ಆ್ಯಪ್ನಗರ

ಪೊಲೀಸರಿಂದ ಭರ್ಜರಿ ಬೇಟೆ; ಚಿಕ್ಕಬಳ್ಳಾಪುರದಲ್ಲಿ 32 ಕೆಜಿ ಗಾಂಜಾ ವಶ..!

ಪೊಲೀಸರು ನಡೆಸಿದ ದಾಳಿಯಲ್ಲಿ ಬರೋಬ್ಬರಿ 32 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರ ಪೈಕಿ ಶಂಕರ್ ಎಂಬಾತ ಗಾಂಜಾ ಸಾಗಣೆಯನ್ನೇ ವೃತ್ತಿಯಾಗಿಸಿಕೊಂಡಿದ್ದು, ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

Vijaya Karnataka Web 8 Sep 2020, 1:21 pm
ಚಿಕ್ಕಬಳ್ಳಾಪುರ: ಕರ್ನಾಟಕದಲ್ಲಿ ಡ್ರಗ್ಸ್ ಗಾಂಜಾ ಕುರಿತು ವ್ಯಾಪಕವಾಗಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೊಲೀಶರು ಭರ್ಜರಿಯಾಗಿ ಬೇಟೆಯಾಡಿದ್ದಾರೆ.
Vijaya Karnataka Web marijuana


ಇಡೀ ರಾಜ್ಯಕ್ಕೇ ಪ್ರವಾಹ, ಮಳೆ ಇದ್ದರೆ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಬರಗಾಲ!

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಪೊಲೀಸರು ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿ ಬರೋಬ್ಬರಿ 32 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಇದಾಗಿದೆ ಎಂದು ಹೇಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಅವಕಾಶಗಳು ಕುಟುಂಬಕ್ಕೆ ಸೀಮಿತವಲ್ಲ, ನಾನು ಏಕಚಕ್ರಾಧಿಪತ್ಯದ ವಿರೋಧಿ: ಸಚಿವ ಸುಧಾಕರ್

ಬಂಧಿತ ಆರೋಪಿಗಳನ್ನು ಆಂದ್ರಪ್ರದೇಶ ಮೂಲದ ಚಿತ್ತೂರು ಜಿಲ್ಲೆಯ ಗುಂಟಪಲ್ಲಿ ಗ್ರಾಮದ ನಿವಾಸಿ ಶಂಕರ್(33) ಮತ್ತು ಶಿಡ್ಲಘಟ್ಟದ ಶಬಾಬ್(26) ಎಂದು ಗುರುತಿಸಲಾಗಿದ್ದು, ಚಿಂತಾಮಣಿ ನಗರದ ರಾಮಕುಂಟೆ ರಸ್ತೆ ಪಕ್ಕ ಸೋಮವಾರ ಸಂಜೆ ನಿಂತಿದ್ದ ಆಂಧ್ರ ಪ್ರದೇಶ ಮೂಲದ ಕಾರೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಗಾಂಜಾ ವಶಪಡಿಸಿಕೊಂಡಿದ್ದಾರೆ.

ಗೋ ಹತ್ಯೆ ಮಹಾಪಾಪ, ಗೋ ಹತ್ಯೆ ನಿಷೇಧಕ್ಕೆ ಸಿಎಂಗೆ ಮನವಿ: ಸಚಿವ ಸುಧಾಕರ್

ಚಿಂತಾಮಣಿ ನಗರ ಠಾಣೆ ಪೋಲೀಸರು ನಡೆಸಿದ ದಾಳಿ ವೇಳೆ ಕಾರಿನ ಹಿಂಬದಿ ಸೀಟಿನಲ್ಲಿ ಮೂರು ಬ್ಯಾಗ್‌ಗಳಲ್ಲಿ 32 ಕೆಜಿ ಗಾಂಜಾ ಪತ್ತೆಯಾಗಿದ್ದು, ಸದ್ಯ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಶಂಕರ್ ಎಂಬಾತ ಗಾಂಜಾ ಸಾಗಣೆಯನ್ನೇ ವೃತ್ತಿಯಾಗಿಸಿಕೊಂಡಿದ್ದು, ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ