ಆ್ಯಪ್ನಗರ

ರಂಭಾಪುರಿ ಪೀಠಕ್ಕೆ ಆದಿತ್ಯನಾಥ್‌ ಭೇಟಿ

ಉತ್ತರ ಪ್ರದೇಶ್‌ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್‌ ಹೆಲಿಕಾಪ್ಟರ್‌ ಮೂಲಕ ಗುರುವಾರ ಮಧ್ಯಾನ ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಲಿಂಗೈಕ್ಯ ಜಗದ್ಗುರುಗಳವರ ಗದ್ದುಗೆ, ಶಕ್ತಿಮಾತೆ ಶ್ರೀ ಚೌಡೇಶ್ವರಿ ಅಮ್ಮನವರು ಹಾಗೂ ಜಗದ್ಗುರು ರೇಣುಕಾಚಾರ್ಯರಿಗೆ ಪೂಜೆ ಸಲ್ಲಿಸಿದರು.

Vijaya Karnataka 4 May 2018, 5:00 am
ಬಾಳೆಹೊನ್ನೂರು: ಉತ್ತರ ಪ್ರದೇಶ್‌ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್‌ ಹೆಲಿಕಾಪ್ಟರ್‌ ಮೂಲಕ ಗುರುವಾರ ಮಧ್ಯಾನ ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಲಿಂಗೈಕ್ಯ ಜಗದ್ಗುರುಗಳವರ ಗದ್ದುಗೆ, ಶಕ್ತಿಮಾತೆ ಶ್ರೀ ಚೌಡೇಶ್ವರಿ ಅಮ್ಮನವರು ಹಾಗೂ ಜಗದ್ಗುರು ರೇಣುಕಾಚಾರ್ಯರಿಗೆ ಪೂಜೆ ಸಲ್ಲಿಸಿದರು.
Vijaya Karnataka Web adityanath meets rambhapuri peeth
ರಂಭಾಪುರಿ ಪೀಠಕ್ಕೆ ಆದಿತ್ಯನಾಥ್‌ ಭೇಟಿ


ಯೋಗಿ ಆದಿತ್ಯನಾಥ್‌ ಅವರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಶಾಲು ಹೊದಿಸಿ ಫಲತಾಂಬೂಲ ನೀಡಿ, ಜಗದ್ಗುರು ರೇಣುಕಾಚಾರ್ಯರ ಸುಂದರ ಭಾವಚಿತ್ರವನ್ನು ನೆನಪಿನ ಕಾಣಿಕೆ ನೀಡಿ ಆಶೀರ್ವದಿಸಿದರು. ನಂತರ ವಿಧಾನಸಭೆ ಚುನಾವಣೆಯ ಆಗುಹೋಗುಗಳ ಬಗ್ಗೆ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದರು.

ಶ್ರೀ ರಂಭಾಪುರಿ ಪೀಠದಲ್ಲಿ ಯೋಗಿ ಅವರಿಗೋಸ್ಕರ ವಿಷೇಶವಾಗಿ ಸಿದ್ಧ ಪಡಿಸಿದ್ದ ಬದನೆಕಾಯಿ ಪಲ್ಯ, ತೊಗರಿಬೇಳೆ ಸಾರು, ತಿಳಿಸಾರು, ಬಾಸುಮತಿ ಅಕ್ಕಿ ಅನ್ನ, ಸೋನಾಮಸೂರಿ ಅಕ್ಕಿ ಅನ್ನ, ಮೊಸರು, ರಸಂ, ಶ್ಯಾವಿಗೆ ಪಾಯಸ, ಜಾಮೂನ್‌, ಮೈಸೂರ್‌ಪಾಕ್‌, ತುಪ್ಪ, ಖಾರದಚಟ್ನಿ, ಶೇಂಗಾಚಟ್ನಿ, ಉಪ್ಪಿನಕಾಯಿ, ಚಪಾತಿ ಸೇರಿದಂತೆ ಒಟ್ಟು 18 ಬಗೆಯ ಅಹಾರ ಪದಾರ್ಥಗಳನ್ನು ಬಡಿಸಲಾಯಿತು.

ಯೋಗಿ ಆದಿತ್ಯನಾಥ್‌ ಅವರ ಆಗಮನಕ್ಕೋಸ್ಕರ ಅರೆಸೇನಾಪಡೆ ಹಾಗೂ ಪೊಲೀಸ್‌ ಬಿಗಿಬಂದೋಬಸ್ತ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದ ಅಭ್ಯರ್ಥಿ ಡಿ.ಎನ್‌.ಜೀವರಾಜ್‌, ಜಿ.ಪಂ.ಉಪಾಧ್ಯಕ್ಷ ರಾಮಸ್ವಾಮಿ, ವಿಧಾನಪರಿಷತ್‌ ಸದಸ್ಯ ಪ್ರಾಣೇಶ್‌, ಸಂಸದೆ ಶೋಭಾ ಕರಂದ್ಲಾಜೆ, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಲ್ಮಕ್ಕಿ ಉಮೇಶ್‌, ಬಿಜೆಪಿ ಮುಖಂಡರುಗಳಾದ ಚಂದ್ರಶೇಖರ್‌, ಕೆ.ಕೆ.ವೆಂಕಟೇಶ್‌, ಪ್ರೇಮೇಶ್‌, ತಾಲೂಕು ವಕ್ತಾರ ಜಗದೀಶ್ಚಂದ್ರ, ಆರ್‌.ಡಿ.ಮಹೇಂದ್ರ, ಅಹಮದ್‌ ಝಮೀರ್‌, ಎಸ್‌.ಜಿ.ಕೃಷ್ಣಮೂರ್ತಿ, ಇಬ್ರಾಹಿಂ ಶಾಫಿ ಮತ್ತಿತರ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

3ಬಿಹೆಚ್‌ಆರ್‌1 ಪೋಟೊ:

ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಗುರುವಾರ ಭೇಟಿ ನೀಡಿ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ