ಆ್ಯಪ್ನಗರ

ಬೆಂಗಳೂರಿನಲ್ಲಿ ಆಕ್ಸಿನ್‌ಗೆ ತೀವ್ರ ಅಭಾವ? ಕೆಲಸಕ್ಕಾಗಿ ಬೆಂಗೂರಿಗೆ ತೆರಳಿದ್ದ ಚಿಕ್ಕಮಗಳೂರಿನ ವ್ಯಕ್ತಿ ಆಕ್ಸಿಜನ್‌ ಸಿಗದೆ ಸಾವು!

ಬೆಂಗಳೂರಿನಲ್ಲಿ ಆಕ್ಸಿಜನ್ ಕೊರತೆ ಇರುವುದು ಮತ್ತೆ ಬೆಳಕಿಗೆ ಬಂದಿದೆ. ಆಕ್ಸಿಜನ್ ಸಿಗದೇ ಪರದಾಟ ನಡೆಸಿ ಕೊನೆಗೂ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ಜಗದೀಶ್‌ ಉಸಿರಾಟದ ಸಮಸ್ಯೆಯಿಂದ ನರಳಿ ನರಳಿ ಸಾವನ್ನಪ್ಪಿದ್ದಾರೆ.

Vijaya Karnataka Web 19 Apr 2021, 10:47 am
ಚಿಕ್ಕಮಗಳೂರು: ರಾಜಧಾನಿ ಬೆಂಗಳೂರಲ್ಲಿ ಆಕ್ಸಿಜನ್ ಕೊರತೆ ಮಿತಿ ಮೀರಿದ್ಯಾ..? ಬೆಂಗಳೂರಿನಲ್ಲಿ ಆಕ್ಸಿಜನ್ ಕೊರತೆ ನಿಜಕ್ಕೂ ಬೆಚ್ಚಿಬೀಳಿಸುತ್ತಿದೆ. ಅದಕ್ಕೆ ಕಾರಣ ಆಕ್ಸಿಜನ್ ಸಿಗದೇ ಪರದಾಟ ನಡೆಸಿ ಕೊನೆಗೂ ಸಾವನ್ನಪ್ಪಿದ ವ್ಯಕ್ತಿ. ಹೌದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ಜಗದೀಶ್ (38) ಉಸಿರಾಟದ ಸಮಸ್ಯೆಯಿಂದ ನರಳಿ ನರಳಿ ಸಾವನ್ನಪ್ಪಿದ್ದಾರೆ.
Vijaya Karnataka Web Bengaluru oxygen


ಜಗದೀಶ್‌ಗೆ ಚಿಕಿತ್ಸೆ ಕೊಡಿಸಲು ಪತ್ನಿ-ಮಗಳು ಆಸ್ಪತ್ರೆಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಕೋವಿಡ್ ರಿಪೋರ್ಟ್ ಇಲ್ಲದ ಹಿನ್ನೆಲೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ನಕಾರ ತೋರಿದ್ದಾರೆ. ಪತ್ನಿ-ಮಗಳು ಅಂಗಲಾಚಿದ್ರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಸತತ ಎರಡು ದಿನ ಆಸ್ಪತ್ರೆ ಸುತ್ತಿದ್ರೂ ಜಗದೀಶ್‌ಗೆ ಚಿಕಿತ್ಸೆ ಸಿಕ್ಕಿಲ್ಲ. ಪರಿಣಾಮ ಪತ್ನಿ ಹಾಗೂ ಮಗಳ ಮುಂದೆಯೇ ಜಗದೀಶ್‌ ಪ್ರಾಣ ಬಿಟ್ಟಿದ್ದಾರೆ.

ಇನ್ನು ಪತಿಯನ್ನು ಕಳೆದುಕೊಂಡಿರುವ ಪತ್ನಿ ಅನಿತಾ ಜೀವನಕ್ಕೆ ಇದೀಗ ಕತ್ತಲೆ ಆವರಿಸಿದೆ. ಕ್ಯಾಬ್‌ ಚಾಲಕನಾಗಿದ್ದ ಜಗದೀಶ್‌ ಸಾಲ ತೀರಿಸಬೇಕು, ಮಗಳಿಗೆ ಒಳ್ಳೆ ಶಿಕ್ಷಣ ಕೊಡಬೇಕೆಂದು ಕನಸು ಕಂಡಿದ್ದರು. ಹೀಗಾಗಿ ಊರು ಬಿಟ್ಟು ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದರು. ಆದರೆ ಇದೀಗ ಅವರ ಪ್ರಾಣವೇ ಹೋಗಿದೆ. ಉಸಿರಾಟದ ಸಮಸ್ಯೆಯಿಂದ ಆಕ್ಸಿಜನ್ ಸಿಗದೇ ಜಗನ್ನಾಥ್ ಸಾವನಪ್ಪಿದ್ದಾರೆ. ಕೊರೊನಾ ರಿಪೋರ್ಟ್‌ ಸಿಕ್ಕಿಲ್ಲದಿದ್ದರೂ ಕೊರೊನಾ ಮಾರ್ಗಸೂಚಿಯಂತೆ ಜಗನ್ನಾಥ್ ಅಂತ್ಯಸಂಸ್ಕಾರ ನಡೆಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ