ಆ್ಯಪ್ನಗರ

ಲಕ್ಷ್ಮಿಗೆ ರಾಮ, ಲಕ್ಮಣ, ಸೀತೆ ಜನನ!

ತರೀಕೆರೆ ತಾಲೂಕು ನಂದಿಪುರ ಗ್ರಾಮದಲ್ಲಿಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದ್ದು, ಗ್ರಾಮಸ್ಥರು, ಸುತ್ತಮುತ್ತಲ ಗ್ರಾಮಗಳ ಜನರ ಕುತೂಹಲಕ್ಕೆ ಕಾರಣವಾಗಿದೆ.

Vijaya Karnataka 18 Oct 2019, 5:00 am
ಚಿಕ್ಕಮಗಳೂರು : ತರೀಕೆರೆ ತಾಲೂಕು ನಂದಿಪುರ ಗ್ರಾಮದಲ್ಲಿಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದ್ದು, ಗ್ರಾಮಸ್ಥರು, ಸುತ್ತಮುತ್ತಲ ಗ್ರಾಮಗಳ ಜನರ ಕುತೂಹಲಕ್ಕೆ ಕಾರಣವಾಗಿದೆ.
Vijaya Karnataka Web 17 ckm karu


ರಂಗಪ್ಪ ಎಂಬುವವರಿಗೆ ಸೇರಿದ ದೇಸಿ ತಳಿಯ ಲಕ್ಷ್ಮಿ ಎಂಬ ಹೆಸರಿನ ಹಸು ಬುಧವಾರ ಮೂರು ಕರುಗಳಿಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ಹಸು ಒಂದೇ ಕರು ಹಾಕುವುದು. ತೀರಾ ಅಪರೂಪ ಎಂಬಂತೆ ಎರಡು ಕರು ಹಾಕುತ್ತವೆ. ಮೂರು ಕರುಗಳನ್ನು ಹಾಕುವುದು ತುಂಬಾ ವಿರಳ ಎನ್ನಲಾಗುತ್ತಿದೆ.

ಲಕ್ಷ್ಮಿ ಎರಡು ಗಂಡು, ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಎಲ್ಲವೂ ಆರೋಗ್ಯದಿಂದಿವೆ.

ತನ್ನ ಹಸು ಲಕ್ಷ್ಮಿ ಮೂರು ಕರುಗಳಿಗೆ ಜನ್ಮ ನೀಡಿದ್ದಕ್ಕೆ ಸಂತಸಗೊಂಡ ರಂಗಪ್ಪ ಮತ್ತು ಮನೆಯವರು ಪೂಜೆ ಮಾಡಿ ಸಂಭ್ರಮಿಸಿದರು. ಕರುಗಳಿಗೆ ರಾಮ, ಲಕ್ಷ್ಮಣ, ಸೀತೆ ಎಂದು ಹೆಸರಿಟ್ಟಿದ್ದಾರೆ. ಹಸುವೊಂದು ಮೂರು ಕರು ಹಾಕಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸೇರಿದಂತೆ ಅಕ್ಕಪಕ್ಕದ ಊರಿನವರು ಬಂದು ಕರುಗಳನ್ನ ನೋಡಲು ಮುಗಿಬಿದ್ದಿದ್ದರು.

ಮೂರು ಕರು ಹಾಕಿದ ಹಸು ತಮ್ಮ ಮನೆಗೆ ಸ್ವತಃ ಲಕ್ಷ್ಮಿಯೇ ಆಗಿದ್ದಾಳೆ ಎಂದು ರಂಗಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ