ಆ್ಯಪ್ನಗರ

ಕೋಟ್ಪಾ :16 ಪ್ರಕರಣ ದಾಖಲು

ಪಟ್ಟಣದ ವಿವಿಧೆಡೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ತನಿಖಾ ದಳ ಮತ್ತು ವಿವಿಧ ಇಲಾಖೆ ಸಹಯೋಗದಲ್ಲಿ ತಂಬಾಕು ಉತ್ಪನ್ನ ಮಾರಾಟ ಇನ್ನಿತರ ಕಾನೂನು ಉಲ್ಲಂಘನೆ ವಿರುದ್ಧ ಶನಿವಾರ ಕಾರ್ಯಾಚರಣೆ ನಡೆಸಿ ಒಟ್ಟು 16 ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.

Vijaya Karnataka 18 Feb 2019, 5:00 am
ಕೊಪ್ಪ : ಪಟ್ಟಣದ ವಿವಿಧೆಡೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ತನಿಖಾ ದಳ ಮತ್ತು ವಿವಿಧ ಇಲಾಖೆ ಸಹಯೋಗದಲ್ಲಿ ತಂಬಾಕು ಉತ್ಪನ್ನ ಮಾರಾಟ ಇನ್ನಿತರ ಕಾನೂನು ಉಲ್ಲಂಘನೆ ವಿರುದ್ಧ ಶನಿವಾರ ಕಾರ್ಯಾಚರಣೆ ನಡೆಸಿ ಒಟ್ಟು 16 ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.
Vijaya Karnataka Web CKM-17kph1


ಅಧಿಕಾರಿ ತಂಡವು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧದ ಮಾಹಿತಿ ನೀಡುವ ಮಾಹಿತಿ ಫಲಕವನ್ನು ಪ್ರದರ್ಶಿಸಿತು. ಪ್ರಮುಖವಾಗಿ ಬಸ್‌ ನಿಲ್ದಾಣ, ಮುಖ್ಯ ರಸ್ತೆ, ಬಾರ್‌ ಮತ್ತು ರೆಸ್ಟೋರೆಂಟ್‌. ಬೀಡಾ ಸ್ಟಾಲ್‌, ಅಂಗಡಿ ಮುಂಗಟ್ಟು ಪರಿಶೀಲನೆ ಆಯೋಜಿಸಲಾಗಿತ್ತು. 18ವರ್ಷದೊಳಗಿನ ಮಕ್ಕಳು ತಂಬಾಕು ಸೇವನೆ ಮಾಡಬಾರದೆನ್ನುವ ಉದ್ದೇಶ ಸಾರುವ ನಾಮಫಲಕವನ್ನು ಅಂಗಡಿ, ಮುಂಗಟ್ಟು ಎದುರು ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಅಧಿಕಾರ ತಂಡ ತಿಳಿಸಿತು. ಕಾರ್ಯಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಆರ್‌.ದಿನೇಶ್‌, ರಾಘವೇಂದ್ರ, ಗ್ರೇಡ್‌ 2 ತಹಸೀಲ್ದಾರ್‌ ಶೇಷಮೂರ್ತಿ, ತಾ.ಪಂ.ನ ಎಒ ಪದ್ಮಲತ, ಆರೋಗ್ಯ ಇಲಾಖೆಯ ಶಿಕ್ಷ ಣಾಧಿಕಾರಿ ವಿ.ಡಿ.ಲಿಸ್ಸಿ, ಅಬಕಾರಿ ಇಲಾಖೆಯ ಬಾಸಿಲ್‌, ಪೊಲೀಸ್‌ ಇಲಾಖೆಯ ಸಂದೀಪ್‌ ಮತ್ತು ಈಶ್ವರಪ್ಪ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ