ಆ್ಯಪ್ನಗರ

ಎಸ್‌.ಕೆ.ಬಾರ್ಡರ್‌ನಲ್ಲಿ ಟ್ಯಾಂಕರ್‌ ಪಲ್ಟಿ: ಪ್ರಯಾಣಿಕರ ಪರದಾಟ

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸೋಮವಾರ ರಾತ್ರಿ ಲಾರಿ ಸಿಕ್ಕಿಕೊಂಡು ಟ್ರಾಫಿಕ್‌ ಜಾಮ್‌ ಆದ ಬೆನ್ನಲ್ಲೇ ಮಂಗಳವಾರ ಕುದುರೆಮುಖ-ಕಾರ್ಕಳ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿಯಾಗಿ ಪ್ರಯಾಣಿಕರು ರಾತ್ರಿಯಿಡೀ ಪರದಾಡಿದ್ದಾರೆ.

Vijaya Karnataka 30 Aug 2018, 5:00 am
ಚಿಕ್ಕಮಗಳೂರು : ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸೋಮವಾರ ರಾತ್ರಿ ಲಾರಿ ಸಿಕ್ಕಿಕೊಂಡು ಟ್ರಾಫಿಕ್‌ ಜಾಮ್‌ ಆದ ಬೆನ್ನಲ್ಲೇ ಮಂಗಳವಾರ ಕುದುರೆಮುಖ-ಕಾರ್ಕಳ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿಯಾಗಿ ಪ್ರಯಾಣಿಕರು ರಾತ್ರಿಯಿಡೀ ಪರದಾಡಿದ್ದಾರೆ.
Vijaya Karnataka Web anker palty at sk border travelers fate
ಎಸ್‌.ಕೆ.ಬಾರ್ಡರ್‌ನಲ್ಲಿ ಟ್ಯಾಂಕರ್‌ ಪಲ್ಟಿ: ಪ್ರಯಾಣಿಕರ ಪರದಾಟ


ಚಾರ್ಮಾಡಿ ಘಾಟಿಯಲ್ಲಿ ಭಾರಿ ವಾಹನಗಳನ್ನು ನಿಷೇಧಿಸಿರುವುದರಿಂದ ಎಸ್‌.ಕೆ.ಬಾರ್ಡರ್‌ ರಸ್ತೆ ಮೂಲಕ ಸಂಚರಿಸುತ್ತಿವೆ. ಮಂಗಳವಾರ ರಾತ್ರಿ ಗ್ಯಾಸ್‌ ಟ್ಯಾಂಕರ್‌ ಪಲ್ಪಿಯಾಗಿದ್ದು, ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಆದರೆ, ಗ್ಯಾಸ್‌ ಟ್ಯಾಂಕರ್‌ನ್ನು ತೆರವು ಮಾಡುವವರೆಗೂ ಇತರೆ ವಾಹನಗಳು ಸಂಚರಿಸಲಾಗದೆ ಪ್ರಯಾಣಿಕರು ರಾತ್ರಿಯನ್ನು ಕಾಡೊಳಗೆ ಕಳೆಯಬೇಕಾಯಿತು.

ಶೃಂಗೇರಿಯ ಎಸ್‌.ಕೆ.ಬಾರ್ಡರ್‌ನಿಂದ ಬಹಳಷ್ಟು ದೂರದವರೆಗೆ ಟ್ರಾಫಿಕ್‌ ಜಾಮ್‌ ಆಗಿತ್ತು. ಕುದುರೆಮುಖದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಗ್ಯಾಸ್‌ ಟ್ಯಾಂಕರ್‌ ತೆರವು ಮಾಡಲು ಪೊಲೀಸರು ಹರಸಾಹಸ ಮಾಡಬೇಕಾಯಿತು.

ಚಾರ್ಮಾಡಿಯಲ್ಲಿ ಭಾರಿ ವಾಹನ: ತನಿಖೆ

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಿದ್ದರೂ ಪೊಲೀಸರು ಹಣ ಪಡೆದು ಸಂಚಾರಕ್ಕೆ ಅವಕಾಶ ನೀಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತನಿಖೆ ಆರಂಭಿಸಿದೆ. ಚಾರ್ಮಾಡಿಯಲ್ಲಿ ನಿಷೇಧಕ್ಕಿಲ್ಲ ಕಿಮ್ಮತ್ತು ಶೀರ್ಷಿಕೆಯಡಿ 'ವಿಜಯ ಕರ್ನಾಟಕ' ಆ.29ರಂದು ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯೊಂದಿಗೆ ಚರ್ಚಿಸಿದ್ದು, ಎಎಸ್ಪಿ ಅಣ್ಣಪ್ಪ ನಾಯಕ್‌ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದಾರೆ. ಎಎಸ್ಪಿ ಅಣ್ಣಪ್ಪ ನಾಯಕ್‌ ಚಾರ್ಮಾಡಿ ಘಾಟಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರಿಂದಲೂ ಮಾಹಿತಿ ಸಂಗ್ರಹಿಸಿದರು. ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡದಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ