ಆ್ಯಪ್ನಗರ

ಪ್ಲಾಸ್ಟಿಕ್‌ ಬಳಕೆ ತ್ಯಜಿಸಿ, ಪರಿಸರ ಉಳಿಸಿ

ರಾಷ್ಟ್ರದಲ್ಲಿ ಶೇ.33 ರಷ್ಟಿರಬೇಕಿದ್ದ ಅರಣ್ಯವೀಗ ಶೇ. 22 ರಷ್ಟಿದ್ದು, ಉಳಿಸಿ ಬೆಳೆಸಬೇಕಾದ ಅನಿವಾರ‍್ಯತೆ ಇದೆ ಎಂದು ವಲಯ ಅರಣ್ಯಾಧಿಕಾರಿ ಶಿಂಧೆ ನೀಲೇಶ್‌ ದೇವಭಾ ಹೇಳಿದರು.

Vijaya Karnataka 11 Jul 2019, 5:00 am
ಬಾಳೆಹೊನ್ನೂರು : ರಾಷ್ಟ್ರದಲ್ಲಿ ಶೇ.33 ರಷ್ಟಿರಬೇಕಿದ್ದ ಅರಣ್ಯವೀಗ ಶೇ. 22 ರಷ್ಟಿದ್ದು, ಉಳಿಸಿ ಬೆಳೆಸಬೇಕಾದ ಅನಿವಾರ‍್ಯತೆ ಇದೆ ಎಂದು ವಲಯ ಅರಣ್ಯಾಧಿಕಾರಿ ಶಿಂಧೆ ನೀಲೇಶ್‌ ದೇವಭಾ ಹೇಳಿದರು.
Vijaya Karnataka Web CKM-8BHR1


ಅವರು ಸೋಮವಾರ ಪಟ್ಟಣ ಸಮೀಪದ ಬಿಜಿಎಸ್‌ ಶಾಲಾ ಆವರಣದಲ್ಲಿ ರೋಟರಿ ಹಾಗೂ ಇನ್ನರ್‌ವ್ಹೀಲ್‌ ಮತ್ತು ಅರಣ್ಯ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರಣ್ಯ ನಾಶದಿಂದ ಪರಿಸರದ ಮೇಲೆ ದುಷÜ್ಪರಿಣಾಮ ಆಗುತ್ತಿದೆ. ಮಿತಿ ಮೀರಿದ ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಜನರು ಜಾಗೃತರಾಗಬೇಕು ಎಂದರು.

ಬಿ.ಜಿ.ಎಸ್‌ ಪ್ರಾಂಶುಪಾಲ ವೈ.ವಿ. ಸುರೇಶ್‌ ಮಾತನಾಡಿ, ಆದಿಚುಂಚನಗಿರಿ ದಿ. ಬಾಲಗಂಗಾಧರನಾಥ ಸಾಮೀಜಿ ತಮ್ಮ ಆವಧಿಯಲ್ಲಿ ರಾಜ್ಯಾದ್ಯಂತ 5 ಕೋಟಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ,ಇಂದು ಫಲ ಬರುತ್ತಿದೆ. ಎಲ್ಲರೂ ಸಾಮಾಜಿಕ ಜವಬ್ದಾರಿ ಅರಿತು ಅರಣ್ಯ ಸಂರಕ್ಷ ಣೆ ಮಾಡಬೇಕೆಂದರು.

ಬಿ.ಕಣಬೂರು ಗ್ರಾ.ಪಂ ಅಧ್ಯಕ್ಷ ಮಹಮ್ಮದ್‌ ಹನೀಫ್‌, ರೋಟರಿ ಕ್ಲಬ್‌ ಮಾಜಿ ಸಹಾಯಕ ರಾಜ್ಯಪಾಲೆ ಬಿ.ಸಿ.ಗೀತಾ ಮಾತನಾಡಿದರು. ಝೋನಲ್‌ ಲೆಫ್ಟಿನೆಂಟ್‌ ಟಿ. ಸುರೇಶ್‌ ಮಾತನಾಡಿದರು. ಇನ್ನರ್‌ವ್ಹೀಲ್‌ ಅಧ್ಯಕ್ಷೆ ಸೀಮಾ ಅಶೋಕ್‌, ಕಾರ್ಯದರ್ಶಿ ಸುಚಿತಾ ಉಚಿತ್‌ಹೆಗ್ಡೆ ಉಪಸ್ಥಿತರಿದ್ದರು. ರೋಟರಿ ಕ್ಲಬ್‌ ಅಧ್ಯಕ್ಷ ಎಂ.ಸಿ. ಯೋಗೇಶ್‌ ಅಧ್ಯಕ್ಷ ತೆ ವಹಿಸಿದ್ದರು. ಬಿ.ಸಿ. ಗೀತಾ ಸ್ವಾಗತಿಸಿ, ನಾಗೇಶ್‌ ನಿರೂಪಿಸಿ, ಡಾ. ಎಂ.ಬಿ. ರಮೇಶ್‌ ಪ್ರಾಸ್ತಾವಿಕ ಮಾತನಾಡಿ, ಕಾರ್ಯದರ್ಶಿ ಕೆ.ಕೆ. ರಮೇಶ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ