ಆ್ಯಪ್ನಗರ

ಮತ್ತೆ ರಸ್ತೆ ಬದಿ ಕಸದ ರಾಶಿ

ಪಟ್ಟಣ ಪಂಚಾಯಿತಿಯಿಂದ ಕಸ ವಿಲೇವಾರಿ ಮಾಡುವ ವಿಧಾನವನ್ನು ಕಳೆದ ಒಂದು ತಿಂಗಳಿಂದ ಬದಲಾವಣೆ ಮಾಡಿದ್ದರಿಂದ ಮನೆ ಮತ್ತು ಹೋಟೆಲ್‌ಗಳ ಕಸವನ್ನು ರಸ್ತೆಗೆ ಸುರಿಯಲಾಗುತ್ತಿದ್ದು, ಇದರಿಂದ ತೀವ್ರ ತೊಂದರೆ ಎದುರಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

Vijaya Karnataka 11 Jun 2019, 5:00 am
ಮೂಡಿಗೆರೆ: ಪಟ್ಟಣ ಪಂಚಾಯಿತಿಯಿಂದ ಕಸ ವಿಲೇವಾರಿ ಮಾಡುವ ವಿಧಾನವನ್ನು ಕಳೆದ ಒಂದು ತಿಂಗಳಿಂದ ಬದಲಾವಣೆ ಮಾಡಿದ್ದರಿಂದ ಮನೆ ಮತ್ತು ಹೋಟೆಲ್‌ಗಳ ಕಸವನ್ನು ರಸ್ತೆಗೆ ಸುರಿಯಲಾಗುತ್ತಿದ್ದು, ಇದರಿಂದ ತೀವ್ರ ತೊಂದರೆ ಎದುರಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
Vijaya Karnataka Web CKM-10MDG-P2


ಪ್ರತಿನಿತ್ಯ ಎಲ್ಲಾ ಬಡಾವಣೆಗೂ ಕಸ ವಿಲೇವಾರಿ ಆಟೋಗಳು ಬಂದು ಮನೆ, ಹೋಟೆಲ್‌, ಅಂಗಡಿಗಳಿಂದ ತ್ಯಾಜ್ಯಗಳನ್ನು ಹೊತ್ತೊಯ್ಯುತ್ತಿತ್ತು. ಒಂದು ತಿಂಗಳಿಂದ ಒಣ ಕಸ ಮತ್ತು ಹಸಿ ಕಸವೆಂದು ವಾರದಲ್ಲಿ ದಿನ ನಿಗದಿಪಡಿಸಲಾಗಿದೆ. ಇದರಿಂದ ಮನೆ, ಹೋಟೆಲ್‌, ಅಂಗಡಿಗಳಲ್ಲಿ ಸಂಗ್ರಹವಾಗುವ ಕಸಗಳನ್ನು ದಿನವೂ ಆಟೋದಲ್ಲಿ ಕೊಂಡೊಯ್ಯಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಹಿಂದಿನಂತೆ ರಸ್ತೆ ಬದಿ ಕಸ ಸುರಿಯಲು ಪ್ರಾರಂಭಿಸಿದ್ದಾರೆ.

ಕಳೆದ 2 ವರ್ಷದ ಹಿಂದೆ ರಸ್ತೆ ಬದಿ ಕಸ ಸುರಿಯುತ್ತಿದ್ದರು. ಪ.ಪಂ. ಆಟೋಗಳು ಬಂದ ಬಳಿಕ ರಸ್ತೆ ಬದಿ ಕಸ ಸುರಿಯದಂತೆ ನಾಮಪಲಕ ಅಳವಡಿಸಲಾಗಿತ್ತು. ಸ್ಥಳೀಯರು ಕಸ ಸುರಿಯುವುದನ್ನು ಬಿಟ್ಟು ಪ.ಪಂ. ಆಟೋಗಳಿಗೆ 20 ರೂ. ಕೊಟ್ಟು ಕಸ ಹಾಕುತ್ತಿದ್ದರು. ಇದೀಗ 20 ರೂ. ಉಳಿಸಿಕೊಂಡು ರಸ್ತೆಯಲ್ಲೆಲ್ಲಾ ಕಸ ಸುರಿಯಲು ಪ್ರಾರಂಭಿಸಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಎದುರಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ