ಆ್ಯಪ್ನಗರ

ತಾಲೂಕು ಹಿಂದುಳಿದಿದ್ದರೂ ಪ್ರತಿಭೆಗಳಿಗೆ ಕೊರತೆ ಇಲ್ಲ

ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರ ಇಡೀ ರಾಜ್ಯದಲ್ಲಿ ಅತ್ಯಂತ ಹಿಂದುಳಿದಿದ್ದರೂ, ಇಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಎಂದು ತುಮಕೂರು ಜಿಲ್ಲೆಯ ಹಿರೇಮಠದ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 10 Jun 2019, 3:23 pm
ಬಾಗೇಪಲ್ಲಿ: ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರ ಇಡೀ ರಾಜ್ಯದಲ್ಲಿ ಅತ್ಯಂತ ಹಿಂದುಳಿದಿದ್ದರೂ, ಇಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಎಂದು ತುಮಕೂರು ಜಿಲ್ಲೆಯ ಹಿರೇಮಠದ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web taluk is backward but not lack of talents
ತಾಲೂಕು ಹಿಂದುಳಿದಿದ್ದರೂ ಪ್ರತಿಭೆಗಳಿಗೆ ಕೊರತೆ ಇಲ್ಲ


ಪಟ್ಟಣದ ದ್ವಾರಕ ಪಾರ್ಟಿ ಹಾಲ್‌ನಲ್ಲಿ ಪಿ.ಎಲ್‌.ವೆಂಕಟರಾಮ ರೆಡ್ಡಿ ಚಾರಿಟಬಲ್‌ ಟ್ರಸ್ಟ್‌ ನಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಈ ತಾಲೂಕು ಹಿಂದುಳಿದ ಪ್ರದೇಶ ಎಂದು ಹಣೆಪಟ್ಟು ಕಟ್ಟಿಕೊಂಡಿದೆ, ಆದರೆ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡುವುದರಲ್ಲಿ ಹಿಂದುಳಿದಿಲ್ಲ. ಈ ತಾಲೂಕಿನಲ್ಲಿ ದಾನಿಗಳ ಕೊರತೆ ಇಲ್ಲ ಯಾವುದೇ ಸಂದರ್ಭದಲ್ಲಿಯೂ ಪ್ರತಿಭೆಗಳಿಗೆ ಸಹಾಯ ಹಸ್ತ ನೀಡುವವರು ಬಹಳಷ್ಟು ಮಂದಿ ಇದ್ದಾರೆ ಎಂದರು.

ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಪಿ.ಎಲ್‌.ವೆಂಕಟರಾಮ ರೆಡ್ಡಿ ಮಾತನಾಡಿ, ದೇಶಕ್ಕೆ ಭದ್ರ ಬುನಾದಿ ಹಾಕುವ ಜವಾಬ್ದಾರಿ ಶಿಕ್ಷ ರ ಮೇಲಿದೆ. ಮಕ್ಕಳ ಬೆಳವಣಿಗೆ ಶಿಕ್ಷಕರ ಮೇಲೆ ಅವಲಂಬಿತವಾರುತ್ತದೆ. ಶಿಕ್ಷ ಕರ ಬೋಧನೆಯಿಂದ ಸಮಾಜದ ಪರಿವರ್ತನೆಯಾಗುತ್ತದೆ. ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡದೆ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಮಾನವೀಯ ಮೌಲ್ಯಗಳುಳ್ಳ ಶಿಕ್ಷ ಣ ನೀಡಬೇಕು ಎಂದರು.

ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಪಿ.ಎಲ್‌.ವೆಂಕಟರಾಮರೆ ರಡ್ಡಿ, ನಟ ಶ್ರೀನಿವಾಸಮೂರ್ತಿ, ಎಂ.ಎಸ್‌. ನಳಿನಿ ರೆಡ್ಡಿ, ಬಿ.ಆರ್‌.ಲಕ್ಷ ಣ್‌ರಾವ್‌ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ 350 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, 450 ವಿದ್ಯಾರ್ಥಿಗಳಿಗೆ ನೋಟ್‌ಬುಕ್‌, ಸಮವಸ್ರ ಮತ್ತು ಪಾತಪಾಳ್ಯ ಸರಕಾರಿ ಪ್ರೌಢಶಾಲೆಗೆ ಕಂಪ್ಯೂಟರ್‌ ವಿತರಿಸಲಾಯಿತು.

ಬಿಳ್ಳೂರು ನಾಗರಾಜು, ಪತ್ರಕರ್ತರ ಸಂಘದ ಗೌರಾವಧ್ಯಕ್ಷ ಡಿ.ಎನ್‌. ಕೃಷ್ಣಾರೆಡ್ಡಿ, ಬೈರಾರೆಡ್ಡಿ, ಚೌಡರೆಡ್ಡಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ