ಆ್ಯಪ್ನಗರ

ಮುಕ್ತ, ಪಾರದರ್ಶಕ ಮತದಾನದಲ್ಲಿ ಮತಗಟ್ಟೆ ಅಧಿಕಾರಿ ಪಾತ್ರ ಹೆಚ್ಚು

ಯಾವುದೇ ಚುನಾವಣೆಯಾಗಲಿ ಮುಕ್ತ ಹಾಗೂ ಪಾರದರ್ಶಕವಾಗಿ ನಡೆಯಬೇಕಾದರೆ ಚುನಾವಣೆಯ ನಾನಾ ಕಾರ್ಯಗಳಿಗೆ, ತಂಡಗಳಿಗೆ ನಿಯೋಜನೆಗೊಂಡ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು ನಿಷ್ಪಕ್ಷ ಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಚುನಾವಣಾ ಸಿಬ್ಬಂದಿಯ ಮುಖ್ಯ ತರಬೇತುದಾರ ಎಚ್‌.ಸಿ.ಮುನಿರಾಜು ಹೇಳಿದರು.

Vijaya Karnataka 22 May 2019, 5:00 am
ಶಿಡ್ಲಘಟ್ಟ: ಯಾವುದೇ ಚುನಾವಣೆಯಾಗಲಿ ಮುಕ್ತ ಹಾಗೂ ಪಾರದರ್ಶಕವಾಗಿ ನಡೆಯಬೇಕಾದರೆ ಚುನಾವಣೆಯ ನಾನಾ ಕಾರ್ಯಗಳಿಗೆ, ತಂಡಗಳಿಗೆ ನಿಯೋಜನೆಗೊಂಡ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು ನಿಷ್ಪಕ್ಷ ಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಚುನಾವಣಾ ಸಿಬ್ಬಂದಿಯ ಮುಖ್ಯ ತರಬೇತುದಾರ ಎಚ್‌.ಸಿ.ಮುನಿರಾಜು ಹೇಳಿದರು.
Vijaya Karnataka Web the role of the booth officer in open and transparent polls is important
ಮುಕ್ತ, ಪಾರದರ್ಶಕ ಮತದಾನದಲ್ಲಿ ಮತಗಟ್ಟೆ ಅಧಿಕಾರಿ ಪಾತ್ರ ಹೆಚ್ಚು


ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು, ಸಿಬ್ಬಂದಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಇದೇ 29ರಂದು ನಡೆಯುವ ನಗರಸಭೆಯ ಚುನಾವಣೆಯ ಯಶಸ್ಸು ನಿಮ್ಮ ಕಾರ್ಯಕ್ಷ ಮತೆಯ ಮೇಲೆ ಆಧಾರಪಟ್ಟಿದೆ. ಪ್ರತಿ ಚುನಾವಣೆಯಲ್ಲೂ ಹೊಸ ಹೊಸ ಸವಾಲುಗಳು ಎದುರಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಮತಗಟ್ಟೆಗಳಲ್ಲಿ ನಡೆಯುವ ಮತದಾನದ ಗೌಪ್ಯತೆಯನ್ನು ಉಲ್ಲಂಘಿಸುವ ಘಟನೆಗಳು ಹೆಚ್ಚುತ್ತಿವೆ. ಇದು ಮುಕ್ತ, ಪಾರದರ್ಶಕ ಹಾಗೂ ಚುನಾವಣೆ ಗೌಪ್ಯತೆಗೆ ಕಪ್ಪು ಚುಕ್ಕೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗೌಪ್ಯತೆ ಕಾಪಾಡಿ: ಕೆಲ ಮತದಾರರು ತಾವು ಮತ ಚಲಾಯಿಸಿದ್ದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಅದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡುವುದು, ವ್ಯಾಟ್ಸ್‌ಪ್‌ ಸೇರಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಇದು ಮತದಾನದ ಗೌಪ್ಯತೆಯ ಉಲ್ಲಂಘನೆ ಆಗುತ್ತದೆ. ಹಾಗಾಗಿ ಮತಗಟ್ಟೆಗಳಲ್ಲಿ ಮತದಾರರು ಮೊಬೈಲ್‌ ಬಳಸುವುದು ನಿಷೇಧಿಸಬೇಕು. ಮತಗಟ್ಟೆಯ ಒಳಗೆ ಮೊಬೈಲ್‌ ತರಲು ಅವಕಾಶವೇ ಕೊಡದಂತೆ ಎಚ್ಚರಿಕೆ ವಹಿಸಬೇಕು. ಇದರಿಂದ ಮತದಾನದ ಗೌಪ್ಯತೆಯ ಉಲ್ಲಂಘನೆ ಪ್ರಕರಣಗಳನ್ನು ತಡೆಯಲು ಸಾಧ್ಯ ಎಂದು ತಿಳಿಸಿದರು.

ಚುನಾವಣಾ ಆಯೋಗವು ಸೂಚಿಸಿದ ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾರ ಮತ ಚಲಾಯಿಸಲು ಅವಕಾಶ ಕೊಡಬೇಕು. ಎರಡು ಕಡೆ ಮತ ಚಲಾಯಿಸಲು ಅವಕಾಶ ಆಗದಂತೆ ನಿರ್ದಿಷ್ಟ ಬೆರಳಿಗೆ ಶಾಯಿಯನ್ನು ಹಾಕಬೇಕು ಎಂದು ವಿವರಿಸಿದರು.

ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಕಡ್ಡಾಯವಾಗಿ ಏನು ಮಾಡಬೇಕು, ಏನನ್ನು ಮಾಡಬಾರದು ಎಂಬ ಮಾಹಿತಿಗಳನ್ನು ತಿಳಿಸಿದರು.

ಲೋಪವಾಗದಂತೆ ಎಚ್ಚರವಿರಲಿ: ತಹಸೀಲ್ದಾರ್‌ ಎಸ್‌.ಅಜಿತ್‌ ಕುಮಾರ್‌ ಮಾತನಾಡಿ, ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಯಾರೇ ಆಗಲಿ ಚುನಾವಣಾ ಆಯೋಗ, ಹಿರಿಯ ಅಧಿಕಾರಿಗಳು ಕಾಲಕಾಲಕ್ಕೆ ಸೂಚಿಸಿವ ನಿಯಮಗಳನ್ನು ಪಾಲಿಸಬೇಕು. ಏನೇ ಬದಲಾವಣೆಗಳಾದರೆ ಅದರ ಸೂಚನೆ ನೀಡಲಾಗುವುದು. ಅದರಂತೆ ಕಾರ್ಯನಿರ್ವಹಿಸಬೇಕು. ಚುನಾವಣೆ ಕಾರ್ಯದಲ್ಲಿ ಸಣ್ಣ ಪುಟ್ಟ ಲೋಪ ದೋಷವಾದರೂ ಗಂಭೀರವಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದರು.

ಮತಗಟ್ಟೆಯಲ್ಲಿ ನಿಯೋಜನೆಗೊಂಡ ಎಲ್ಲರಿಗೂ ಒಂದೇ ಕಾನೂನು. ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಕೆ ನೀಡಿದರು.

ಸಹಾಯಕ ಚುನಾವಣಾಧಿಕಾರಿ ಶಿವಕುಮಾರ್‌, ಚುನಾವಣೆ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ