ಆ್ಯಪ್ನಗರ

ಮತದಾನ ನಮ್ಮ ಹಕ್ಕು, ಚುನಾವಣೆ ಬಹಿಷ್ಕಾರ ಇಲ್ಲ

ಮತದಾನ ನಮಗೆ ಸಂವಿಧಾನ ನೀಡಿರುವ ಹಕ್ಕು. ಯಾವುದೇ ಕಾರಣಕ್ಕೂ ನಾವು ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುವುದಿಲ್ಲ ಎಂದು ನೆರ್ನಕಲ್ಲು, ಮಡಬಹಳ್ಳಿ, ಮಾದರಕಲ್ಲು ಗ್ರಾಮಸ್ಥರು ತಿಳಿಸಿದ್ದಾರೆ.

Vijaya Karnataka 16 Mar 2019, 5:00 am
ಸ್ಪಷ್ಟನೆ ನೀಡಿದ ನೆರ್ನಕಲ್ಲು, ಮಡಬಹಳ್ಳಿ ಗ್ರಾಮಸ್ಥರು | ಗಣಿ ಮಾಲೀಕರಿಂದ ಹಣ ವಸೂಲಿಗೆ ಕೆಲವರ ತಂತ್ರವೆಂದ ಜನ
Vijaya Karnataka Web voting is our right no election boycott
ಮತದಾನ ನಮ್ಮ ಹಕ್ಕು, ಚುನಾವಣೆ ಬಹಿಷ್ಕಾರ ಇಲ್ಲ


ವಿಕ ಸುದ್ದಿಲೋಕ ಚಿಂತಾಮಾಣಿ ಗ್ರಾಮಾಂತರ


ಮತದಾನ ನಮಗೆ ಸಂವಿಧಾನ ನೀಡಿರುವ ಹಕ್ಕು. ಯಾವುದೇ ಕಾರಣಕ್ಕೂ ನಾವು ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುವುದಿಲ್ಲ ಎಂದು ನೆರ್ನಕಲ್ಲು, ಮಡಬಹಳ್ಳಿ, ಮಾದರಕಲ್ಲು ಗ್ರಾಮಸ್ಥರು ತಿಳಿಸಿದ್ದಾರೆ.

ಎರಡು ದಿನಗಳ ಹಿಂದೇ ನಮ್ಮ ಗ್ರಾಮಗಳ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಅಕ್ರಮವೆಂದು ಹಾಗೂ ಕಲ್ಲು ಗಣಿಗಾರಿಕೆ ನಿಲ್ಲಿಸದಿದ್ದರೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆಂದು ಕೆಲ ಮುಖಂಡರು ಹೇಳಿಕೆ ನೀಡಿದ್ದರು. ಅವರು ಗ್ರಾಮಸ್ಥರ ಜತೆ ಯಾವುದೇ ರೀತಿಯಲ್ಲಿ ಚರ್ಚೆ ಮಾಡಿಲ್ಲ. ತಮಗೆ ಬೇಕಾದಂತೆ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ಗ್ರಾಮಸ್ಥರನ್ನು ದಾರಿತಪ್ಪಿಸಿದ್ದಾರೆ. ಲೋಕಸಭೆ ಚುನಾವಣೆಯನ್ನು ನೆರ್ನಕಲ್ಲು, ಮಡಬಹಳ್ಳಿ ಹಾಗೂ ಮಾದರಕಲ್ಲು ಗ್ರಾಮಸ್ಥರು ಬಹಿಷ್ಕಾರ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಪೆರಮಾಚನಹಳ್ಳಿ ಗ್ರಾಪಂ ಸದಸ್ಯ ಶ್ಯಾಮೇಗೌಡ, ಮಡಬಹಳ್ಳಿಯ ಹಿರಿಯ ಮುಖಂಡ ಕೆ.ವಿ.ವೆಂಕಟೇಶ್‌ ಮೂರ್ತಿ ನೇತೃತ್ವದಲ್ಲಿ ಹಲವು ಗ್ರಾಮಸ್ಥರು ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿ, ಕಲ್ಲು ಗಣಿಗಾರಿಕೆ ವಿರುದ್ಧ ಆಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅದರ ಕಲ್ಲುಗಣಿಗಾರಿಕೆಯು ಕಾನೂನುಬದ್ಧವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ನಾವು ಯಾವುದೇ ರೀತಿಯಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಿಲ್ಲವೆಂದು ಸ್ಪಷ್ಟನೆ ನೀಡಿದರು.

ಗ್ರಾಮದ ಕೆಲ ಮುಖಂಡರು ಗ್ರಾಮಸ್ಥರಿಂದ ಯಾವುದೇ ರೀತಿಯಲ್ಲಿ ಅಭಿಪ್ರಾಯ ಪಡೆಯದೇ ಬೆರಳಣಿಕೆಯಷ್ಟು ಮುಖಂಡರನ್ನು ಒಗ್ಗೂಡಿಸಿಕೊಂಡು ಕಲ್ಲು ಗಣಿಗಾರಿಕೆ ಮಾಲೀಕರಿಂದ ಹಣ ವಸೂಲಿ ಮಾಡಲು ಚುನಾವಣೆ ಬಹಿಷ್ಕಾರ ಮಾಡುತ್ತೇವೆಂದು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿರುವುದು ಸರಿಯಲ್ಲವೆಂದರು.

ಈ ವೇಳೆ ಕೃಷಿಕ ಸಮಾಜದ ನಿರ್ದೇಶಕ ಕೆ.ವಿ.ವೆಂಕಟೇಶ್‌ ಮೂರ್ತಿ, ಆನಂದ, ಕರವೇ ಜಿಲ್ಲಾ ಕಾರ್ಯಾಧರ್ಶಿ ಅಮರನಾಥ್‌, ನಾರಾಯಣಸ್ವಾಮಿ, ಮಂಜುನಾಥ ಸೇರಿದಂತೆ ಮತಿತ್ತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ