮನ ಕಲಕುವ ಕಥೆಯನ್ನು ವಿಜಯ ಕರ್ನಾಟಕ ಗುರುವಾರ 'ಮಾಸಾಶನ ದೊರೆಯದೆ ಭಿಕ್ಷೆ ಬೇಡುತ್ತಿರುವ ವೃದ್ಧ' ಎಂಬ ವರದಿ ಪ್ರಕಟಿಸಿತ್ತು. ಇದನ್ನು ಕಂಡು ಮರುಗಿದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುಧ್‌ ಶ್ರವಣ್‌ ಕೂಡಲೆ ಕಾರ್ಯ ಪ್ರವೃತ್ತರಾಗಿ ಈ ಬಗ್ಗೆ ವರದಿ ನೀಡಿ ಮಾಸಾಶನ ಕೊಡಿಸಲು ಅಧಿಕಾರಿಗಳಿಗೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಚೇಳೂರು ಹೋಬಳಿ ನಾಡಕಚೇರಿ ಉಪ ತಹಸೀಲ್ದಾರ್‌ ಎಸ್‌.ಪಿ. ಜಯಪ್ರಕಾಶ್‌ ನೇತೃತ್ವದಲ್ಲಿ ಆ ಗ್ರಾಮಕ್ಕೆ ಭೇಟಿ ನೀಡಿ ವಯೋ ವೃದ್ಧನ ಸಮಸ್ಯೆ ವಿಚಾರಿಸಿ ಗ್ರಾಮದಲ್ಲಿ ಮಹಜರ್‌ ನಡೆಸಿದರು. ಲೋಕಸಭಾ ಚುನಾವಣಾ ನೀತಿಸಂಹಿತೆ ತೆರವಾದ ನಂತರ ಮಾಸಾಶನ ಮಾಡಿಕೊಡುವುದಾಗಿ ಭರವಸೆ ನೀಡಿದರು. ಈ ಸಮಯದಲ್ಲಿ ಗಾಮದ ಗ್ರಾಮಸ್ಥರು, ರೆವಿನ್ಯೂ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.

ಜಿಲ್ಲಾಧಿಕಾರಿಯನ್ನು ಪ್ರಶಂಸಿದ ಗ್ರಾಮಸ್ಥರು: ಮಾಸಾಶನ ದೊರೆಯದೆ ಭಿಕ್ಷೆ ಬೇಡುತ್ತಿರುವ ವೃದ್ಧನ ಬಗ್ಗೆ ಸುದ್ದಿ ಪ್ರಕಟವಾದ ಕೂಡಲೇ ಸ್ಪಂದಿಸಿ ವೃದ್ಧನಿಗೆ ಮಾಸಾಶನ ಕೊಡಿಸಲು ಅಗತ್ಯ ಕ್ರಮ ಕೈಗೊಂಡ ಜಿಲ್ಲಾಧಿಕಾರಿಯನ್ನು ಗ್ರಾಮಸ್ಥರು ಪ್ರಶಂಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ