ಆ್ಯಪ್ನಗರ

ರೇಷ್ಮೆ ಬೆಂಬಲ ಬೆಲೆ ನುಂಗಿದ ಮಾನದಂಡ!

ರೇಷ್ಮೆ ಬೆಲೆ ಕುಸಿದ ಹಿನ್ನಲೆಯಲ್ಲಿ ಬೆಂಬಲ ಬೆಲೆಯನ್ನೇನ್ನೇನೋ ರಾಜ್ಯ ಸರಕಾರ ಘೋಷಿಸಿದೆ. ಆದರೆ ಈ ಬೆಂಬಲ ಬಲೆ ರಕ್ಷ ಣಾತ್ಮಕ ದರ ಪಡೆಯಲು ನಿಗದಿಪಡಿಸಿರುವ ಗೂಡಿನ ಗುಣಮಟ್ಟದ ಶ್ರೇಣಿಯ ಆಧಾರದ ಮಾನದಂಡ ರಾಜ್ಯದ ಅತೀದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆಗೆ ಗೂಡು ತರುವ ರೇಷ್ಮೆ ಬೆಳೆಗಾರರಿಗೆ ನಯಾ ಪೈಸೆಯೂ ಸಿಗದಂತೆ ಮಾಡಿದೆ.

Vijaya Karnataka 11 Aug 2018, 8:34 pm
ಶ್ರೇಣಿಕೃತ ಕೇಂದ್ರವನ್ನೇ ಕಲ್ಪಿಸದೆ ಶ್ರೇಣೀಕೃತ ಮಾನದಂಡದಡಿ ಬೆಂಬಲ ಬೆಲೆ ನೀಡಲು ಸರಕಾರದ ಆದೇಶ
Vijaya Karnataka Web Reshme


ಮಂಜುನಾಥ್‌ ಶಿಡ್ಲಘಟ್ಟ

ರೇಷ್ಮೆ ಬೆಲೆ ಕುಸಿದ ಹಿನ್ನಲೆಯಲ್ಲಿ ಬೆಂಬಲ ಬೆಲೆಯನ್ನೇನ್ನೇನೋ ರಾಜ್ಯ ಸರಕಾರ ಘೋಷಿಸಿದೆ. ಆದರೆ ಈ ಬೆಂಬಲ ಬಲೆ ರಕ್ಷ ಣಾತ್ಮಕ ದರ ಪಡೆಯಲು ನಿಗದಿಪಡಿಸಿರುವ ಗೂಡಿನ ಗುಣಮಟ್ಟದ ಶ್ರೇಣಿಯ ಆಧಾರದ ಮಾನದಂಡ ರಾಜ್ಯದ ಅತೀದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆಗೆ ಗೂಡು ತರುವ ರೇಷ್ಮೆ ಬೆಳೆಗಾರರಿಗೆ ನಯಾ ಪೈಸೆಯೂ ಸಿಗದಂತೆ ಮಾಡಿದೆ.

ಹೌದು ರೇಷ್ಮೆಗೂಡಿನ ಗುಣಮಟ್ಟ ವರ್ಗೀಕರಿಸುವ ಶ್ರೇಣಿಕರಣದ ಕೇಂದ್ರವೇ ಶಿಡ್ಲಘಟ್ಟ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿರುವುದು ಸ್ಥಳೀಯ ರೇಷ್ಮೆ ಬೆಳೆಗಾರರ ಬೆಂಬಲ ಬೆಲೆ ಆಸೆಗೆ ಕಲ್ಲು ಹಾಕಿದೆ.

ದ್ವಿತಳಿ, ಮಿಶ್ರತಳಿ 3 ಹಂತದ ಶ್ರೇಣಿಗಳಾಗಿ ವರ್ಗೀಕರಣ:
ಜು.19ರಿಂದ ಅನ್ವಯವಾಗುವಂತೆ ಸರಕಾರವು ರೇಷ್ಮೆಗೂಡಿಗೆ ರಕ್ಷ ಣಾತ್ಮಕ ದರ ನಿಗಧಿಪಡಿಸಿದ್ದು, ರೇಷ್ಮೆಗೂಡಿನ ಗುಣಮಟ್ಟದ ಶ್ರೇಣಿ ಆಧಾರದ ಮೇಲೆ ರಕ್ಷ ಣಾತ್ಮಕ ದರದಂತೆ ಬೆಂಬಲ ಬೆಲೆ ನೀಡಲು ತೀರ್ಮಾನಿಸಿದೆ. ದ್ವಿತಳಿಯ ಶ್ರೇಣಿ-1ರ ರೇಷ್ಮೆಗೂಡಿಗೆ 350, ಶ್ರೇಣಿ-2 ಗೂಡಿಗೆ 300 ರೂ ಹಾಗೂ ಶ್ರೇಣಿ-3 ಗೂಡಿಗೆ 260 ರೂ ನಿಗಧಿಪಡಿಸಲಾಗಿದೆ.ಮಿಶ್ರ ತಳಿಯ ಶ್ರೇಣಿ-1ರ ರೇಷ್ಮೆಗೂಡಿಗೆ 300, ಶ್ರೇಣಿ-2 ಗೂಡಿಗೆ 265 ರೂ ಹಾಗೂ ಶ್ರೇಣಿ-3 ಗೂಡಿಗೆ 220 ರೂ. ನಿಗದಿಪಡಿಸಲಾಗಿದೆ. ಮಿಶ್ರ ತಳಿ ಹಾಗೂ ದ್ವಿತಳಿಯ ರೇಷ್ಮೆಗೂಡಿನ ಪರೀಕ್ಷೆ ಆಧಾರಿತ ವರ್ಗೀಕರಣ ಮತ್ತು ಶ್ರೇಣಿಕರಣ ಮಾಡಿ ರೇಷ್ಮೆಗೂಡನ್ನು ಶ್ರೇಣಿ-1, ಶ್ರೇಣಿ-2 ಹಾಗೂ ಶ್ರೇಣಿ-3 ಎಂದು ವರ್ಗೀಕರಿಸಿ ಗುಣಮಟ್ಟವನ್ನು ನಿಗದಿಪಡಿಸಲಾಗುವುದು. ಆದರೆ ರೇಷ್ಮೆಗೂಡಿನ ಪರೀಕ್ಷೆ ಆಧಾರಿತ ವರ್ಗೀಕರಣ ಮತ್ತು ಶ್ರೇಣೀಕರಣದ ಕೇಂದ್ರ ಶಿಡ್ಲಘಟ್ಟದಲ್ಲಿ ಇನ್ನೂ ನಿರ್ಮಾಣದ ಹಂತದಲ್ಲಿರುವುದು ಶ್ರೇಣಿಕೃತ ವ್ಯವಸ್ಥೆ ಜಾರಿಯಿಲ್ಲದೆ ರಕ್ಷಣಾತ್ಮಕ ದರ ಸಿಗದಂತೆ ಮಾಡಿದೆ.

ಪರ್ಯಾಯ ಸ್ಟಾಟಿಸ್ಟಿಕಲ್‌ ಸಾಫ್ಟ್‌ವೇರ್‌ ವಿಧಾನದಲ್ಲೂ ಲೋಪ:
ಶ್ರೇಣಿಕರಣ ಕೇಂದ್ರವಿಲ್ಲದೆ ಶ್ರೇಣಿಕರಣ ಮಾಡಲು ಸಾಧ್ಯವಾಗದಕ್ಕೆ ಶಿಡ್ಲಘಟ್ಟದ ಮಾರುಕಟ್ಟೆಯಲ್ಲಿ ಸದ್ಯಕ್ಕೆ 'ಸ್ಟಾಟಿಸ್ಟಿಕಲ್‌ ಸಾಫ್ಟ್‌ವೇರ್‌ ವಿಧಾನ' ಅನುಸರಿಸಲಾಗುತ್ತಿದೆ. ಇದರನ್ವಯ ಮಾರುಕಟ್ಟೆ ದರ ಬೆಂಬಲ ಬೆಲೆಗಿಂತ ಕಡಿಮೆ ಆದಾಗ ಮಾತ್ರ ವ್ಯತ್ಯಾಸದ ಮೊತ್ತವನ್ನು ರಕ್ಷ ಣಾತ್ಮಕ ದರದ ರೂಪದಲ್ಲಿ ರೈತರಿಗೆ ನೀಡಲಾಗುತ್ತದೆ.ಅದರಂತೆ ಇಲಾಖೆಯೆ ಮಾರುಕಟ್ಟೆಯ ಆಯಾ ದಿನದ ವಹಿವಾಟು, ಕನಿಷ್ಠ, ಸರಾಸರಿ, ಗರಿಷ್ಠ ಬೆಲೆ ವಹಿವಾಟವನ್ನು ಆಧರಿಸಿ 'ಸ್ಟಾಟಿಸ್ಟಿಕಲ್‌ ಸಾಫ್ಟ್‌ವೇರ್‌ ವಿಧಾನದಲ್ಲಿ ಯಾವ ರೈತನಿಗೆ ಎಷ್ಟು ಹಣವನ್ನು ರಕ್ಷ ಣಾತ್ಮಕ ದರವನ್ನಾಗಿ ನೀಡಬೇಕೆಂಬುದನ್ನು ನಿರ್ಧರಿಸಲಾಗುತ್ತದೆ.

ಆದರೆ ಶಿಡ್ಲಘಟ್ಟದ ಮಾರುಕಟ್ಟೆಯಲ್ಲಿ ಜು.19ರ ನಂತರ ಇದುವರೆಗೂ ನಡೆದ ವಹಿವಾಟಿನ ಆಧಾರದ ಮೇಲೆ ರಕ್ಷ ಣಾತ್ಮಕ ದರ ನಿಗದಿಪಡಿಸಿದ ಪಟ್ಟಿಯಂತೆ ಶಿಡ್ಲಘಟ್ಟ ಗೂಡು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಿದ ಯಾವೊಬ್ಬ ರೈತನಿಗೂ ಒಂದೇ ಒಂದು ಪೈಸೆಯೂ ಹಣ ಬಂದಿಲ್ಲ. ಇನ್ನೂ ಜು.19ರಿಂದ 2 ತಿಂಗಳ ಮಟ್ಟಿಗೆ ಅಂದರೆ ಸೆ.19ರವರಗೂ ಅಥವಾ ಮಿಶ್ರ ತಳಿ ರೇಷ್ಮೆಗೂಡಿನ ಸರಾಸರಿ ಬೆಲೆಯು ಪ್ರತಿ ಕೆಜಿಗೆ 300 ರೂ ಹಾಗೂ ದ್ವಿತಳಿ ರೇಷ್ಮೆಗೂಡಿನ ಪ್ರತಿ ಕೆಜಿಗೆ 350 ರೂ.ಮೀರಿದಲ್ಲಿ ರಕ್ಷ ಣಾತ್ಮಕ ಬೆಲೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿರುವುದು ಬೆಳೆಗಾರರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಹೀಗಾಗಿ ರೇಷ್ಮೆ ಗೂಡಿನ ಬೆಲೆ ಕುಸಿತದಿಂದ ನಷ್ಟಕ್ಕೊಳಗಾಗಿರುವ ರೇಷ್ಮೆ ಬೆಳೆಗಾರರಿಗೆ ಬೆಂಬಲ ಬೆಲೆ ಬರೀ ಕಣ್ಣೊರಿಸುವ ತಂತ್ರವಾಗಿ ಮಾರ್ಪಟ್ಟಿದೆ.
----
ರೇಷ್ಮೆಗೂಡಿನ ಬೆಲೆ ಕುಸಿದಾಗ ಸರಕಾರ ಬೆಂಬಲ ಬೆಲೆ ಘೋಷಿಸಿದಾಗ ಬಹಳ ಸಂತಸ ಆಯ್ತು. ಆದರೆ ಬೆಂಬಲ ಬೆಲೆ ನೀಡಲು ನಿಗದಿಪಡಿಸಿದ ಮಾನ ದಂಢಗಳು ನಮಗೆ ಯಾರಿಗೂ ಬೆಂಬಲ ಬೆಲೆ ಸಿಗಲು ಸಾಧ್ಯವೇ ಇಲ್ಲ.ಬೇರೆ ಗೂಡು ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸಿದ ರೈತರಿಗೆ ಒಂದಷ್ಟು ಬೆಂಬಲ ಬೆಲೆ ದೊರೆತಿದ್ದರೂ ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಿ ಯಾವೊಬ್ಬ ರೈತನಿಗೂ ಬೆಂಬಲ ಬೆಲೆ ದೊರೆತಿಲ್ಲ.ಸರಕಾರದ ಈ ನಿಯಮ ತಟ್ಟೆಯಲ್ಲಿ ಊಟ ಇಟ್ಟು ಬಗಲಲ್ಲಿ ದೊಣ್ಣೆ ಹಿಡಿದು ತಿನ್ನು, ತಿನ್ನು ಎಂದು ಬಲವಂತ ಮಾಡಿದಂತಿದೆ.

-ನಾರಾಯಣಸ್ವಾಮಿ ರೇಷ್ಮೆ ಬೆಳೆಗಾರ

ಸರಕಾರವು ಕಳೆದ ತಿಂಗಳು ಜು.19ರಿಂದ ಅನ್ವಯವಾಗುವಂತೆ ರೇಷ್ಮೆಗೂಡಿಗೆ ರಕ್ಷ ಣಾತ್ಮಕ ದರ ನಿಗಧಿಪಡಿಸಿದ್ದು, ರೇಷ್ಮೆಗೂಡಿನ ಗುಣಮಟ್ಟದ ಶ್ರೇಣಿ ಆಧಾರದ ಮೇಲೆ ರಕ್ಷ ಣಾತ್ಮಕ ದರದಂತೆ ಬೆಂಬಲ ಬೆಲೆ ನೀಡಲು ತೀರ್ಮಾನಿಸಿದೆ.ಆದರೆ ಸಧ್ಯಕ್ಕೆ ಎಲ್ಲೆಲ್ಲಿ ಗೂಡಿನ ಪರೀಕ್ಷೆ ಆಧಾರಿತ ವರ್ಗೀಕರಣ ಹಾಗೂ ಶ್ರೇಣೀಕರಣ ಮಾಡುವ ವ್ಯವಸ್ಥೆ ಎಲ್ಲಿ ಇಲ್ಲವೋ ಅಲ್ಲೆಲ್ಲಾ ಸ್ಟಾಟಿಸ್ಟಿಕಲ್‌ ಸಾಫ್ಟ್‌ವೇರ್‌ ವಿಧಾ®ವನ್ನು ಪರಿಗಣಿಸಿ ರಕ್ಷ ಣಾತ್ಮಕ ಬೆಲೆ ನೀಡಲು ತೀರ್ಮಾನಿಸಿದೆ.ಪ್ರತಿ ದಿನವೂ ಇಲಾಖೆಯು ಆಯಾ ದಿನದ ವಹಿವಾಟಿಗೆ ಅನುಗುಣವಾಗಿ ಬೆಂಬಲ ಬೆಲೆ ಯಾರಿಗೆ ಎಷ್ಟು ಸಿಗಲಿದೆ ಎನ್ನುವುದನ್ನು ನಿರ್ಧರಿಸಲಿದೆ. ಅದರಂತೆ ಇಲ್ಲಿನ ಮಾರುಕಟ್ಟೆಗೆ ರಕ್ಷ ಣಾತ್ಮಕ ಬೆಂಬಲ ಬೆಲೆ ದೊರೆತಿಲ್ಲ.

-ಸತೀಶ್‌ ಬಿ.ಸಾತೇನಹಳ್ಳಿ, ಉಪ ನಿರ್ದೇಶಕ, ರೇಷ್ಮೆಗೂಡು ಮಾರುಕಟ್ಟೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ