ಆ್ಯಪ್ನಗರ

ಒಂದೇ ದಿನದಲ್ಲಿ 10 ಲಕ್ಷ ರೂ. ಬಾಡಿಗೆ ವಸೂಲಿ

ಸ್ಥಳೀಯ ನಗರಸಭೆಯ ಅಧಿಕಾರಿಗಳು ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯಿರುವ ಐಡಿಎಸ್‌ಎಂಟಿ(ಸಣ್ಣ ಮತ್ತು ಮಧ್ಯಮ ನಗರಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ ನಿರ್ಮಣವಾಗಿರುವ ಮಳಿಗೆಗಳು) ಮಳಿಗೆಗಳ ಬಾಡಿಗೆದಾರರು ಸುಮಾರು ಮೂರ್ನಾಲ್ಕು ವರ್ಷಗಳಿಂದ ಉಳಿಸಿಕೊಂಡಿದ್ದ ಅಂಗಡಿ ಬಾಡಿಗೆಯನ್ನು ಇಂದು ವಸೂಲಿ ಮಾಡಿದರು. ಬಾಡಿಗೆ ಕಟ್ಟದ ಮಳಿಗೆಗಳಿಗೆ ಬೀಗ ಹಾಕಿದ ಘಟನೆ ಶನಿವಾರ ನಗರದಲ್ಲಿ ನಡೆಯಿತು.

Vijaya Karnataka 5 May 2019, 3:11 pm
ಚಿಂತಾಮಣಿ: ಸ್ಥಳೀಯ ನಗರಸಭೆಯ ಅಧಿಕಾರಿಗಳು ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯಿರುವ ಐಡಿಎಸ್‌ಎಂಟಿ(ಸಣ್ಣ ಮತ್ತು ಮಧ್ಯಮ ನಗರಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ ನಿರ್ಮಣವಾಗಿರುವ ಮಳಿಗೆಗಳು) ಮಳಿಗೆಗಳ ಬಾಡಿಗೆದಾರರು ಸುಮಾರು ಮೂರ್ನಾಲ್ಕು ವರ್ಷಗಳಿಂದ ಉಳಿಸಿಕೊಂಡಿದ್ದ ಅಂಗಡಿ ಬಾಡಿಗೆಯನ್ನು ಇಂದು ವಸೂಲಿ ಮಾಡಿದರು. ಬಾಡಿಗೆ ಕಟ್ಟದ ಮಳಿಗೆಗಳಿಗೆ ಬೀಗ ಹಾಕಿದ ಘಟನೆ ಶನಿವಾರ ನಗರದಲ್ಲಿ ನಡೆಯಿತು.
Vijaya Karnataka Web rs 10 lakh rent recovered in a day
ಒಂದೇ ದಿನದಲ್ಲಿ 10 ಲಕ್ಷ ರೂ. ಬಾಡಿಗೆ ವಸೂಲಿ


10.32 ಲಕ್ಷ ಬಾಡಿಗೆ ವಸೂಲಿ: ನಗರಸಭೆಯಡಿ ನಿರ್ಮಾಣವಾಗಿರುವ ಐಡಿಎಸ್‌ಎಂಟಿ ಐಡಿಎಸ್‌ಎಂಟಿ ಕಾಂಪ್ಲೆಕ್ಸ್‌ನಲ್ಲಿ 190 ಅಂಗಡಿ ಮಳಿಗೆಗಳಿದ್ದು, ಅದರಲ್ಲಿ ಕೆಲ ಮಳಿಗೆಗಳ ಮಾಲೀಕರು ಬಾಡಿಗೆ ಪಾವತಿಸದೆ ಸತಾಯಿಸುತ್ತಿದ್ದರು. ಬಾಡಿಗೆ ರದ್ದು ಅಥವಾ ರಿಯಾಯಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತಿತರ ಅಧಿಕಾರಿಗಳಿಗೆ ಮನವಿಯನ್ನೂ ಮಾಡಿದ್ದರು. ಆದರೆ ಈ ಎಲ್ಲವೂ ವಿಫಲವಾಗಿದ್ದು, ಇದೀಗ ಸ್ಥಳೀಯ ನಗರಸಭೆ ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಇದೀಗ ಒಂದೇ ದಿನದಲ್ಲಿ 10.32 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾರೆ.

12 ಅಂಗಡಿಗಳಿಗೆ ಬೀಗ: ಸಂಕೀರ್ಣದಲ್ಲಿ ಬಾಡಿಗೆ ಬಾಕಿ ಇದ್ದ ಮಳಿಗೆಗಳಿಗೆ ಬೀಗ ಜಡಿಯುತ್ತಿದ್ದಂತೆ ತಮ್ಮ ಮಳಿಗೆಗಳಿಗೆ ಬೀಗ ಹಾಕುವುದನ್ನು ತಪ್ಪಿಸಿಕೊಳ್ಳಲು ತಾವು ಕಟ್ಟಬೇಕಿದ್ದ ಒಟ್ಟು ಮೊತ್ತದಲ್ಲಿ ಇಂತಿಷ್ಟನ್ನು ಹಣ ಕಟ್ಟಿ ತಮ್ಮ ಮಳಿಗೆಗೆ ಬೀಳುತ್ತಿದ್ದ ಬೀಗವನ್ನು ತಪ್ಪಿಸಿದ್ದಾರೆ. ಆದರೂ ಸುಮಾರು 12 ಅಂಗಡಿಗಳಿಗೆ ಬೀಗವನ್ನು ಜಡಿಯಲಾಗಿದ್ದು, ಕೆಲವರು ಅಲ್ಲಿಯೇ ಬಾಡಿಗೆ ಪಾವತಿಸಿ, ಬೀಗವನ್ನು ಅಧಿಕಾರಿಗಳಿಂದಲೇ ತೆರವುಗೊಳಿಸಿಕೊಂಡಿದ್ದು ವಿಶೇಷವಾಗಿತ್ತು.

52 ಮಳಿಗೆಗಳಿಂದ ಬಾಡಿಗೆ ವಸೂಲಿ:
ಇದೇ ಸಂದರ್ಭದಲ್ಲಿ ಐಡಿಎಸ್‌ಎಂಟಿ ಕಾಂಪ್ಲೆಕ್ಸ್‌ನ ಬಾಡಿಗೆ ಬಾಕಿ ಇದ್ದವರ ಪೈಕಿ ಸುಮಾರು 52 ಮಳಿಗೆಯವರು ಬಾಡಿಗೆಯನ್ನು ಪಾವತಿಸಿದ್ದಾರೆ. ಅದರಲ್ಲಿ ಇಬ್ಬರು ತಮ್ಮ ಒಟ್ಟು ಬಾಕಿ ಮೊತ್ತವನ್ನು ಪಾವತಿಸಿ ನಗರಸಭೆಯ ಅಧಿಕಾರಿಗಳಿಂದ ಅಭಿನಂದನೆಗೆ ಒಳಗಾಗಿದ್ದಾರೆ. ವಾಜಿದ್‌ ಪಾಷಾ ಮತ್ತು ಸಂಜೀವಪ್ಪ ಎನ್ನುವವರು ತಮ್ಮ ಪೂರ್ತಿ ಬಾಡಿಗೆ ಬಾಕಿ ಮೊತ್ತವನ್ನು ಪಾವತಿಸಿ ಅಭಿನಂದನೆಗೆ ಪಾತ್ರರಾದರು.

25 ಲಕ್ಷ ಕ್ಕೂ ಹೆಚ್ಚು ಬಾಕಿ: ಇನ್ನು ಐಡಿಎಸ್‌ಎಂಸಿ ಕಾಂಪ್ಲೆಕ್ಸ್‌ನ ಒಟ್ಟು ಬಾಕಿ ಮೊತ್ತ 25 ಲಕ್ಷ ಕ್ಕೂ ಹೆಚ್ಚಿನ ಮೊತ್ತವಾಗಿದ್ದು. ಈ ಮೊತ್ತವನ್ನು ವಸೂಲಿ ಮಾಡಲು ನಗರಸಭೆಯ ಅಧಿಕಾರಿಗಳು ಪಣತೊಟ್ಟಿದ್ದಾರೆ. ಅದರಂತೆ ಶನಿವಾರ ಕೈಗೊಂಡ ಕಾರ್ಯಾಚರಣೆಯನ್ನು ಒಂದೇ ದಿನದಲ್ಲಿ ಸುಮಾರು 10 ಲಕ್ಷ ಕ್ಕೂ ಹೆಚ್ಚು ಬಾಡಿಗೆ ವಸೂಲಿಯಾಗಿದ್ದು, ಇದೇ ಹುರುಪಿನಿಂದ ಕೆಲಸ ಮಾಡಿದರೆ ಇನ್ನೆರಡು ಕಂತುಗಳಲ್ಲಿ ಒಟ್ಟು ಮೊತ್ತವನ್ನು ವಸೂಲಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲದಂತಾಗಿದೆ.

ಮಾತಿನ ಚಕಮಕಿ: ಈ ಸಂದರ್ಭದಲ್ಲಿ ನಗರಸಭೆಯ ಅಧಿಕಾರಿಗಳು ಮತ್ತು ಬಾಡಿಗೆದಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು. ನಮಗೆ ಬಾಡಿಗೆ ಕಡಿಮೆ ಮಾಡಬೇಕು ಮತ್ತು ರಿಯಾಯಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅದರಂತೆ ನಮಗೆ ಬಾಡಿಗೆಯಲ್ಲಿ ರಿಯಾಯಿತಿ ನೀಡಬೇಕು ಎಂದು ನಗರಸಭೆಯ ಸಿಬ್ಬಂದಿಯ ಜತೆ ಮಾತಿನ ಚಕಮಕಿ ನಡೆಸಿದರು.

ಬಾಡಿಗೆ ವಸೂಲಿಯ ನೇತೃತ್ವವನ್ನು ನಗರಸಭೆಯ ಕಂದಾಯ ಅಧಿಕಾರಿ ಮುನಿಯಪ್ಪ, ರಾಜಸ್ವ ನಿರೀಕ್ಷ ಕ ಸಿ.ಕೆ.ಬಾಬು, ಕರವಸೂಲಿಗಾರರಾದ ನರಸಿಂಹಾರೆಡ್ಡಿ, ವೆಂಕಟಾಚಲಪತಿ, ರಾಮಕೃಷ್ಣ, ಶಂಕರ, ಲಕ್ಷ್ಮಿಕಾಂತ, ನಾಗಭೂಷಣ ಮುಂತಾದವರು ವಹಿಸಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ