ಆ್ಯಪ್ನಗರ

ಶಿಕ್ಷಣದೊಂದಿಗೆ ಸದುಭಿರುಚಿ ಚಟುವಟಿಕೆ ಅಗತ್ಯ

ಪಿಟ್‌ನೆಸ್‌ ಸೆಂಟರ್‌ಗಳು ಎಷ್ಟೊ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಸೃಷ್ಠಿಮಾಡಿಕೊಟ್ಟಿವೆ. ಹಾಗೂ ಪದವಿ ವಿದ್ಯಾರ್ಥಿಗಳಾದ ನೀವು ಪ್ರಯತ್ನಪಟ್ಟರೆ ಸ್ವಾವಲಂಭಿಗಳಾಗಿ ಜೀವನ ರೂಪಿಸಿಕೊಳ್ಳಬಹುದು ಎಂದು ಅಂತಾರಾಷ್ಟ್ರೀಯ ದೇಹದಾಢ್ರ್ಯಪಟು ಶೌಕತ್‌ ಆಲಿ ಹೇಳಿದರು.

Vijaya Karnataka 1 Apr 2019, 5:00 am
ತರೀಕೆರೆ : ಪಿಟ್‌ನೆಸ್‌ ಸೆಂಟರ್‌ಗಳು ಎಷ್ಟೊ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಸೃಷ್ಠಿಮಾಡಿಕೊಟ್ಟಿವೆ. ಹಾಗೂ ಪದವಿ ವಿದ್ಯಾರ್ಥಿಗಳಾದ ನೀವು ಪ್ರಯತ್ನಪಟ್ಟರೆ ಸ್ವಾವಲಂಭಿಗಳಾಗಿ ಜೀವನ ರೂಪಿಸಿಕೊಳ್ಳಬಹುದು ಎಂದು ಅಂತಾರಾಷ್ಟ್ರೀಯ ದೇಹದಾಢ್ರ್ಯಪಟು ಶೌಕತ್‌ ಆಲಿ ಹೇಳಿದರು.
Vijaya Karnataka Web CKM-31TKR3


ಪಟ್ಟಣದ ಎಸ್‌ಜೆಎಂ ಮಹಾವಿದ್ಯಾಲಯದಲ್ಲಿ ಕ್ರೀಡಾ, ಸಾಂಸ್ಕೃತಿಕ ಎನ್‌ಎಸ್‌ಎಸ್‌ ಮತ್ತು ರೆಡ್‌ ಕ್ರಾಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ದೇಹದಾಢ್ರ್ಯ ಪ್ರದರ್ಶನ ಉನ್ನತ ಕ್ರೀಡೆಯಾಗಿ ಪರಿಗಣಿಸಲಾಗಿದೆ. ದೇಹದಾಢ್ರ್ಯ ಇತರೆ ಕ್ರೀಡೆಗಳಿಗೆ ಹೋಲಿಕೆ ಮಾಡಿದರೆ ಇದು ವಿಭಿನ್ನವಾಗಿ ಕಾಣುತ್ತದೆ. ದೇಹದಾಢ್ರ್ಯಕ್ಕೆ ಸಜ್ಜುಗೊಳ್ಳುವ ವ್ಯಕ್ತಿಯು ತನ್ನ ಆಹಾರ ಪದ್ಧತಿ, ದಿನಚರಿಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಇಲ್ಲಿ ವ್ಯಕ್ತಿ ಈ ಕ್ರೀಡೆಗೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳದಿದ್ದರೆ ಗೆಲುವು ಅಸಾಧ್ಯ. ದೇಹದಾಢ್ರ್ಯ ಕ್ರೀಡೆಯಾಗಿ ಅಷ್ಟೆ ಉಳಿದಿಲ್ಲ ಇತ್ತೀಚಿನ ದಿನಗಳಲ್ಲಿ ಇದು ಪಿಟ್‌ನೆಸ್‌ ಹಾಗೂ ಸಮಾಜದಲ್ಲಿ ತನ್ನ ದೇಹದ ಬಗ್ಗೆ ಅಭಿಮಾನ ಮೂಡಲು ಸಹಕಾರಿಯಾಗಿದೆ. ಪ್ರಪಂಚದಲ್ಲಿ ಆಧುನಿಕ ಬಾಡಿಬಿಲ್ಡಿಂಗ್‌ ಪಿತಾಮಹಾ ಯುಜೇನ್‌ ಸ್ಯಾಂಡಮ್‌ ಯುರೋಪಿಯನ್‌ ಮೂಲದವರಾಗಿದ್ದು ಇವರು ಹಾಕಿಕೊಟ್ಟ ಬುನಾದಿ. ಈ ದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೆಯಾದಂತಹ ವಿಶಿಷ್ಠ ಸ್ಥಾನ ಪಡೆದಿದೆ ಎಂದು ಹೇಳಿದರು.

ಸಂಗೀತಾಸಕ್ತಿ ಬಗ್ಗೆ ಮಾತನಾಡಿದ ಗಾಯಕಿ ಉಮಾಪ್ರಕಾಶ್‌, ಸಂಗೀತ ವ್ಯಕ್ತಿಗಳಲ್ಲಿ ಏಕಾಗ್ರತೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾವ ವ್ಯಕ್ತಿ ಸಂಗೀತದ ಬಗ್ಗೆ ಅಭಿರುಚಿ ಹೊಂದಿರುತ್ತಾನೆಯೋ ಆ ವ್ಯಕ್ತಿ ಭಾವನಾ ಜೀವಿಯಾಗಿರುತ್ತಾನೆ. ವಿದ್ಯಾರ್ಥಿಗಳಾದ ನೀವು ಸಂಗೀತ ಅಭ್ಯಾಸ ಮಾಡುವುದರಿಂದ ಏಕಾಗ್ರತೆಯನ್ನು ಕಂಡುಕೊಳ್ಳಲು ಸಹಾಯವಾಗುತ್ತದೆ. ಸಂಗೀತ ಅಭ್ಯಾಸಮಾಡಿ ಪದವಿ ಪಡೆಯುವುದರಿಂದ ನೀವು ಸ್ವಾವಲಂಬಿಗಳಾಗಿ ಜೀವನ ರೂಪಿಸಿಕೊಳ್ಳಬಹುದು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ.ಜಿ.ಇ.ವಿಜಯಕುಮಾರ್‌ ಮಾತನಾಡಿ, ಪದವಿಯ ಅಂತಿಮ ಘಟ್ಟದಲ್ಲಿರುವ ವಿದ್ಯಾರ್ಥಿಗಳು ನಿಮ್ಮ ಮುಂದಿನ ಜೀವನ ರೂಪಿಸಿಕೊಳ್ಳಲು ಪದವಿ ಒಂದಿದ್ದರೆ ಸಾಲದು, ಅದಕ್ಕೆ ಪೂರಕವಾಗಿ ಇನ್ನಿತರ ಸದಭಿರುಚಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ವಿತರಿಸಲಾಯಿತು. ಮತ್ತು ಕಾಲೇಜಿನ ದತ್ತಿನಿಧಿಯಿಂದ ಅತ್ಯುನ್ನತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಗಾಂಧಿ ಸಂಸ್ಕಾರ ಸಂಸ್ಥೆ ನವದೆಹಲಿ ಇವರು ನಡೆಸಿದ ಪರೀಕ್ಷೆಯಲ್ಲಿ ಅತ್ಯನ್ನತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ಉನ್ನತ ಸಾಧನೆ ತೋರಿದ ಆರ್‌.ಸಾಗರ್‌ ಹಾಗೂ ಎನ್‌ಎಸ್‌ಎಸ್‌ನಲ್ಲಿ ರಾಜ್ಯ ಗಣರಾಜ್ಯೋತ್ಸವಕ್ಕೆ ಪಾಲ್ಗೊಂಡಿದ್ದ ಆರ್‌.ಲೋಕರಾಜ್‌ ಇವರನ್ನು ಸನ್ಮಾನಿಸಲಾಯಿತು.

ಉಪನ್ಯಾಸಕರಾದ ಪ್ರೊ.ಜಯನಾಯಕ್‌, ಪ್ರೊ.ಕೆ.ಆರ್‌.ವೀರೇಶ್‌, ಡಾ.ಎಂ.ಆರ್‌.ಚಿದಾನಂದಪ್ಪ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ಜೆ.ರಘು ಹಾಗೂ ಡಾ.ಅನಿಲ್‌ ಕುಮಾರ್‌ ಹಾಜರಿದ್ದರು. ವಿದ್ಯಾರ್ಥಿಗಳಾದ ಇ.ಪೂಜಾ ಪ್ರಾರ್ಥಿಸಿ, ಸುಜಯ್‌ ಸ್ವಾಗತಿಸಿದರು, ಮೈತ್ರಿ ವಂದಿಸಿ, ಸ್ಮಿತ ಹಾಗೂ ವಿಜೇತ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ