ಆ್ಯಪ್ನಗರ

ಸುಸೂತ್ರ ಚುನಾವಣೆಗೆ ಕಟ್ಟುನಿಟ್ಟಿನ ಕ್ರಮ: ತಹಸೀಲ್ದಾರ್‌

ಏ.18ರಂದು ನಡೆಯಲಿರುವ ಲೋಕಸಭೆ ಚುನಾವಣೆಯು ಯಾವುದೇ ತೊಂದರೆಯಿಲ್ಲದೆ ಸುಸೂತ್ರವಾಗಿ ನಡೆಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್‌ ಎಸ್‌.ಎಲ್‌.ವಿಶ್ವನಾಥ್‌ ತಿಳಿಸಿದರು.

Vijaya Karnataka 12 Mar 2019, 5:00 am
ಚಿಂತಾಮಣಿ: ಏ.18ರಂದು ನಡೆಯಲಿರುವ ಲೋಕಸಭೆ ಚುನಾವಣೆಯು ಯಾವುದೇ ತೊಂದರೆಯಿಲ್ಲದೆ ಸುಸೂತ್ರವಾಗಿ ನಡೆಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್‌ ಎಸ್‌.ಎಲ್‌.ವಿಶ್ವನಾಥ್‌ ತಿಳಿಸಿದರು.
Vijaya Karnataka Web strict action for smooth elections tahsildar
ಸುಸೂತ್ರ ಚುನಾವಣೆಗೆ ಕಟ್ಟುನಿಟ್ಟಿನ ಕ್ರಮ: ತಹಸೀಲ್ದಾರ್‌


ಚುನಾವಣೆಗೆ ಸಂಬಂಧಿಸಿದಂತೆ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಕೋಲಾರ ಲೋಕಸಭೆ ಕ್ಷೇತ್ರದ ಮತದಾನ ಮೊದಲನೇ ಹಂತದಲ್ಲಿಯೇ ನಡೆಯಲಿದ್ದು, ಮಾ.19ಕ್ಕೆ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಪ್ರಾರಂಭವಾಗಲಿದ್ದು, ಮಾ.26 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಮಾ.27ರಂದು ನಾಮಪತ್ರ ಪರಿಶೀಲನೆ, 29ರಂದು ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದ್ದು, ಏ.18ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ನಾಲ್ಕು ಚೆಕ್‌ಪೋಸ್ಟ್‌ಗಳು: ಮತದಾನಕ್ಕೆ ಸಂಬಂಧಿಸಿದಂತೆ ಅಕ್ರಮಗಳನ್ನು ತಡೆಯುವ ಸಲುವಾಗಿ ತಾಲೂಕಿನಲ್ಲಿ ಒಟ್ಟು 4 ತಪಾಸಣೆ ಕೇಂದ್ರಗಳನ್ನು ತೆರೆಯಲಾಗಿದೆ. ಆಂಧ್ರದ ಗಡಿಯಲ್ಲಿ ಅಂಕಾಲಮಡುಗು ಮತ್ತು ಕಂಬಾಲಹಳ್ಳಿ ಮತ್ತು ಶ್ರೀನಿವಾಸಪುರ ರಸ್ತೆಯ ಮಾಡಿಕೆರೆ ಕ್ರಾಸ್‌ ಮತ್ತು ಬೆಂಗಳೂರು ರಸ್ತೆಯ ಕೈವಾರ ಕ್ರಾಸ್‌ ಬಳಿಯಲ್ಲಿ ತೆರೆಯಲಾಗಿದೆ. ಇವು ತೀವ್ರ ನಿಗಾವನ್ನು ವಹಿಸಲಿವೆ ಎಂದು ತಿಳಿಸಿದರು.

ಸಿ ವಿಜನ್‌: ಚುನಾವಣೆಯಲ್ಲಿ ನಡೆಯಲಿರುವ ಅನಧಿಕೃತ ಸಭೆ ಸಮಾರಂಭಗಳು ಮತ್ತು ಅಕ್ರಮವಾಗಿ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ಸಿ ವಿಜನ್‌ ಎನ್ನುವ ಅಪ್ಲಿಕೇಷನ್‌ ಮೂಲಕ ಎಫ್‌ಎಸ್‌ಟಿ, ಮತ್ತು ಎಂಸಿಸಿ ಅಧಿಕಾರಿಗಳು ನಿಗಾ ವಹಿಸುವರು ಎಂದು ತಿಳಿಸಿದರು.

2.14 ಲಕ್ಷ ಮತದಾರರು: ಈ ಬಾರಿ ತಾಲೂಕಿನಾದ್ಯಂತ ಒಟ್ಟು 2 ಲಕ್ಷ 14 ಸಾವಿರ ಮತದಾರರು ಮತದಾನದಲ್ಲಿ ಭಾಗವಹಿಸುತ್ತಿದ್ದಾರೆ. ಅದರಲ್ಲಿ ಮಹಿಳೆಯರು 1.7 ಲಕ್ಷ , ಪುರುಷರು 1.7 ಲಕ್ಷ ಇದ್ದಾರೆ. ತಾಲೂಕಿನಾದ್ಯಂತ ಒಟ್ಟು 265 ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ನಗರ ಭಾಗದಲ್ಲಿ 66, ಗ್ರಾಮೀಣ ಭಾಗದಲ್ಲಿ 199 ಮತಗಟ್ಟೆಗಳು ತೆರೆಯಲಾಗುವುದು. ತಾಲೂಕಿನ ಮತದಾರರು ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಗ್ರತೆ ವಹಿಸಿ ಚುನಾವಣೆ ಸುಸೂತ್ರವಾಗಿ ನಡೆಯಲು ಅನುವು ಮಾಡುಕೊಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಕಚೇರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ