ಆ್ಯಪ್ನಗರ

ಅನರ್ಹಗೊಂಡರೂ ಸ್ಪರ್ಧಿಸಲು ಅವಕಾಶವಿದೆ: ಪ್ರತಾಪ್‌ ಗೌಡ ಪಾಟೀಲ್‌ ವಿಶ್ವಾಸ

ಸುಪ್ರೀಂ ಕೋರ್ಟ್‌ನಲ್ಲಿ ಒಳಿತಾಗಲಿ ಎಂದು ದೇವರ ಮೊರೆ ಹೋದರೇ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್‌? ಕುಟುಂಬ ಸಮೇತರಾಗಿ ವಿದುರಾಶ್ವತ್ಥ ಗ್ರಾಮದ ಅಶ್ವತ್ಥನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರತಾಪ್‌ ಗೌಡ ಪಾಟೀಲ್‌.

Vijaya Karnataka Web 21 Sep 2019, 5:16 pm
ಚಿಕ್ಕಬಳ್ಳಾಪುರ: ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್‌ ಗೌಡ ಪಾಟೀಲ್‌ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದ ಅಶ್ವತ್ಥನಾರಾಯಣ ದೇಗುಲಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ಅಭಿಷೇಕ ನೇರವೇರಿಸಿದ್ದಾರೆ.
Vijaya Karnataka Web Pratap Gowda Patil


ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಪ್ರತಾಪ್‌ ಗೌಡ ಪಾಟೀಲ್‌, ಮಾಧ್ಯಮಗಳ ಮೂಲಕ ಉಪ ಚುನಾವಣೆ ಘೋಷಣೆಯಾದ ವಿಚಾರ ತಿಳಿಯಿತು. ನಮ್ಮ ಕ್ಷೇತ್ರಕ್ಕೆ ಯಾಕೆ ಮತದಾನದ ದಿನಾಂಕ ಘೋಷಣೆಯಾಗಿಲ್ಲ ಎಂದು ಗೊತ್ತಿಲ್ಲ. ಕಾರಣವನ್ನು ತಿಳಿದುಕೊಳ್ಳಬೇಕಿದೆ. ಉಪ ಚುನಾವಣೆ ಎದುರಿಸಲು ನಾನು ಸಿದ್ಧವಾಗಿದ್ದೇನೆ. ಯಾವಾಗ ಚುನಾವಣೆ ಬಂದರೂ ಎದುರಿಸಲು ಸಿದ್ಧ. ಕ್ಷೇತ್ರದಲ್ಲಿ ಸಂಚಾರ ಮಾಡಿ ಮತದಾರರ ಮನವೊಲಿಸುವ ಕೆಲಸ ಮಾಡಿದ್ದೇವೆ. ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಯಾವ ತೊಂದರೆಯೂ ಇಲ್ಲ. ಅನರ್ಹರಾದರೂ ಚುನಾವಣೆಗೆ ಸ್ಪರ್ಧೆ ಮಾಡಲು ಕಾನೂನಿನ ತೊಡಕಿಲ್ಲ ಎಂದರು.

ಕಾಂಗ್ರೆಸ್‌ಗೆ ಜೆಡಿಎಸ್ ಮೊದಲ ಶತ್ರು: ಕುಮಾರಸ್ವಾಮಿ

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರಕಾರ ಪತಗೊಳ್ಳಲು ಕಾರಣಕರ್ತರಾದವರ ಪೈಕಿ ಪ್ರತಾಪ್‌ ಗೌಡ ಪಾಟೀಲ್‌ ಪ್ರಮುಖರು. ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಪ್ರತಾಪ್‌ ಗೌಡ ಪಾಟೀಲ್‌ ಜಿಲ್ಲೆಗೆ ಬೇಕಾದ ಹೆಚ್ಚುವರಿ ಅನುದಾನ ಸಿಗಲಿಲ್ಲ ಎಂದು ಮುನಿಸಿಕೊಂಡಿದ್ದರು. ನಂತರ ಅತೃಪ್ತ ಶಾಸಕರ ನಾಯಕರಾಗಿ ಕಾಣಿಸಿಕೊಂಡ ರಮೇಶ್‌ ಜಾರಕಿಹೊಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪ್ರತಾಪ್‌ ಗೌಡ್‌ ಪಾಟೀಲ್‌ ಶಾಸಕತ್ವದಿಂದ ಅನರ್ಹಗೊಂಡಿದ್ದರು.

ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಜೆಡಿಎಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ