ಆ್ಯಪ್ನಗರ

ಕಳಸದಲ್ಲಿ ಆಳ್ವಾಸ್‌ ಸಾಂಸ್ಕೃತಿಕ ವೈಭವ

ಸೌಂದರ್ಯ ಪ್ರಜ್ಞೆ ಯಾರಲ್ಲಿದೆಯೋ ಅವನು ದೇಶವನ್ನು ಪ್ರೀತಿಸುತ್ತಾನೆ, ಕಲೆಯನ್ನು ಪ್ರೀತಿಸುತ್ತಾನೆ,ಸಾಮರಸ್ಯ ಬದುಕನ್ನು ಪ್ರೀತಿಸುತ್ತಾನೆ , ಅವನೇ ಈ ದೇಶದ ಬಹುದೊಡ್ಡ ಸಂಪತ್ತು ಎಂದು ಆಳ್ವಾಸ್‌ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ್‌ ಆಳ್ವ ಹೇಳಿದರು.

Vijaya Karnataka 22 Feb 2019, 5:00 am
ಕಳಸ : ಸೌಂದರ್ಯ ಪ್ರಜ್ಞೆ ಯಾರಲ್ಲಿದೆಯೋ ಅವನು ದೇಶವನ್ನು ಪ್ರೀತಿಸುತ್ತಾನೆ, ಕಲೆಯನ್ನು ಪ್ರೀತಿಸುತ್ತಾನೆ,ಸಾಮರಸ್ಯ ಬದುಕನ್ನು ಪ್ರೀತಿಸುತ್ತಾನೆ , ಅವನೇ ಈ ದೇಶದ ಬಹುದೊಡ್ಡ ಸಂಪತ್ತು ಎಂದು ಆಳ್ವಾಸ್‌ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ್‌ ಆಳ್ವ ಹೇಳಿದರು.
Vijaya Karnataka Web CKM-21KLS2


ಕಳಸ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಬುಧವಾರ ಸಂಜೆ ನಡೆದ ಆಳ್ವಾಸ್‌ ಸಾಂಸ್ಕೃತಿಕ ವೈಭವ 2019ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಎಂದರೆ ಶಿಕ್ಷ ಣ ಪಡೆಯುವುದಷ್ಟೇ ಅಲ್ಲ ತನ್ನಲ್ಲಿರುವ ಆಸಕ್ತಿಗೆ ಅನುಗುಣವಾಗಿ ಸುಸಂಸ್ಕೃತ ಜೀವನ ರೂಪಿಸಿಕೊಳ್ಳಲು ಕಲಾ ಆರಾಧಕನಾಗುವುದು ಕೂಡ ಅಗತ್ಯ.ಕಲೆಯನ್ನು ಆಸ್ವಾದಿಸಬೇಕು.ಕಲೆಯನ್ನು ಕಲಿಯುವ ಆಸಕ್ತಿ ಮೂಡಬೇಕು.ಶಾಸ್ತ್ರೀಯವಾದ ಈ ಸಾಂಸ್ಕೃತಿಕ ಸಂಪತ್ತು ಸುಂದರವಾದ ಮನಸ್ಸನ್ನು ಕಟ್ಟಿಕೊಡುತ್ತದೆ.ಇಂತಹ ಸಂಪತ್ತನ್ನು ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೊರನಾಡು ದೇವಸ್ಥಾನದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ಸಾಂಸ್ಕೃತಿಕ ವೈಭವ ಪರಂಪರೆ ಮತ್ತು ಆಧ್ಯಾತ್ಮಿಕ ಸಂಪತ್ತಿನಿಂದ ಭಾರತಕ್ಕೆ ಜಗದ್ಗುರುವಿಗೆ ಸಿಕ್ಕಿರುವ ಸ್ಥಾನಮಾನ ಸಿಕ್ಕಿದೆ. ಸಾಂಸ್ಕೃತಿಕ ವೈಭವದಿಂದ ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡು ಶಾಂತಿ,ಸೌಹಾರ್ಧತೆ,ಪ್ರೀತಿ ಅಭಿಮಾನವನ್ನು ಕಾಣಲು ಸಾದ್ಯವಾಗಿದೆ.ದೇಶದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಕಾಣುವಂತ ವ್ಯವಸ್ಥೆಯನ್ನು ಆಳ್ವಾಸ್‌ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.

ಆಳ್ವಾಸ್‌ ನುಡಿಸಿರಿ ವಿರಾಸತ್‌ ವಿರಾಸತ್‌ ಕಳಸ ಘಟಕದ ಅಧ್ಯಕ್ಷ ಎಂ.ಎ.ಶೇಷಗಿರಿ,ಶಾಸಕ ಎಂ.ಪಿ.ಕುಮಾರಸ್ವಾಮಿ,ಮಾಜಿ ಶಾಸಕ ಬಿ.ಬಿ.ನಿಂಗಯ್ಯ,ರಾಜಲಕ್ಷ್ಮೀ ಜೋಷಿ,ಜಿ.ಪಂ ಸದಸ್ಯ ಕೆ.ಆರ್‌.ಪ್ರಭಾಕರ್‌,ತಾ.ಪಂ ಅಧ್ಯಕ್ಷ ಕೆ.ಸಿ.ರತನ್‌,ತಾ.ಪಂ ಸದಸ್ಯರಾದ ಮಹಮ್ಮದ್‌ ರಫೀಕ್‌,ಗ್ರಾ.ಪಂ ಅಧ್ಯಕ್ಷೆ ರತೀರವೀಂದ್ರ,,ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್‌ ಶ್ರೀ ನಿವಾಸ್‌ ಹೆಬ್ಬಾರ್‌,ಬಿಜೇಪಿ ಹೋಬಳಿ ಅಧ್ಯಕ್ಷ ಗಿರೀಶ್‌ ಹೆಮ್ಮಕ್ಕಿ,ಬಿ.ವಿ.ರವಿರೈ,ರುದ್ರಯ್ಯ ಆಚಾರ್‌,ರಾಮಚಂದ್ರ ಹೆಬ್ಬಾರ್‌,ಭರತ್‌ರಾಜ್‌,ಅನಿಲ್‌ ಗ್ಯಾವಿನ್‌,ಮಮ್ತಾಜ್‌ ಬೇಗಂ,ಬ್ರಹ್ಮದೇವ,ಪದ್ಮಕುಮಾರ್‌,ಸಂತೋಷ್‌ ಹಿನಾರಿ,ಪ್ರಕಾಶ್‌ ಕುಮಾರ್‌ ಇತರರು ಇದ್ದರು.


ನಂತರ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಕೇರಳದ ಮೋಹಿನಿಯಟ್ಟಮ್‌,ಬಡಕುತಿಟ್ಟು ಯಕ್ಷ ಗಾನ,ಆಂದ್ರದ ಜನಪದ ಬಂಜಾರ ನೃತ್ಯ,ಮಣಿಪುರಿ ಸ್ಟಿಕ್‌ ಡ್ಯಾನ್ಸ್‌, ಶ್ರೀಲಂಕಾದ ಕ್ಯಾಂಡಿಯಮ್‌ ನೃತ್ಯ,ಶಾಸ್ತ್ರೀಯ ನೃತ್ಯ,ಮಣಿಪುರಿ ದೋಲ್‌ ಚಲಮ್‌,ಕಥಕ್‌ ನೃತ್ಯ,ಒರಿಸ್ಸಾದ ಗೋಟಿಪುವ ನೃತ್ಯ,ಮಲ್ಲಕಂಬ ಮತ್ತು ರೋಪ್‌ ಕಸರತ್ತು ,ಗುಜರಾತಿನ ಗಾರ್ಭ ಮತ್ತು ದಾಂಡೀಯ,ಪಶ್ಚಿಮ ಬಂಗಾಳದ ಪುರಲಿಯ ಸಿಂಹ ನೃತ್ಯ,ಶ್ಯಾಡೋ ಪ್ಲೇ,ಕಿರು ನಾಟಕಗಳು ನೆರೆದಿದ್ದ 5 ಸಾವಿರಕ್ಕೂ ಹೆಚ್ಚು ಜನರನ್ನು ರಂಜಿಸಿತು.

-------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ