ಆ್ಯಪ್ನಗರ

ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ: ಕೃಷಿ ಸಚಿವ ಶಿವಶಂಕರರೆಡ್ಡಿ

ಸಮ್ಮಿಶ್ರ ಸರಕಾರ ಚೆನ್ನಾಗಿಯೇ ಇದೆ, ಮಾಧ್ಯಮದವರೇ ಬೆಳಗ್ಗೆ ಒಂದು ಸಂಜೆ ಒಂದೊಂದು ಹೇಳುತ್ತಿದ್ದೀರಿ ಅಂತ ಮಾಧ್ಯಮಗಳ ಮೇಲೆಯೇ ಕೃಷಿ ಸಚಿವ ಎನ್. ಎಚ್. ಶಿವಶಂಕರರೆಡ್ಡಿ ಗೂಬೆ ಕೂರಿಸಿದ್ದಾರೆ.

Vijaya Karnataka Web 15 Sep 2018, 5:19 pm
ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರಕಾರ ಚೆನ್ನಾಗಿಯೇ ಇದೆ, ಮಾಧ್ಯಮದವರೇ ಬೆಳಗ್ಗೆ ಒಂದು ಸಂಜೆ ಒಂದೊಂದು ಹೇಳುತ್ತಿದ್ದೀರಿ ಅಂತ ಮಾಧ್ಯಮಗಳ ಮೇಲೆಯೇ ಕೃಷಿ ಸಚಿವ ಎನ್. ಎಚ್. ಶಿವಶಂಕರರೆಡ್ಡಿ ಗೂಬೆ ಕೂರಿಸಿದ್ದಾರೆ.
Vijaya Karnataka Web N H Shivashanakara Reddy 1


ಸರ್ ಎಂ. ವಿಶ್ವೇಶ್ವರಯ್ಯ 158ನೇ ಜನ್ಮ ದಿನಾಚರಣೆ ಅಂಗವಾಗಿ ಸರ್ ಎಂ ವಿ ಸ್ವಗ್ರಾಮ ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷಿ ಸಚಿವ ಎನ್ ಎಚ್ ಶಿವಶಂಕರರೆಡ್ಡಿ, ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯವರ ಹಗಲುಗನಸು ನನಸಾಗಲ್ಲ. ಚುನಾವಣಾ ಫಲಿತಾಂಶದ ನಂತರ ರಾಜ್ಯಪಾಲರು ಬಿಜೆಪಿಗೆ ಸರಕಾರ ರಚನೆಗೆ ಮೊದಲು ಅವಕಾಶ ಕೊಟ್ಟಿದ್ರು, ಆದ್ರೆ ಬಿಜೆಪಿಯಿಂದ ಸರಕಾರ ಮಾಡಲಾಗಲಿಲ್ಲ. ನಂತರ ಕಾಂಗ್ರೆಸ್-ಜೆಡಿಎಸ್ ಎರಡು ಪಕ್ಷಗಳು ಒಗ್ಗೂಡಿ ಸರಕಾರ ಮಾಡಿವೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮ್ಮಿಶ್ರ ಸರಕಾರ ರಚನೆ ಮಾಡಿದ್ದು ಪಕ್ಷಗಳಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಸಾಮಾನ್ಯ. ಈ ಭಿನ್ನಾಭಿಪ್ರಾಯ ಸರಿಪಡಿಸುವ ಶಕ್ತಿ ಎರಡು ಪಕ್ಷಕ್ಕಿದೆ. ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದು ಕರ್ನಾಟಕದ ಮಾದರಿ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.

ಇನ್ನೂ ಜಿಲ್ಲಾ ಮಟ್ಟದಲ್ಲಿ ಜಾರಕಿಹೊಳಿ ಸಹೋದರರಿಗೆ ಭಿನ್ನಾಭಿಪ್ರಾಯ ರಾಜಕೀಯ ವ್ಯತ್ಯಾಸಗಳಿದ್ದು, ಪಕ್ಷ, ಹಾಗೂ ಸರ್ಕಾರದ ವಿರುದ್ದ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಅಂತ ಸಮರ್ಥಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ