ಆ್ಯಪ್ನಗರ

Growth of Country Service: Girish

ಯುವಜನರು ರಾಷ್ಟ್ರಾಭಿಮಾನ ಮೂಡಿಸಿಕೊಳ್ಳುವ ಜತೆಗೆ ಸೇನೆಯ ಮೂಲಕ ದೇಶ ಸೇವೆಯಲ್ಲಿ ತೊಡಗಲು ಮುಂದಾಗಬೇಕು ಎಂದು ನಿವೃತ್ತ ಯೋಧ ಕೆ.ಗಿರೀಶ್‌ ಕರೆ ನೀಡಿದರು.

Vijaya Karnataka 8 Jul 2018, 5:00 am
ಬೀರೂರು: ಯುವಜನರು ರಾಷ್ಟ್ರಾಭಿಮಾನ ಮೂಡಿಸಿಕೊಳ್ಳುವ ಜತೆಗೆ ಸೇನೆಯ ಮೂಲಕ ದೇಶ ಸೇವೆಯಲ್ಲಿ ತೊಡಗಲು ಮುಂದಾಗಬೇಕು ಎಂದು ನಿವೃತ್ತ ಯೋಧ ಕೆ.ಗಿರೀಶ್‌ ಕರೆ ನೀಡಿದರು.
Vijaya Karnataka Web
Growth of Country Service: Girish


ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ದೈಹಿಕ ಶಿಕ್ಷ ಣ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ದೇಶಭಕ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸೇನೆಯು ಎಂತಹ ವಿಷಮ ಸನ್ನಿವೇಶಗಳನ್ನು ಕೆಚ್ಚೆದೆಯಿಂದ ಎದುರಿಸಿ ದೇಶಭಕ್ತಿ ಮೆರೆದಿದೆ. ಪ್ರತಿಯೊಬ್ಬ ಸೈನಿಕನಲ್ಲಿ ಕೆಚ್ಚೆದೆಯ ಸಂಯಮ, ಧೈರ್ಯ,ಸ್ಥೈರ್ಯಗಳು ಸಂದರ್ಬಕ್ಕೆ ತಕ್ಕಂತೆ ಮೂಡಿಬರುತ್ತವೆ. ಸನ್ನಿವೇಶಗಳನ್ನು ಎದುರಿಸುವುದು ಹೇಗೇ, ಎನ್ನುವ ಅನುಭವವನ್ನು ಸೈನ್ಯ ಕಲಿಸುತ್ತದೆ. ಹಲವು ದೇಶಗಳ ಸೈನ್ಯಗಳಲ್ಲಿ ತಾಂತ್ರಿಕತೆ ಇದೆ.ಆದರೆ ಲೆಕ್ಕಚಾರ ಇಲ್ಲ.ಭಾರತೀಯ ಸೈನ್ಯವು ತಂತ್ರಜ್ಞಾನದ ಜತೆಗೆ ಯುದ್ಧ ನೈಪುಣ್ಯವನ್ನು ಅಳವಡಿಸಿಕೊಂಡಿದೆ. ಹಾಗಾಗಿ ನಮ್ಮ ಸೇನೆಗೆ ಜಗತ್ತಿನಲ್ಲೇ ಹೆಚ್ಚು ಗೌರವವಿದೆ ಎಂದರು.

ಸೇನೆಯಲ್ಲಿನ ಅನುಭವಗಳನ್ನು ಹಂಚಿಕೊಂಡ ಮತ್ತೊಬ್ಬ ಯೋಧ ಬಿ.ಜಿ.ಗಿರೀಶ್‌, ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಉಪಟಳ ನೀಡುತ್ತವೆ. ಪಾಕಿಸ್ಥಾನವು ಕಾಶ್ಮೀರದಲ್ಲಿ ಕುಮ್ಮಕ್ಕು ನೀಡುವ ಮೂಲಕ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ.ಆದರೆ ಕಾಶ್ಮೀರದ ಶೇ90ಕ್ಕೂ ಹೆಚ್ಚು ಜನ ಭಾರತದೊಂದಿಗೆ ಇರುವುದನ್ನು ಇಚ್ಚಿಸುತ್ತಾರೆ.ಭಾರತೀಯ ಸೇನೆಯು ತನ್ನ ನೆಲದ ಮೇಲಿನ ದಾಳಿಗೆ ಸರ್ಜಿಕಲ್‌ ಸ್ಟ್ರೈಕ್‌ ನಂತಹ ನಡೆಗಳಿಗಳಿಗೆ ಉತ್ತರ ನೀಡಿದೆ ಎಂದರು.

ದೈಹಿಕ ಶಿಕ್ಷ ಣ ನಿರ್ದೇಶಕ ಜಿ.ಸಿ.ಪ್ರಸಾದ್‌ ಮಾತನಾಡಿ, ಪದವಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸೈನ್ಯದಲ್ಲಿ ಭಾಗವಹಿಸುವ ಮನೋಭಾವ ಮೂಡಿಸಬೇಕಿದೆ.ಸೇನೆಯಲ್ಲಿ ಯುದ್ದ ಸ್ಥಿತಿಯೇ ಯಾವಾಗಲೂ ಇರುವುದಿಲ್ಲ, ಅದರಲ್ಲಿಯೂ ಅಧಿಕಾರಿ ವರ್ಗ, ಆತಃರಿಕ ಭದ್ರತಾ ಪಡೆಗಳು,ತಂತ್ರಜ್ಞಾನ ವಿಭಾಗ, ಸೇವಾ ವಿಭಾಗಗಳು ಕರ್ತವ್ಯ ನಿರ್ವಹಿಸುತ್ತವೆ. ಉತ್ತಮ ಶಿಕ್ಷ ಣ ಪಡೆದ ವಿದ್ಯಾರ್ಥಿಗಳು ಕೂಡ ಸೇನೆಯಲ್ಲಿ ಹಲವು ವಿಭಾಗಗಳಲ್ಲಿಸೇವೆ ಸಲ್ಲಿಸಬಹುದಾಗಿದೆ.

ಕಾಲೇಜು ಪ್ರಾಂಶುಪಾಲೆ ಐರಿನ್‌ ಡಯಾಸ್‌ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿದ್ದರು.ನಿವೃತ್ತ ಯೋಧರಿಗೆ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದಾ ಸನ್ಮಾನಿಸಿ ಗೌರವಿಸಲಾಯಿತು.

ಉಪನ್ಯಾಸಕರಾದ ಚಂದ್ರಶೇಖರ್‌,ಪವಿತ್ರ, ಪ್ರಿಯಾ,ಪ್ರತಾಪ್‌, ಪುನೀತ್‌,ಉಮೇಶ್‌, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ