ಆ್ಯಪ್ನಗರ

ಪಿಪಿಇ ಕಿಟ್‌ ಖರೀದಿಯಲ್ಲಿ ಅಕ್ರಮ ನಡೆದಿಲ್ಲ, ಕಾಂಗ್ರೆಸ್‌ನವರು ಮೊಸರಲ್ಲಿ ಕಲ್ಲು ಹುಡುಕುವ ಚಾಳಿ ಬಿಡಲಿ - ಸುಧಾಕರ್

ಪ್ರಾರಂಭದಲ್ಲಿ ಪಿಪಿಇ ಕಿಟ್ ಮತ್ತು ಸ್ಯಾನಿಟೈಜರ್‌ಗೆ ಹೆಚ್ಚಿನ ಬೇಡಿಕೆ ಇತ್ತು. ಹಾಗಾಗಿ ಟೆಂಡರ್ ಕರೆದರೆ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಹೆಚ್ಚು ಬೆಲೆ ಕೊಟ್ಟು ಖರೀದಿಸಿರಬಹುದು ಎಂದು ಸುಧಾಕರ್‌ ಸಮಜಾಯಿಷಿ ನೀಡಿದ್ದಾರೆ.

Vijaya Karnataka 11 Jul 2020, 2:51 pm

ಚಿಕ್ಕಬಳ್ಳಾಪುರ: ಆರೋಗ್ಯ ಇಲಾಖೆ ಎಲ್ಲಾ ಖರೀದಿಯನ್ನು ಅತ್ಯಂತ ಪಾರದರ್ಶಕವಾಗಿ ಮಾಡಿದೆ. ಕಾಂಗ್ರೆಸ್‌ನವರು ಮೊಸರಲ್ಲಿ ಕಲ್ಲು ಹುಡುಕುವ ಚಾಳಿಯನ್ನು ಮೊದಲು ಬಿಡಬೇಕು. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಬಣ್ಣ ಅನ್ನುವ ಹಾಗೆ ಈಗ ಆರೋಗ್ಯ ಇಲಾಖೆಯಲ್ಲಿ ಕಲ್ಲು ಹುಡುಕಲು ಬಂದಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ವಾಗ್ದಾಳಿ ನಡೆಸಿದರು.
Vijaya Karnataka Web Dr K Sudhakar


ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಅವರಿಗೆ ಅವರ ಆಡಳಿತವಿದ್ದಾಗ ಬರೀ ಹಗರಣ ಮಾಡಿ ಮಾಡಿ ಎಲ್ಲವೂ ಹಾಗೇ ಕಾಣಿಸುತ್ತದೆ. ಮೊದಲು ಆ ಕಾಯಿಲೆಯಿಂದ ಹೊರಬರಲಿ,” ಎಂದು ಲೇವಡಿ ಮಾಡಿದರು.

ಆರೋಗ್ಯ ಇಲಾಖೆಯವರು ಅತ್ಯಂತ ಪಾರದರ್ಶಕವಾಗಿ ಎಲ್ಲವನ್ನೂ ನಿರ್ವಹಿಸಿದ್ದಾರೆ. ಪ್ರಾರಂಭದಲ್ಲಿ ಪಿಪಿಇ ಕಿಟ್ ಮತ್ತು ಸ್ಯಾನಿಟೈಜರ್‌ಗೆ ಹೆಚ್ಚಿನ ಬೇಡಿಕೆ ಇತ್ತು. ಹಾಗಾಗಿ ಟೆಂಡರ್ ಕರೆದರೆ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಹೆಚ್ಚು ಬೆಲೆ ಕೊಟ್ಟು ಖರೀದಿಸಿರಬಹುದು ಎಂದು ಅವರು ಸಮಜಾಯಿಷಿ ನೀಡಿದರು.
'ರಾಜಕೀಯ ಲಾಭಕ್ಕೆ ನನ್ನ ಹೆಸರು ಬಳಸಿಕೊಳ್ಳಬೇಡಿ' - ಮುರುಗೇಶ್ ನಿರಾಣಿ

ಕೋವಿಡ್-19 ಟಾಸ್ಕ್ ಪೋರ್ಸ್ ಕಮಿಟಿಯಲ್ಲಿ ನಾನೂ ಇದ್ದೇನೆ. ಡಿಸಿಎಂ, ಗೃಹ ಸಚಿವರು ಇದ್ದಾರೆ. ವೈದ್ಯರಾದ ಡಾ.ಮಂಜುನಾಥ್ ಇದ್ದಾರೆ. ಹಾಗಾಗಿ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ವಿಪಕ್ಷದವರು ವಾಸ್ತವತೆ ತಿಳಿದುಕೊಂಡು ಆರೋಪ ಮಾಡಬೇಕು ಎಂದು ಸುಧಾಕರ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ