ಆ್ಯಪ್ನಗರ

ಹಾಸ್ಟೆಲ್‌ನಲ್ಲಿನ ಅವಘಡಕ್ಕೆ ವಾರ್ಡನ್‌ಗಳೇ ಹೊಣೆ

ವಸತಿನಿಲಯಗಳ ಮೇಲ್ವಿಚಾರಕರು ಕೇವಲ ವಿದ್ಯಾರ್ಥಿಗಳ ಹಾಜರಿ, ಆಹಾರ ಪದಾರ್ಥಗಳ ವಿತರಣೆ ಕಾರ್ಯಕ್ಕೆ ಸೀಮಿತವಾಗಬಾರದು. ಈ ಬಗ್ಗೆ ದೂರುಗಳು ಬರುತ್ತಿದ್ದು, ಅಂಥವರ ವಿರುದ್ಧ ಕ್ರಮ ಅನಿವಾರ್ಯ ಎಂದು ಶಾಸಕ ವಿ.ಮುನಿಯಪ್ಪ ಎಚ್ಚರಿಸಿದರು.

Vijaya Karnataka 20 Aug 2019, 5:00 am
ಶಿಡ್ಲಘಟ್ಟ: ವಸತಿನಿಲಯಗಳ ಮೇಲ್ವಿಚಾರಕರು ಕೇವಲ ವಿದ್ಯಾರ್ಥಿಗಳ ಹಾಜರಿ, ಆಹಾರ ಪದಾರ್ಥಗಳ ವಿತರಣೆ ಕಾರ್ಯಕ್ಕೆ ಸೀಮಿತವಾಗಬಾರದು. ಈ ಬಗ್ಗೆ ದೂರುಗಳು ಬರುತ್ತಿದ್ದು, ಅಂಥವರ ವಿರುದ್ಧ ಕ್ರಮ ಅನಿವಾರ್ಯ ಎಂದು ಶಾಸಕ ವಿ.ಮುನಿಯಪ್ಪ ಎಚ್ಚರಿಸಿದರು.
Vijaya Karnataka Web wardens are responsible for the mess in the hostel
ಹಾಸ್ಟೆಲ್‌ನಲ್ಲಿನ ಅವಘಡಕ್ಕೆ ವಾರ್ಡನ್‌ಗಳೇ ಹೊಣೆ


ತಾಲೂಕಿನ ಜಂಗಮಕೋಟೆಯ ಸುಗಟೂರು ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ಬಾಲಕರ ಹಾಸ್ಟೆಲ್‌ಗೆ ದಿಢೀರ್‌ ಭೇಟಿ ನೀಡಿ, ಪರಿಶೀಲಿಸಿದ ಅವರು, ಅಡುಗೆ ಮನೆ, ಶೌಚಾಲಯ ಹಾಗೂ ವಿದ್ಯುತ್‌ ಸಂಪರ್ಕಗಳ ಬಗ್ಗೆ ವೀಕ್ಷಿಸಿದರು.

ಹಾಸ್ಟೆಲ್ಲೊಂದರಲ್ಲಿ ವಿದ್ಯುತ್‌ ಅವಘಡದಿಂದ ವಿದ್ಯಾರ್ಥಿಗಳು ಮೃತಪಟ್ಟ ಘಟನೆಯನ್ನು ಉದಾಹರಿಸಿ, ಅಂತಹ ಘಟನೆಗಳು ಎಲ್ಲಿಯೂ ಮರುಕಳಿಸಬಾರದು. ಅದು ಹಾಸ್ಟೆಲ್‌ನ ಮೇಲ್ವಿಚಾರಕರ ನಿರ್ಲಕ್ಷ ್ಯದ ಪರಮಾವಧಿ ಎಂದು ಬೇಸರ ವ್ಯಕ್ತಪಡಿಸಿದರು.

ಪೋಷಕರು ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸುವುದು ಅವರ ಬದುಕನ್ನು ಉತ್ತಮ ಪಡಿಸಲು, ಒಳ್ಳೆಯ ಭವಿಷ್ಯವನ್ನು ರೂಪಿಸಲು. ಆದರೆ ಹಾಸ್ಟೆಲ್‌ಗಳಲ್ಲಿ ಮಕ್ಕಳ ಭವಿಷ್ಯವೇ ಕಮರಿ ಹೋದರೆ ಅವರ ಪಾಡೇನು ಎಂದು ಪ್ರಶ್ನಿಸಿದರು. ಶಾಲೆ ಕಾಲೇಜುಗಳು ಹಾಗೂ ವಸತಿ ಶಾಲೆಗಳು ಈ ದೇಶದ ಭವಿಷ್ಯದ ಪ್ರಜೆಗಳಿಗೆ ಆಶ್ರಯ ತಾಣಗಳು. ಬದುಕನ್ನು ರೂಪಿಸಿಕೊಳ್ಳುವ ವಿದ್ಯಾದೇಗುಲಗಳು ಆಗಬೇಕೆ ವಿನಹ ಪ್ರಾಣಕ್ಕೆ ಸಂಚಕಾರ ತರುವ, ಸಮಯ ವ್ಯರ್ಥ ಮಾಡುವ ಅಡ್ಡೆಗಳಾಗಬಾರದು ಎಂದರು.

ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಜತೆಗೆ ಆಯಾ ವಾರ್ಡನ್‌ಗಳಂತೂ ಹಾಸ್ಟೆಲ್‌ನ ಮಕ್ಕಳು ನಮ್ಮ ಮಕ್ಕಳಂತೆ ಭಾವಿಸಿ ಕೆಲಸ ಮಾಡಬೇಕಿದೆ. ಇಲ್ಲವಾದಲ್ಲಿ ಅಂತಹ ಅಧಿಕಾರಿಗಳು, ವಾರ್ಡನ್‌ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಹಾಸ್ಟೆಲ್‌ನಲ್ಲಿ ಏನೇ ಅವಘಡ ನಡೆದರೂ ವಾರ್ಡನ್‌ಗಳೇ ಅದಕ್ಕೆ ಹೊಣೆಯಾಗಬೇಕಿದ್ದು, ಶಿಸ್ತು ಕ್ರಮ ಎದುರಿಸಲು ಸನ್ನದ್ಧರಾಗಬೇಕೆಂದು ಎಚ್ಚರಿಸಿದರು.

ಊಟ ತಯಾರಿಸುವ ಅಡುಗೆ ಮನೆ, ಶೌಚಾಲಯ, ಗ್ರಂಥಾಲಯ ಕೊಠಡಿ, ಓದುವ ಕೊಠಡಿ, ವಿದ್ಯುತ್‌ ಸಂಪರ್ಕಗಳನ್ನು ಪರಿಶೀಲಿಸಿ ವಿವರ ಪಡೆದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಅನಸೂಯಮ್ಮ, ನಾರಾಯಣಸ್ವಾಮಿ ಇನ್ನಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ