ಆ್ಯಪ್ನಗರ

ಬಾಲಕಿ, ಯುವತಿ ಪ್ರತ್ಯೇಕ ನಾಪತ್ತೆ

ಜಿಲ್ಲೆಯ ಎರಡು ಕಡೆಗಳಲ್ಲಿ ಬಾಲಕಿ, ಯುವತಿ ನಾಪತ್ತೆಯಾಗಿದ್ದು ಸಂಬಂಧಿಸಿದ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ

Vijaya Karnataka 31 May 2018, 5:00 am
ಚಿಕ್ಕಮಗಳೂರು: ಜಿಲ್ಲೆಯ ಎರಡು ಕಡೆಗಳಲ್ಲಿ ಬಾಲಕಿ, ಯುವತಿ ನಾಪತ್ತೆಯಾಗಿದ್ದು ಸಂಬಂಧಿಸಿದ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
Vijaya Karnataka Web as a child the young woman is missing herself
ಬಾಲಕಿ, ಯುವತಿ ಪ್ರತ್ಯೇಕ ನಾಪತ್ತೆ


ಚಿಕ್ಕಮಗಳೂರು ನಗರದ ತಸ್ಲಿಂ ಬಾನು(16) ಮೇ 25ರಂದು ಕಟಿಂಗ್‌ ಕ್ಲಾಸ್‌ಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಕಾಣೆಯಾಗಿದ್ದಾಳೆ.

ಸಾಧಾರಣ ಮೈಕಟ್ಟು, 4.6 ಅಡಿ ಎತ್ತರ, ಚಪ್ಪಟೆ ಮುಖ, ಎಣ್ಣೆಗೆಂಪು ಮೈಬಣ್ಣ, ಎಡ ಮುಖದ ಮೇಲೆ ಕಪ್ಪು ಮಚ್ಚೆ ಇರುವ ಇವರು ಕನ್ನಡ, ಹಿಂದಿ, ಉರ್ದು ಮಾತನಾಡುತ್ತಾರೆ. ಬಿಳಿ ಬಣ್ಣದ ಚೂಡಿದಾರ್‌ ಧರಿಸಿದ್ದಾರೆ. ಈ ಬಾಲಕಿಯ ಸುಳಿವು ದೊರೆತಲ್ಲಿ ಹತ್ತಿರದ ಪೊಲೀಸ್‌ ಠಾಣೆ ಅಥವಾ ಮಹಿಳಾ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬಹುದು.

ಮೂಡಿಗೆರೆ ಪಟ್ಟಣದ ಅನ್ನಪೂರ್ಣ(18)ಎಂಬ ಯುವತಿ ಮೇ 20ರಂದು ಮನೆಯಿಂದ ಹೋಗಿ ಕಾಣೆಯಾಗಿದ್ದಾರೆ. ಸಾಧಾರಣ ಮೈಕಟ್ಟು, 5 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ ಇರುವ ಇವರು ಕನ್ನಡ, ಹಿಂದಿ ಮಾತನಾಡುತ್ತಾರೆ. ಹಸಿರು ಬಣ್ಣದ ಚೂಡಿದಾರ್‌, ಕೆಂಪು ಬಣ್ಣದ ಜರ್ಕಿನ್‌, ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿದ್ದಾರೆ. ಈ ಯುವತಿಯ ಸುಳಿವು ಕಂಡುಬಂದಲ್ಲಿ ಜಿಲ್ಲಾ ಪೊಲೀಸ್‌ ಕಂಟ್ರೋಲ್‌ ರೂಂ ದೂ. 08262-235608 ಅಥವಾ ಮೂಡಿಗೆರೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ