ಆ್ಯಪ್ನಗರ

ಮಕ್ಕಳ ದಿನಾಚರಣೆಯಂದು ಮಗನ ಸಾವು ನ್ಯಾಯಕ್ಕಾಗಿ ಪೋಷಕರ ಪ್ರತಿಭಟನೆ

ಗೌರಿಬಿದನೂರಿನ ತಾಲೂಕಿನ ಹೊಸೂರು ಬಳಿಯ ಕೊರಟಲದಿನ್ನೆ ಗ್ರಾಮದಲ್ಲಿ‌ ನಾಯಿ ಕಡಿತದಿಂದ ಮೃತಪಟ್ಟಿದ್ದ ಫೈರೋಜ್ ಹಾಗೂ ಫಾಮೀದಾ ದಂಪತಿಗಳ ಐದು ವರ್ಷದ ಬಾಲಕ ಸಮೀರ್ ಭಾಷಾ ಮೃತನಾಗಿದ್ದ. ಕಳೆದ ತಿಂಗಳ ಅಕ್ಟೋಬರ್ 30 ರಂದು‌ ಮನೆಯ ಪಕ್ಕದಲ್ಲಿ ನಾಯಿ ಕಚ್ಚಿದ ಹಿನ್ನಲೇ ಹೊಸೂರು ಬಳಿಯ ಸರ್ಕಾರಿ ಆಸ್ಪತ್ರೆಗೆ ಭೇಟಿ‌ ನೀಡಿ ನಾಯಿ ಕಡಿತಕ್ಕೆ ಇಂಜಕ್ಷನ್ ಪಡೆದುಕೊಂಡಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿ ಯಾವ ಇಂಜಕ್ಷನ್ ನೀಡಿದ್ದಾರೆ ಎಂಬ ಮಾಹಿತಿಯೂ ಇರಲಿಲ್ಲ. ಇಂಜಕ್ಷನ್ ಪಡೆದ 5 ದಿನಗಳ ನಂತರ ಬಾಲಕನ ಆರೋಗ್ಯದಲ್ಲಿ ಏರುಪೇರಾಗಿ ಬಾಲಕ ಅಸುನೀಗಿದ್ದ.

Edited byಚೇತನ್ ಓ.ಆರ್. | Vijaya Karnataka Web 15 Nov 2022, 11:52 am

ಹೈಲೈಟ್ಸ್‌:

  • ಗೌರಿಬಿದನೂರಿನ ತಾಲೂಕಿನ ಹೊಸೂರು ಬಳಿಯ ಕೊರಟಲದಿನ್ನೆ ಗ್ರಾಮದ ಪೈರೋಜ್ ಹಾಗೂ ಫಾಮೀದಾ ದಂಪತಿಗಳ ಪ್ರತಿಭಟನೆ.
  • ಅಕ್ಟೋಬರ್ 30 ರಂದು‌ ಮನೆಯ ಪಕ್ಕದಲ್ಲಿ ನಾಯಿ ಕಚ್ಚಿದ ಹಿನ್ನೆಲೆಯಿಂದ ಹೊಸೂರು ಬಳಿಯ ಸರ್ಕಾರಿ ಆಸ್ಪತ್ರೆಗೆ ಭೇಟಿ‌ ನೀಡಿ ನಾಯಿ ಕಡಿತಕ್ಕೆ ಇಂಜಕ್ಷನ್ ಕೊಡಿಸಿದ್ದರು.
  • ಇಂಜೆಕ್ಷನ್ ಪಡೆದ ಐದು ದಿನದ ನಂತರ ಬಾಲಕನ ಆರೋಗ್ಯ ಹದಗೆಟ್ಟು, ನ. 14ರಂದು ಆತ ಮೃತಪಟ್ಟಿದ್ದಾನೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web CKB Protest
ಟಿಎಚ್ಒ ರತ್ನಮ್ಮ ಅವರಿಗೆ ಮನವಿ ಪತ್ರ ಸಲ್ಲಿಸುತ್ತಿರುವ ಪೋಷಕರು.
ಚಿಕ್ಕಬಳ್ಳಾಪುರ: ನಾಯಿ ದಾಳಿಯ ಕಡಿತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳ‌ ದಿನಾಚರಣೆಯ ದಿನದಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ‌ ಗೌರಿಬಿದನೂರಿನ ತಾಲೂಕಿನ ಹೊಸೂರು ಬಳಿಯ ಕೊರಟಲದಿನ್ನೆ ಗ್ರಾಮದಲ್ಲಿ‌ ನಡೆದಿದೆ. ಗ್ರಾಮದ ಪೈರೋಜ್ ಹಾಗೂ ಫಾಮೀದಾ ದಂಪತಿಗಳ ಐದು ವರ್ಷದ ಬಾಲಕ ಸಮೀರ್ ಭಾಷಾ ಮೃತ ಎಂದು ತಿಳಿದು ಬಂದಿದೆ.
ಇನ್ನೂ‌, ಕಳೆದ ತಿಂಗಳ ಅಕ್ಟೋಬರ್ 30 ರಂದು‌ ಮನೆಯ ಪಕ್ಕದಲ್ಲಿ ನಾಯಿ ಕಚ್ಚಿದ ಹಿನ್ನಲೇ ಹೊಸೂರು ಬಳಿಯ ಸರ್ಕಾರಿ ಆಸ್ಪತ್ರೆಗೆ ಭೇಟಿ‌ ನೀಡಿದ್ದರು. ಅಲ್ಲಿನ ವೈದ್ಯಕೀಯ ಸಿಬ್ಬಂದಿ ನಾಯಿ ಕಡಿತಕ್ಕೆ ಇಂಜಕ್ಷನ್ ನೀಡಿದ್ದರು. 5 ದಿನಗಳ ನಂತರ ಬಾಲಕನ ಆರೋಗ್ಯದಲ್ಲಿ ಏರುಪೇರಾಗಿತ್ತು. ಭಯಭೀತರಾದ ಬಾಲಕ ಕುಟುಂಬಸ್ಥರು ಗೌರಿಬಿದನೂರಿನ ಖಾಸಗಿ ಆಸ್ಪತ್ರೆ ದಾಖಲಿಸಿದ್ದರು.

Ram Mandir Ayodhya: ಅಯೋಧ್ಯೆಯ ರಾಮ ಮಂದಿರಕ್ಕೆ ರಾಜ್ಯದ ಗ್ರಾನೈಟ್‌
ಹೊಸೂರು ಬಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಯಾವ ಇಂಜಕ್ಷನ್ ನೀಡಿದ್ದರು ಎಂಬ ಪ್ರಶ್ನೆಯನ್ನು ಗೌರಿಬಿದನೂರು ಆಸ್ಪತ್ರೆಯ ವೈದ್ಯರು ಕೇಳಿದಾಗ ಪೋಷಕರಿಗೆ ಅದು ಯಾವ ಇಂಜೆಕ್ಷನ್ ಎಂಬುದು ತಿಳಿಯದೇ ತಬ್ಬಿಬ್ಬಾದರು. ಖಾಸಗಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಯ ನಂತರ ಮತ್ತೆ ಇಂಜಕ್ಷನ್ ನೀಡಿದ್ದು ಬಾಲಕನ ಆರೋಗ್ಯ ಮತ್ತಷ್ಟು ಗಂಭೀರವಾಗಿಯಿತು. ಹಾಗಾಗಿ, ಬಾಲಕನಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದ್ದರು. ನಂತರ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಬಾಲಕನ ಮೆದುಳಿಗೆ ವಿಷ ಏರಿದ್ದು ಆತ ಬಾಲಕ ಸಾವನ್ನಪ್ಪಿದ್ದಾಗಿ ಪೋಷಕರು ಮಾಹಿತಿ ನೀಡಿದ್ದಾರೆ.

ಸದ್ಯ ಮಕ್ಕಳ ದಿನಾಚರಣೆಯ ದಿನದಂದು ಮಗು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಇದರಿಂದ ಆಕ್ರೋಶಗೊಂಡ ಪೋಷಕರು ಸ್ಥಳೀಯ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.ಇನ್ನೂ ಸ್ಥಳಕ್ಕೆ ದೌಡಾಯಿಸಿದ ಟಿಹೆಚ್ಓ ರತ್ನಮ್ಮ ಅವರು ಪ್ರತಿಕ್ರಿಯಿಸಿ, ‘ಸಾವಿಗೆ ಕಾರಣ ನಾಯಿ ಕಡಿತ‌ ಅಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಬಾಲಕನ ಸಾವಿಗೆ ಕಾರಣವಾದರೂ ಏನು ಎಂಬುವುದು ತನಿಖೆಯ ನಂತರ ಹೊರಬರಬೇಕಾಗಿದೆ.

ಇನ್ನೂ‌ ಮಕ್ಕಳ ದಿನಾಚರಣೆಯ ದಿನದಂದು ಪೋಷಕರು ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಬಾಲಕನ ಪೋಷಕರು ತಿಳಿಸಿದ್ದಾರೆ. ಬಾಲಕನ ಸಾವಿಗೆ ಕಾರಣವಾದ್ರು ಏನು ಎಂಬುವುದು ತನಿಖೆಯ ನಂತರ ತಿಳಿದು ಬರಬೇಕಾಗಿದೆ. ಸದ್ಯ ಗ್ರಾಮದಲ್ಲಿಯೂ ಬಾಲಕನ ಸಾವಿನ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ