ಆ್ಯಪ್ನಗರ

ಸೇವಾ ಬದ್ಧತೆಯಿಂದ ಕಾರ್ಯನಿರ್ವಹಿಸಿ

ಸರಕಾರದ ಸೌಲಭ್ಯಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಸಾಮಾಜಿಕ ಭದ್ರತೆ ಯೋಜನೆ ಸೇರಿ ಹಲವು ಸೌಲಭ್ಯಗಳಲ್ಲಿ ನೆರವು ಒದಗಿಸುತ್ತಿರುವ ಸೇವಾ ಸಿಂಧು ನಿರ್ವಾಹಕರು(ಆಪರೇಟರ್‌ಗಳು) ಸೇವಾ ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ತಹಸೀಲ್ದಾರ್‌ ಎಂ.ದಯಾನಂದ ತಿಳಿಸಿದರು.

Vijaya Karnataka 9 Aug 2019, 5:00 am
ಶಿಡ್ಲಘಟ್ಟ: ಸರಕಾರದ ಸೌಲಭ್ಯಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಸಾಮಾಜಿಕ ಭದ್ರತೆ ಯೋಜನೆ ಸೇರಿ ಹಲವು ಸೌಲಭ್ಯಗಳಲ್ಲಿ ನೆರವು ಒದಗಿಸುತ್ತಿರುವ ಸೇವಾ ಸಿಂಧು ನಿರ್ವಾಹಕರು(ಆಪರೇಟರ್‌ಗಳು) ಸೇವಾ ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ತಹಸೀಲ್ದಾರ್‌ ಎಂ.ದಯಾನಂದ ತಿಳಿಸಿದರು.
Vijaya Karnataka Web work with a service commitment
ಸೇವಾ ಬದ್ಧತೆಯಿಂದ ಕಾರ್ಯನಿರ್ವಹಿಸಿ


ತಾಲೂಕು ಕಚೇರಿಯಲ್ಲಿ ಸೇವಾ ಸಿಂಧು ನಿರ್ವಾಹಕರ ಸಭೆಯಲ್ಲಿ ಅವರು, ಸೇವಾ ಸಿಂಧು ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸ್ವೀಕರಿಸುವ ಹಾಗೂ ಅರ್ಜಿಗಳ ವಿಲೇವಾರಿ ನಿರ್ವಹಣೆಯ ಹಂತದಲ್ಲಿ ಆಗುತ್ತಿರುವ ತಾಂತ್ರಿಕ ಅಡಚಣೆ ಲೋಪ ದೋಷಗಳ ಬಗ್ಗೆ ಚರ್ಚಿಸಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಹಾಗೆಯೇ ಸಾಮಾಜಿಕ ಭದ್ರತಾ ಯೋಜನೆಯಡಿ ನಾನಾ ಮಾಸಾಶನಗಳನ್ನು ವಿತರಿಸಲು ಸಹ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ವೃದ್ಧಾಪ್ಯ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಯೋಜನೆ ಸೇರಿದಂತೆ ಹಲವು ಮಾಸಾಶನಗಳಿಗಾಗಿ ಸ್ವೀಕರಿಸುವ ಎಲ್ಲ ಅರ್ಜಿಗಳೂ ಸಕಾಲ ಯೋಜನೆಗೆ ಒಳಪಡುತ್ತವೆ. ಅರ್ಜಿಯನ್ನು ಸ್ವೀಕರಿಸಿದ ಕ್ಷ ಣದಿಂದಲೇ ಸಕಾಲದ ಸಮಯ ಆರಂಭವಾಗುತ್ತದೆ. ಆದರೆ ಸಾಕಷ್ಟು ಸಿಂಧು ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಿದ ನಂತರ ಒಂದೆರಡು ದಿನಗಳ ನಂತರ ಅರ್ಜಿಗಳು ನಮ್ಮ ಜನಸ್ನೇಹಿ ಕೇಂದ್ರಕ್ಕೆ ಸಲ್ಲಿಕೆ ಆಗುತ್ತವೆ. ಅಷ್ಟೇ ಅಲ್ಲ ಅಗತ್ಯವಾದ ದಾಖಲೆಗಳೆ ಇರುವುದಿಲ್ಲ. ಆಗಲೂ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆಯಲ್ಲದೆ ಎಲ್ಲ ದಾಖಲೆಗಳು ಸರಿಯಾಗಿದ್ದರೂ ಸಕಾಲಕ್ಕೆ ಅರ್ಜಿಗಳು ಹಾಗೂ ದಾಖಲೆಗಳು ಸಲ್ಲಿಕೆಯಾಗದ ಕಾರಣವೂ ಅವರಿಗೆ ಸೌಲಭ್ಯ ಸಿಗದಂತ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ ಎಂದರು.

ಪೇಪರ್‌ಲೆಸ್‌ ತಂತ್ರಜ್ಞಾನ:
ಈ ಬಗ್ಗೆ ಸೇವಾ ಸಿಂಧು ಕೇಂದ್ರಗಳ ನಿರ್ವಾಹಕರು ಎಚ್ಚೆತ್ತು ಅರ್ಜಿಗಳನ್ನು ಸ್ವೀಕರಿಸಿ ಅಪ್‌ಲೋಡ್‌ ಮಾಡುವ ಸಮಯದಲ್ಲಿ ಈ ಎಲ್ಲ ಅಂಶಗಳನ್ನು ಗಮನಿಸುವುದರಿಂದ ಮಾತ್ರವೇ ನಾವು ಸಾರ್ವಜನಿಕರಿಗೆ ಸಕಾಲಕ್ಕೆ ಉತ್ತಮ ಸೇವೆ ನೀಡಿ ಸರಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಸಾಧ್ಯ ಎಂದರು. ಇಲಾಖೆಯು ಪೇಪರ್‌ಲೆಸ್‌ ತಂತ್ರಜ್ಞಾನವನ್ನುಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಈ ವ್ಯವಸ್ಥೆಗೂ ತಾವು ಸನ್ನದ್ಧರಾಗಬೇಕಿದೆ ಎಂದು ಕೋರಿದರು.

ಈ ವೇಳೆ ಕೆಲ ಸೇವಾ ಸಿಂಧು ಕೇಂದ್ರಗಳ ನಿರ್ವಾಹಕರು ನಾಡಕಚೇರಿಯಲ್ಲಿನ ಸಿಬ್ಬಂದಿಯ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ನಾವು ಅರ್ಜಿಗಳನ್ನು ಸಲ್ಲಿಸುವಾಗ ನಾಡಕಚೇರಿಯ ಕೆಲ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎನ್ನುವ ದೂರಿಗೆ ಪ್ರತಿಕ್ರಿಯಿಸಿದ ತಹಸೀಲ್ದಾರರು, ಈ ಬಗ್ಗೆ ನಾಡಕಚೇರಿ ಸಿಬ್ಬಂದಿಗೆ ಎಚ್ಚರಿಕೆ ನೀಡುವುದಾಗಿ ಭರವಸೆ ನೀಡಿದರು.

ತಹಸೀಲ್ದಾರ್‌ ಗ್ರೇಡ್‌-2 ಹನುಮಂತರಾವ್‌, ಶಿರಸ್ತೇದಾರ ಕೆ.ಎನ್‌.ಎಂ.ಮಂಜುನಾಥ್‌, ಕಂದಾಯ ನಿರೀಕ್ಷ ಕ ವಿಶ್ವನಾಥ್‌, ತ್ರಿಮೂರ್ತಿ, ಅಟಲ್‌ ಜನಸ್ನೇಹಿ ಕೇಂದ್ರದ ರತ್ನ, ಮಾಸಾಶನ ವಿಷಯ ನಿರ್ವಾಹಕಿ ಯಶಸ್ವಿನಿ ಹಾಗೂ ಸೇವಾ ಸಿಂಧು ಕೇಂದ್ರದ ನಿರ್ವಾಹಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ