ಆ್ಯಪ್ನಗರ

ಮದಗದಕೆರೆ ಅಭಿವೃದ್ಧಿಗೆ 10 ಕೋಟಿ ರೂ. ಪ್ರಸ್ತಾವನೆ

ಐತಿಹಾಸಿಕ ಮದಗದಕೆರೆ ಅಭಿವೃದ್ಧಿಗೆ 10 ಕೋಟಿ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಬೆಳ್ಳಿಪ್ರಕಾಶ್‌ ಹೇಳಿದರು.

Vijaya Karnataka 18 Aug 2019, 5:00 am
ಕಡೂರು : ಐತಿಹಾಸಿಕ ಮದಗದಕೆರೆ ಅಭಿವೃದ್ಧಿಗೆ 10 ಕೋಟಿ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಬೆಳ್ಳಿಪ್ರಕಾಶ್‌ ಹೇಳಿದರು.
Vijaya Karnataka Web CKM-16KDR1


ಶುಕ್ರವಾರ ಮದಗದಕೆರೆಯಲ್ಲಿ ಶಾಸಕರು, ಸಂಸದ ಪ್ರಜ್ವಲ್‌ರೇವಣ್ಣ, ವಿಧಾನಪರಿಷತ್‌ ಉಪಸಭಾಪತಿ ಎಸ್‌.ಎಲ್‌ ಧರ್ಮೇಗೌಡ ಹಾಗೂ ಮಠಾಧೀಶರು ಮತ್ತು ವಿವಿಧ ಸಮಾಜದ ಮುಖಂಡರು ಬಾಗಿನ ಅರ್ಪಿಸಿದ ಬಳಿಕ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿದರು.ಕೆರೆಯಲ್ಲಿ ಜಾಕ್‌ವೆಲ್‌ ಮತ್ತು ತೂಬು ನಿರ್ಮಾಣ ಕಾಮಗಾರಿ ಶೇ. 70 ಭಾಗ ಮುಕ್ತಾಯವಾಗಿತ್ತು. ನೂರಾರು ವರ್ಷ ಇತಿಹಾಸದ ಈ ಕೆರೆಯ ಹಳೆಯ ತೂಬು ಕೇವಲ ಒಂದು ಕಲ್ಲಿನ ಮೇಲೆ ನಿಂತಿದೆ. ಯಾವಾಗ ಏನೋ ಎಂಬ ಆತಂಕವಿರುವುದರಿಂದ ಹೊಸ ತೂಬಿನ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಇನ್ನು 20 ದಿನದ ಕಾಮಗಾರಿ ಬಾಕಿಯಿತ್ತು. ಅಷ್ಟರಲ್ಲಿ ಮಳೆ ಬಂದು ಕೆರೆ ಕೇವಲ 6 ದಿನದಲ್ಲಿ ಭರ್ತಿಯಾಗಿ ಕೋಡಿಬಿದ್ದಿದೆ ಎಂದರು.

ಕೆರೆಯ ಏರಿಯನ್ನು ಬಲವರ್ಧನೆ ಮಾಡುವುದು, ಕೋಡಿಬಿದ್ದ ನೀರು ಸರಣಿ ಕೆರೆಗಳಿಗೆ ಹರಿಯುವ ಕಾಲುವೆ ಅಭಿವೃದ್ದಿಪಡಿಸುವುದು. ಏರಿಯ ಮೇಲೆ ಪಾದಚಾರಿ ಪಥ ನಿರ್ಮಿಸುವುದು ಸೇರಿದಂತೆ ಬಹಳಷ್ಟು ಅಭಿವೃದ್ಧಿ ಕೆಲಸ ಬಾಕಿ ಇರುವುದರಿಂದ 10 ಕೋಟಿ ಪ್ರಸ್ತಾವನೆಗೆ ಚಿಂತನೆ ಮಾಡಲಾಗಿದೆ ಎಂದು ಹೇಳಿದರು.

ಮದಗದಕೆರೆಯನ್ನು ಮಳೆಗಾಲ ಹೊರತುಪಡಿಸಿ ಇತರೆ ಕಾಲದಲ್ಲಿ ಭರ್ತಿ ಮಾಡಲು ಹೆಬ್ಬೆ ಮತ್ತು ಗೊಂದಿ ಅಣೆಕಟ್ಟು ಯೋಜನೆ ಪ್ರಸ್ತುತ ಸರಕಾರದ ಮುಂದಿದೆ. ಹೆಬ್ಬೆ ಯೋಜನೆಗೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ 100 ಕೋಟಿ ಮೀಸಲಿಡಲಾಗಿದೆ. ಅರಣ್ಯ ಮತ್ತು ಪರಿಸರ ಇಲಾಖೆಯ ಸಾಧಕ-ಬಾಧಕಗಳನ್ನು ನೋಡಿ ಜಾರಿಗೆ ಯತ್ನಿಸಲಾಗುವುದು ಎಂದರು.

ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರಸ್ವಾಮೀಜಿ, ನಂದಿ ಮಠದ ಶ್ರೀ ವೃಷಬೇಂದ್ರ ದೇಶೀಕೇಂದ್ರ ಸ್ವಾಮೀಜಿ, ಜಿ.ಪಂ ಸದಸ್ಯರಾದ ಕೆ.ಆರ್‌. ಮಹೇಶ್‌ಒಡೆಯರ್‌, ಜಿ.ಎನ್‌. ವಿಜಯ್‌ಕುಮಾರ್‌, ಕಾವೇರಿಲಕ್ಕಪ್ಪ, ಚುನಾಯಿತ ಪುರಸಭಾ ಸದಸ್ಯರಾದ ಮಂಜುಳಾಚಂದ್ರು, ಯತೀರಾಜ್‌, ಲತಾರಾಜು, ತಹಶೀಲ್ದಾರ್‌ ಉಮೇಶ್‌, ತಾ.ಪಂ ಇ.ಓ ಡಾ. ದೇವರಾಜನಾಯ್ಕ್‌, ಸಣ್ಣ ನೀರಾವರಿ ಜೆಇ ಮಂಜುನಾಥ್‌, ಲೋಕೋಪಯೋಗಿ ಎಇಇ ದಯಾನಂದ್‌, ವೃತ್ತ ನಿರೀಕ್ಷ ಕ ಬಿ.ಎಸ್‌. ಮಂಜುನಾಥ್‌, ಪಿಎಸ್‌ಐ ವಿಶ್ವನಾಥ್‌ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ