ಆ್ಯಪ್ನಗರ

ಅಕ್ರಮ ಸಂಬಂಧದ ಶಂಕೆ, ಪತ್ನಿಯ ಕೊಲೆ

ದಂಪತಿಗಳ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣ ತಾಲೂಕಿನ ನಗರಗೆರೆ ಹೋಬಳಿಯ ಗೊಟ್ಲಕುಂಟೆ ಗ್ರಾಮದ ಹೊರವಲಯದ ಮನೆಯೊಂದರಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.

Vijaya Karnataka 23 Jun 2019, 5:00 am
ಗೌರಿಬಿದನೂರು: ದಂಪತಿಗಳ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣ ತಾಲೂಕಿನ ನಗರಗೆರೆ ಹೋಬಳಿಯ ಗೊಟ್ಲಕುಂಟೆ ಗ್ರಾಮದ ಹೊರವಲಯದ ಮನೆಯೊಂದರಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.
Vijaya Karnataka Web suspect of illegal relationship murder of wife
ಅಕ್ರಮ ಸಂಬಂಧದ ಶಂಕೆ, ಪತ್ನಿಯ ಕೊಲೆ


ರಾಧಮ್ಮ(46) ಕೊಲೆಯಾದವರು. ಪತಿ ಅಶ್ವತ್ಥಪ್ಪ (49) ಕೊಲೆ ಆರೋಪಿ.

ನಡೆದಿದ್ದೇನು?:
ಮೂಲತಃ ವಾಟದ ಹೊಸಹಳ್ಳಿಯ ಅಶ್ವತ್ಥಪ್ಪ ಬೆಂಗಳೂರಿನ ಹೆಬ್ಗಗೋಡು, ಇನ್ನೆಕ್ಕಿ ಗ್ರಾಮದ ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಅದೇ ಗ್ರಾಮದ ಗೋವಿಂದಪ್ಪ, ಮುದ್ದಮ್ಮ ಅವರ ಮಗಳು ರಾಧಮ್ಮ ಅವರನ್ನು ಕಳೆದ 22 ವರ್ಷಗಳ ಹಿಂದೆ ಮದುವೆಯಾಗಿದ್ದರು. ಕಳೆದೆರಡು ವರ್ಷಗಳಿಂದ ಗೌರಿಬಿದನೂರು ತಾಲೂಕಿನ ಗೊಟ್ಲಗುಂಟೆ ಗ್ರಾಮದಲ್ಲಿ ಎರಡು ಎಕರೆ ಜಮೀನು ಮಾಡಿಕೊಂಡು, ಅಲ್ಲೇ ಮನೆ ನಿರ್ಮಿಸಿಕೊಂಡು ವಾಸವಾಗಿದ್ದರು. ಆದರೆ ಪತ್ನಿ ರಾಧಮ್ಮಳ ನಡವಳಿಕೆಯ ಮೇಲೆ ಅನುಮಾನಗೊಂಡು ಆಗಾಗ್ಗೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಶುಕ್ರವಾರ ರಾತ್ರಿ ಅದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದ್ದು, ಶನಿವಾರ ಬೆಳಗಿನ ಜಾವವೂ ಗಲಾಟೆ ನಡೆದು, ಅಶ್ವತ್ಥಪ್ಪ ಅವರು ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಆರೋಪಿ ಶರಣು: ಹೆಂಡತಿಯನ್ನು ಕೊಲೆ ಮಾಡಿ ಅಶ್ವತ್ಥಪ್ಪ ನೇರವಾಗಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ಬಂದು ಮಚ್ಚಿನ ಸಮೇತ ಶರಣಾಗಿದ್ದಾನೆ.

ಪ್ರಕರಣ ದಾಖಲು: ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಡಿವೈಎಸ್ಪಿ ಪ್ರಭುಶಂಕರ್‌, ವೃತ್ತ ನಿರೀಕ್ಷ ಕ ವೈ.ಅಮರನಾರಾಯಣ್‌ ಮತ್ತು ಎಸ್ಸೈ ಅವಿನಾಶ್‌ ಸ್ಥಳಕ್ಕೆ ಪರಿಶೀಲನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ