ಆ್ಯಪ್ನಗರ

ಶೌಚಾಲಯ ಹೊಂದಿರದ ಗ್ರಾಪಂ ಸದಸ್ಯನ ಸದಸ್ಯತ್ವ ರದ್ದು

ಗ್ರಾಮ ಪಂಚಾಯಿತಿ ಸದಸ್ಯರು ಕಡ್ಡಾಯವಾಗಿ ಶೌಚಾಲಯ ಹೊಂದಿರಬೇಕು. ಇಲ್ಲವಾದರೆ 12.ಎಚ್‌. ಕಾಯ್ದೆ ಪ್ರಕಾರ ಶೌಚಾಲಯ ಹೊಂದಿಲ್ಲದ ಪಕ್ಷ ದಲ್ಲಿ ಅವರ ಸದಸ್ಯತ್ವ Ü ರದ್ದಾಗಲಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಎನ್‌.ರಾಜು ತಿಳಿಸಿದರು.

Vijaya Karnataka 19 Dec 2018, 5:00 am
ಗ್ರಾಪಂ ಪ್ರತಿನಿಧಿಗಳ ಕಾನೂನು ಅರಿವು -ನೆರವು ಕಾರ್ಯಾಗಾರದಲ್ಲಿ ನ್ಯಾ. ಎನ್‌.ರಾಜು ಹೇಳಿಕೆ
Vijaya Karnataka Web CBP-18GBD-3


ವಿಕ ಸುದ್ದಿಲೋಕ ಗೌರಿಬಿದನೂರು

ಗ್ರಾಮ ಪಂಚಾಯಿತಿ ಸದಸ್ಯರು ಕಡ್ಡಾಯವಾಗಿ ಶೌಚಾಲಯ ಹೊಂದಿರಬೇಕು. ಇಲ್ಲವಾದರೆ 12.ಎಚ್‌. ಕಾಯ್ದೆ ಪ್ರಕಾರ ಶೌಚಾಲಯ ಹೊಂದಿಲ್ಲದ ಪಕ್ಷ ದಲ್ಲಿ ಅವರ ಸದಸ್ಯತ್ವ ರದ್ದಾಗಲಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಎನ್‌.ರಾಜು ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ರು, ಉಪಾಧ್ಯಕ್ಷ ರು,ಪಿಡಿಒ ಹಾಗೂ ಕಾರ್ಯದರ್ಶಿಗಳಿಗೆ ಶನಿವಾರ ಏರ್ಪಡಿಸಲಾಗಿದ್ದ ಕಾನೂನು ನೆರವು-ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.

ಅಧಿಕಾರ-ಕರ್ತವ್ಯಗಳ ಸ್ಪಷ್ಟ ಮಾಹಿತಿ ಹೊಂದಿ: ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರ ಅಧಿಕಾರ ಮತ್ತು ಕರ್ತವ್ಯಗಳ ಬಗ್ಗೆ ಸ್ಪಷ್ಟವಾಗಿ ಮಾಹಿತಿ ತಿಳಿದಿರಬೇಕಾಗುತ್ತದೆ.ಗ್ರಾಮೀಣ ಪ್ರದೇಶದಲ್ಲಿ ಲಭ್ಯ ಇರುವ ಸಾರ್ವಜನಿಕ ಆಸ್ತಿಯಾದ ಕೆರೆ,ಕುಂಟೆ,ನದಿ,ಬೆಟ್ಟಗುಡ್ಡ, ಜಲ ಮೂಲಗಳನ್ನು ಹಾಗೂ ಕಂದಾಯ ಜಮೀನಿಗಳ ಒತ್ತುವರಿಯನ್ನು ತಡೆಯಬೇಕಾಗಿದೆ. ಗ್ರಾಮಗಳಲ್ಲಿ ಮೂಲ ಸೌಲಭ್ಯಗಳು ಕಲ್ಪಿಸುವ ಜವಾಬ್ದಾರಿ ಗ್ರಾಪಂ ಸದಸ್ಯತ್ವ ರದ್ದಾಗಲಿದೆ ಎಂದರು.

2 ತಿಂಗಳಿಗೊಮ್ಮೆ ಕಡ್ಡಾಯ ಗ್ರಾಮ ಸಭೆ: ಪ್ರತಿಯೊಂದು ಗ್ರಾಮ ಪಂಚಾಯಿತಿ 2 ತಿಂಗಳಿಗೊಮ್ಮೆ ಗ್ರಾಮ ಸಭೆ ನಡೆಸಿ ಗ್ರಾಮದಲ್ಲಿನ ಕುಂದುಕೊರತೆಗಳನ್ನು ಚರ್ಚಿಸಿ ಪರಿಹಾರ ಕಾಣಬೇಕಾಗಿದೆ. ನಾಗರಿಕ ಸೌಲಭ್ಯಗಳಿಗೆ ಹೆಚ್ಚು ಒತ್ತು ನೀಡಬೇಕು. ಯಾವುದೇ ಗ್ರಾಪಂ ಸದಸ್ಯರು ಆಸೆ ಆಮಿಷಗಳಿವೊಡ್ಡಿ ಆಯ್ಕೆಯಾಗಿದ್ದರೆ ಅಂತಹ ವ್ಯಕ್ತಿಯ ಸದಸ್ಯತ್ವವನ್ನು ರದ್ದುಗೊಳಿಸುವ ಅವಕಾಶ ಇದೆ ಎಂದರು.

ಕುಶಲಕರ್ಮಿಗಳಿಗೆ ಉತ್ತೇಜನ: ತಹಸೀಲ್ದಾರ್‌ ಎಚ್‌.ಶ್ರೀನಿವಾಸ್‌ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಗುಡಿ ಕೈಗಾರಿಕೆಗಳು ಕೈಗೊಳ್ಳುವ ಕರಕುಶಲ ಕರ್ಮಿಗಳಿಗೆ ಉತ್ತೇಜನ ನೀಡಬೇಕಾಗಿದೆ. ಗ್ರಾಮೀಣ ಪ್ರದೇಶದ ಜನ ನಗರಗಳಿಗೆ ವಲಸೆ ಹೋಗದಂತೆ ಹಿಂದಿನಿಂದಲೂ ಉಳಿಸಿ ಬೆಳೆಸಿಕೊಂಡು ಬಂದಿರುವ ವಿವಿಧ ಕಲೆಗಾರಿಕೆಗೆ ಪ್ರೋತ್ಸಾಹ ನೀಡಬೇಕಾಗಿದೆ. ಗ್ರಾಮಗಳ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಆರ್‌.ಪವಿತ್ರ, ವೃತ್ತನಿರೀಕ್ಷ ಕ ವೈ. ಅಮರನಾರಾಯಣ, ಜಿಲ್ಲಾ ಪಂಚಾಯಿತ್‌ ಉಪ ಕಾರ್ಯದರ್ಶಿ ಶಶಿಧರ್‌ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾದ ಎ.ವಿ. ಆಂಜಿನಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರ ಉಪಾಧ್ಯಕ್ಷ ಹಾಗೂ ಪಿಡಿಒ ಗಳ ಅಧಿಕಾರ ಹಾಗೂ ಕರ್ತವ್ಯಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ವಕೀಲರ ಸಂಘದ ಕಾರ್ಯದರ್ಶಿ ಡಿ.ಲಿಂಗಪ್ಪ,ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಗೋವಿಂದಪ್ಪ, ಸರ್ತಾಜ್‌ ಮತ್ತಿತರರು ಉಪಸ್ಥಿತರಿದ್ದರು.

ಗೌರಿಬಿದನೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಕಾನೂನು ನೆರವು-ಅರಿವು ಕಾರ್ಯಾಗಾರವನ್ನು ಹಿರಿಯ ಶ್ರೇಣಿ ನ್ಯಾಯಾಧೀಶ ಎನ್‌.ರಾಜು ಉದ್ಘಾಟಿಸಿ ಮಾತನಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ