ಆ್ಯಪ್ನಗರ

ಯುಪಿಎಸ್‌ಸಿಯಲ್ಲಿ 753ನೇ ರಾರ‍ಯಂಕ್‌

ತಾಲೂಕಿನ ಮುದಿಗೆರೆ ಗ್ರಾಮದ ಎಚ್‌.ಸಂತೋಷ್‌ ಅವರು ಇತ್ತೀಚೆಗೆ ಫಲಿತಾಂಶ ಪ್ರಕಟವಾದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 753ನೇ ರಾರ‍ಯಂಕ್‌ ಪಡೆದಿದ್ದಾರೆ.

Vijaya Karnataka 10 Apr 2019, 5:00 am
ಅಜ್ಜಂಪುರ : ತಾಲೂಕಿನ ಮುದಿಗೆರೆ ಗ್ರಾಮದ ಎಚ್‌.ಸಂತೋಷ್‌ ಅವರು ಇತ್ತೀಚೆಗೆ ಫಲಿತಾಂಶ ಪ್ರಕಟವಾದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 753ನೇ ರಾರ‍ಯಂಕ್‌ ಪಡೆದಿದ್ದಾರೆ.
Vijaya Karnataka Web CKM-09AJP02


ಮುದಿಗೆರೆಯಲ್ಲಿ ಪ್ರಾಥಮಿಕ ಶಿಕ್ಷ ಣ, ಅಜ್ಜಂಪುರ ಶೆಟ್ರು ಸಿದ್ದಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಿಕ್ಷ ಣ, ಚಿಕ್ಕಮಗಳೂರಿನ ಡಿಎಸಿಜಿ ಪಾಲಿಟೆಕ್ನಿಕ್‌ನಲ್ಲಿ ಡಿಪೊ್ಲಮಾ ಇನ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮಾಡಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ಗುಮಾಸ್ತರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಪ್ರಸ್ತುತ ರಕ್ಷ ಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಹಿರಿಯ ತಾಂತ್ರಿಕ ಸಹಾಯಕರಾಗಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲಿ ಹೋರಾಟದ ಮನೋಭಾವನೆ ಹೊಂದಿದ್ದ ಸಂತೋಷ್‌, ಅಜ್ಜಂಪುರ ಹಾಸ್ಟೆಲ್‌ನ ಅವ್ಯವಸ್ಥೆ ಕಂಡು ಎಂಟನೇ ತರಗತಿಯಲ್ಲಿದ್ದಾಗ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ನ್ಯಾಯಕ್ಕಾಗಿ ಹಂಬಲಿಸಿದ್ದರು. 1998ರಲ್ಲಿ ಅಜ್ಜಂಪುರದಲ್ಲಿ ನೀರಿನ ಸಮಸ್ಯೆ ಉಂಟಾಗಿ ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತ ಭೇಟಿ ನೀಡಿ, ಬಗೆಹರಿಸಿದ್ದನ್ನು ಕಂಡಿದ್ದ ಸಂತೋಷ್‌, ಪ್ರಭಾವಿತರಾಗಿದ್ದು, ಡಿಸಿ ಆದರೆ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಐಎಎಸ್‌ ಪಾಸ್‌ ಮಾಡಬೇಕು ಎಂಬ ಮಹದಾಸೆ ಹೊಂದಿದ್ದರು. ಇವರ ನೆರವಿಗೆ ಬಂದದ್ದು ಸ್ಪರ್ಧಾಮಿತ್ರ ಅಕಾಡೆಮಿಯ ಓಂಕಾರ್‌ ಪಾಟೀಲರು. ಉತ್ತಮ ಗ್ರಂಥಾಲಯ, ನುರಿತ ಉಪನ್ಯಾಸಕರು ಇರುವ ಸಂಸ್ಥೆಯ ಜತೆಗೆ ಇಂಟಿಪಸ್‌ ಅಕಾಡೆಮಿಯನ್ನೂ ಸಂತೋಷ್‌ ಸ್ಮರಿಸುತ್ತಾರೆ.

ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿರುವ ಹಳ್ಳಿ ಮುದಿಗೆರೆಯ ಹಿಂದುಳಿದ ಜನಾಂಗಕ್ಕೆ ಸೇರಿದ ಸಾಮಾನ್ಯ ಕುಟುಂಬದ ಯುವಕನ ಸಾಧನೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ತಂದೆ ಎಂ.ಹನುಮಂತಪ್ಪ ವೀಳ್ಯೆದೆಲೆ ಕಟ್ಟುವ ಕಾರ್ಮಿಕ, ತಾಯಿ ಬಿ.ಗೀತಾ ಕೂಲಿಯಿಂದ ಜೀವನ ನಡೆಸುತ್ತಿದ್ದು, ಸದ್ಯ ಬೀರೂರಿನಲ್ಲಿ ನೆಲೆಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ