ಆ್ಯಪ್ನಗರ

ದೇವಗೊಂಡನಹಳ್ಳಿಯಲ್ಲಿ23 ಮೇಕೆ ಸಾವು

ಅರಳಿಸೊಪ್ಪು ತಿಂದಿದ್ದ 23 ಆಡುಗಳು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ತಾಲೂಕಿನ ಲಕ್ಯಾ ಹೋಬಳಿಯ ದೇವಗೊಂಡನಹಳ್ಳಿಯಲ್ಲಿ ಸೋಮವಾರ ನಡೆದಿದೆ.

Vijaya Karnataka 26 Feb 2019, 5:00 am
ಚಿಕ್ಕಮಗಳೂರು : ಅರಳಿಸೊಪ್ಪು ತಿಂದಿದ್ದ 23 ಆಡುಗಳು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ತಾಲೂಕಿನ ಲಕ್ಯಾ ಹೋಬಳಿಯ ದೇವಗೊಂಡನಹಳ್ಳಿಯಲ್ಲಿ ಸೋಮವಾರ ನಡೆದಿದೆ.
Vijaya Karnataka Web CKM-25ARAGAP3


ದೇವಗೊಂಡನಹಳ್ಳಿಯ ಶಿವಣ್ಣ ತಮ್ಮ 100 ಆಡುಗಳನ್ನು ಮೇಯಿಸಲು ಸ್ಥಳೀಯ ಗುಡ್ಡಕ್ಕೆ ಹೋಗಿದ್ದು, ಅಲ್ಲಿ ಸೊಪ್ಪು ತಿಂದ ಸ್ವಲ್ಪ ಹೊತ್ತಿಗೆ ಅಸ್ವಸ್ಥಗೊಂಡು ಸಾಯಲಾರಂಭಿಸಿವೆ. 23 ಆಡುಗಳು ಸಾವಪ್ಪಿದ್ದು, ಕುಟುಂಬದವರು ಕಣ್ಣೀರಿಡುತ್ತಿದ್ದ ದೃಶ್ಯ ಕಂಡುಬಂತು.

ಜಿಲ್ಲಾ ಕುರಿ ಮತ್ತು ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಎ.ಎನ್‌.ಮಹೇಶ್‌, ಕರ್ನಾಟಕ ಕುರಿ ಮತ್ತು ಉಣ್ಣೆ ನಿಗಮದ ಸಹಾಯಕ ನಿರ್ದೇಶಕ ಡಾ.ವಾಗೀಶ್‌ ಪಂಡಿತ್‌, ಬೆಳವಾಡಿ ಪಶುವೈದ್ಯ ಡಾ.ಅಶೋಕ್‌, ಶಿವಮೊಗ್ಗ ಕುರಿ ಸಂಶೋಧನಾ ಸಂಸ್ಥೆಯ ವೈದ್ಯ ಡಾ.ರಾಜೇಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಜಂಬಗಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ರೈತನಿಗೆ ತ್ವರಿತವಾಗಿ ಪರಿಹಾರ ಒದಗಿಸುವ ಭರವಸೆ ನೀಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕುರಿ ಅಥವಾ ಆಡು ಅಕಾಲಿಕ ಮರಣ ಹೊಂದಿದರೆ ಪ್ರತಿ ಕುರಿಗೆ 5ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಆಡುಗಳನ್ನು ಕಳೆದುಕೊಂಡಿರುವ ರೈತ ಶಿವಣ್ಣ ಅವರಿಗೆ ಸುಮಾರು ಒಂದು ಲಕ್ಷ ರೂ. ಪರಿಹಾರ ದೊರೆಯಲಿದೆ ಎಂದು ಮಹೇಶ್‌ ಹೇಳಿದರು.

ಆಡುಗಳ ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯ ಇಲಾಖೆಯ ಡಾ.ವಾಗೀಶ್‌ ಪಂಡಿತ್‌, ಡಾ.ಅಶೋಕ್‌, ಡಾ.ರಾಜೇಶ್‌, ಯಾವ ಕಾರಣದಿಂದ ಆಡುಗಳು ಮೃತಪಟ್ಟಿವೆ ಎಂದು ತಿಳಿಯಲು ಮಾದರಿಯನ್ನು ಶಿವಮೊಗ್ಗದ ಕುರಿ ಮತ್ತು ಆಡು ಸಂಶೋಧನಾ ಕೇಂದ್ರಕ್ಕೆ ಕಳಿಸಲಾಗುವುದು ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ