ಆ್ಯಪ್ನಗರ

ಆಧಾರ್‌ ಕಾರ್ಡ್‌ ಟೋಕನ್‌ಗಾಗಿ ನೂಕು ನುಗ್ಗಲು

ಹೊಸ ಆಧಾರ್‌ ಕಾರ್ಡ್‌ಗಾಗಿ ಟೋಕನ್‌ ಪಡೆಯಲು ಹಾಗೂ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿಸಲು ಬೆಳಗಿನ ಜಾವ 5ಗಂಟೆಯಿಂದಲ್ಲೇ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಎಸ್‌ಬಿಐ ಬ್ಯಾಂಕ್‌ ಬಳಿ ಜಮಾಯಿಸಿದ್ದರಿಂದ ತಳ್ಳಾಟ, ನೂಕಾಟ ನಡೆಯಿತು.

Vijaya Karnataka 2 Jul 2019, 5:00 am
ಚಿಂತಾಮಣಿ: ಹೊಸ ಆಧಾರ್‌ ಕಾರ್ಡ್‌ಗಾಗಿ ಟೋಕನ್‌ ಪಡೆಯಲು ಹಾಗೂ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿಸಲು ಬೆಳಗಿನ ಜಾವ 5ಗಂಟೆಯಿಂದಲ್ಲೇ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಎಸ್‌ಬಿಐ ಬ್ಯಾಂಕ್‌ ಬಳಿ ಜಮಾಯಿಸಿದ್ದರಿಂದ ತಳ್ಳಾಟ, ನೂಕಾಟ ನಡೆಯಿತು.
Vijaya Karnataka Web rush for aadhaar card token
ಆಧಾರ್‌ ಕಾರ್ಡ್‌ ಟೋಕನ್‌ಗಾಗಿ ನೂಕು ನುಗ್ಗಲು


ಸರಕಾರದ ಪ್ರತಿಯೊಂದು ಯೋಜನೆಯ ಸೌಲಭ್ಯವನ್ನು ಪಡೆಯಲು ಆಧಾರ್‌ ಕಾರ್ಡ್‌ ಕಡ್ದಾಯವಾಗಿದ್ದು, ತಾಲೂಕಿನಾದ್ಯಂತಹ ಎಲ್ಲ ನಾಡಕಚೇರಿಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಈ ಹಿಂದೇ ಆಧಾರ್‌ ಕಾರ್ಡ್‌ಗಳನ್ನು ತೆಗೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಇತ್ತೀಚಿಗೆ ಸರ್ವರ್‌ ಸಮಸ್ಯೆಯಿಂದ ನಾಡಕಚೇರಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್‌ ಕಾರ್ಡ್‌ ತೆಗೆಯುವುದನ್ನು ನಿಲ್ಲಿಸಿದ್ದಾರೆ. ಇದರಿಂದ ತಾಲೂಕಿಗೆಲ್ಲ ಸೇರಿ ಚಿಂತಾಮಣಿ ನಗರದ ಎಸ್‌ಬಿಐ ಬ್ಯಾಂಕ್‌ನಲ್ಲಿ ಮಾತ್ರ ಆಧಾರ್‌ ಕಾರ್ಡ್‌ ತೆಗೆಯಲಾಗುತ್ತಿದೆ.

ತಳ್ಳಾಟ, ನೂಕಾಟ: ಆಧಾರ್‌ ಕಾರ್ಡ್‌ ಪಡೆಯಲು ಟೋಕನ್‌ನ್ನು ಮೂರು ತಿಂಗಳಿಗೊಮ್ಮೆ ನೀಡುತ್ತಿರುವ ಕಾರಣ ಬೆಳಗ್ಗೆ 5ಗಂಟೆಗೆ ದೂರದ ಊರುಗಳಿಂದ ಬಂದ ಮಕ್ಕಳು, ವಯೋವೃದ್ಧರು ಸೇರಿದಂತೆ ಸಾರ್ವಜನಿಕರು ಬ್ಯಾಂಕ್‌ ಬಳಿ ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿವೆ. ಇನ್ನೂ ಬೆಳಗ್ಗೆ ಹತ್ತು ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಆಧಾರ್‌ ಕಾರ್ಡ್‌ ಟೋಕನ್‌ ಪಡೆಯಲು ಜಮಾಯಿಸಿದ್ದರು. ಇದರಿಂದ ಬ್ಯಾಂಕ್‌ ಬಳಿ ಜನಜಂಗುಳಿ ಹೆಚ್ಚಾಗಿ, ಟೋಕನ್‌ ಪಡೆಯಲು ತಾ ಮುಂದು ನಾ ಮುಂದು ಎಂದು ಜನತೆ ನುಗ್ಗುತ್ತಿದ್ದರಿಂದ ತಳ್ಳಾಟ ನೂಕಾಟ ನಡೆಯಿತು.

ಈ ವೇಳೆ ಮಧ್ಯಪ್ರವೇಶಿಸಿದ ಬ್ಯಾಂಕ್‌ ಅಧಿಕಾರಿಗಳು ಹಾಗೂ ಪೊಲೀಸರು ಜನರ ಮನವೊಲಿಸಿ ಸರತಿ ಸಾಲಿನಲ್ಲಿ ನಿಲ್ಲಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸಾರ್ವಜನಿಕರು ಸರತಿ ಸಾಲಿನಲ್ಲಿ ಸಾಗಿ ಟೋಕನ್‌ಗಳನ್ನು ಪಡೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ