ಆ್ಯಪ್ನಗರ

ಸಹಕಾರಿ ಠೇವಣಿ ಹೆಚ್ಚಿಸುವ ಗುರಿ

ನಗರದ ಸಮಾನ ಪತ್ತಿನ ಸೌಹಾರ್ಧ ಸಹಕಾರಿ ನಿಯಮಿತವು 2020ರ ಮಾರ್ಚ್‌ ಅಂತ್ಯಕ್ಕೆ ತನ್ನ ವ್ಯವಹಾರವನ್ನು 13 ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ ಎಂದು ಸಂಸ್ಥೆ ಅಧ್ಯಕ್ಷ ಕೆ.ಬಿ.ದೇವರಾಜ್‌ ಹೇಳಿದರು

Vijaya Karnataka 29 Jul 2019, 5:00 am
ಚಿಕ್ಕಮಗಳೂರು : ನಗರದ ಸಮಾನ ಪತ್ತಿನ ಸೌಹಾರ್ಧ ಸಹಕಾರಿ ನಿಯಮಿತವು 2020ರ ಮಾರ್ಚ್‌ ಅಂತ್ಯಕ್ಕೆ ತನ್ನ ವ್ಯವಹಾರವನ್ನು 13 ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ ಎಂದು ಸಂಸ್ಥೆ ಅಧ್ಯಕ್ಷ ಕೆ.ಬಿ.ದೇವರಾಜ್‌ ಹೇಳಿದರು
Vijaya Karnataka Web CKM-28SHIVU-P6


ನಗರದ ಎಂಇಎಸ್‌ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾನ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ 2018-19ನೇ ಸಾಲಿನ ಸರ್ವಸದಸ್ಯರ ಸಭೆ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

2018 ರ ಮಾರ್ಚ್‌ 31ಕ್ಕೆ ಸಹಕಾರಿಯ ಒಟ್ಟು ಠೇವಣಿ 405.93 ಲಕ್ಷ ರೂ.ಗಳಿದ್ದು ಅದು 2019 ರ ಅವಧಿಗೆ 530.21 ಲಕ್ಷ ಕ್ಕೆ ಏರುವ ಮೂಲಕ ಶೇ.30.61 ರಷ್ಟು ಬೆಳವಣಿಗೆ ಸಾಧಿಸಿದೆ. ಒಟ್ಟು ಮುಂಗಡವು 2018ರಲ್ಲಿ 351.84 ಲಕ್ಷ ರೂ. ಇದ್ದು, 2019ಕ್ಕೆ 482.24 ಲಕ್ಷ ಕ್ಕೆ ಏರಿದೆ. ಒಟ್ಟು ಶೇ.37.04ರಷ್ಟು ಹೆಚ್ಚಳ ಸಾಧಿಸಿದೆ ಎಂದರು.

2018ರ ಮಾರ್ಚ್‌ 31ಕ್ಕೆ ನಿವ್ವಳ ಲಾಭ 14.27 ಲಕ್ಷ ರೂ. ಇದ್ದು, 2019ಕ್ಕೆ 17.95 ಲಕ್ಷ ರೂ.ಗಳಿಗೆ ಹೆಚ್ಚಿದೆ. ಒಟ್ಟು ಶೇ.25.37ರಷ್ಟು ವೃದ್ಧಿಯಾಗಿದೆ. 2019 ಮಾರ್ಚ್‌ 31ಕ್ಕೆ ದುಡಿಯುವ ಬಂವಾಳ 617.43 ಲಕ್ಷ ರೂ.ಇದೆ ಎಂದು ಮಾಹಿತಿ ನೀಡಿದರು.

ಸಹಕಾರ ಸಂಘಗಳು ಸದಸ್ಯರ ಸಹಕಾರದಿಂದ ನಡೆಯುತ್ತವೆ. ಸದಸ್ಯರು ಉಳಿತಾಯ ಖಾತೆಗಳನ್ನು ಹೆಚ್ಚು ತರೆಯಬೇಕು. ವ್ಯಾಪಾರಸ್ಥರಿಗೆ ಹೆಚ್ಚಿನ ಸಾಲ ಕೊಡುತ್ತಿದ್ದೇವೆ. ಬಡ್ಡಿ ದರ ಕಡಿಮೆ ಇರುವುದರಿಂದ ಇದರ ಲಾಭ ಪಡೆಯಬೇಕು ಎಂದು ಹೇಳಿದರು.

ಉಪಾಧ್ಯಕ್ಷ ಡಿ.ಸಿ.ಕೃಷ್ಣಮೂರ್ತಿ, ನಿರ್ದೇಶಕರಾದ ಕೆ.ಎಸ್‌.ದೊಡ್ಡೇಗೌಡ, ಎಚ್‌.ಡಿ.ತಮ್ಮಯ್ಯ, ಬಿ.ಜಿ.ಸೋಮಶೇಖರಪ್ಪ, ಯು.ಎಂ.ಜಯರಾಮೇಗೌಡ, ಚೇತನ್‌ ಜಿ.ನಾಯಕ್‌, ಟಿ.ಎಂ.ದೇವಿಕ, ಕೆ.ವಿ.ಮಮತಾ ಹಾಜರಿದ್ದರು. ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ವೆಂಕಟೇಶ್‌ ವಾರ್ಷಿಕ ವರದಿ ಮಂಡಿಸಿದರು. ಕೆ.ಸಿ.ನೀಲಕಂಠಪ್ಪ ನಿರೂಪಿಸಿ, ಸುಷ್ಮ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ