ಆ್ಯಪ್ನಗರ

ಎಟಿಎಂ ಕಾರ್ಡ್‌ ಕಳ್ಳರು ಪೊಲೀಸ್‌ ವಶಕ್ಕೆ

ಪಟ್ಟಣದ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯ ಉಳಕಿನಕಲ್ಲು ಬಳಿ ಶುಕ್ರವಾರ ಸಂಜೆ ವಾಹನ ತಪಾಸಣೆ ಮಾಡುವಾಗ ಇಬ್ಬರು ಎಟಿಎಂ ಕಾರ್ಡ್‌ ಕಳ್ಳರನ್ನು ವಶಕ್ಕೆ ಪಡೆದಿರುವುದಾಗಿ ಪಿಎಸ್‌ಐ ವಿಶ್ವನಾಥ್‌ ತಿಳಿಸಿದರು.

Vijaya Karnataka 8 Oct 2018, 5:00 am
ಕಡೂರು : ಪಟ್ಟಣದ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯ ಉಳಕಿನಕಲ್ಲು ಬಳಿ ಶುಕ್ರವಾರ ಸಂಜೆ ವಾಹನ ತಪಾಸಣೆ ಮಾಡುವಾಗ ಇಬ್ಬರು ಎಟಿಎಂ ಕಾರ್ಡ್‌ ಕಳ್ಳರನ್ನು ವಶಕ್ಕೆ ಪಡೆದಿರುವುದಾಗಿ ಪಿಎಸ್‌ಐ ವಿಶ್ವನಾಥ್‌ ತಿಳಿಸಿದರು.
Vijaya Karnataka Web atm card robbers arrested by police
ಎಟಿಎಂ ಕಾರ್ಡ್‌ ಕಳ್ಳರು ಪೊಲೀಸ್‌ ವಶಕ್ಕೆ


ಆರೋಪಿಗಳು ತರೀಕೆರೆ ತಾಲೂಕು ಬೇಲೇನಹಳ್ಳಿ ತಾಂಡ್ಯದ ನಿವಾಸಿಗಳು. ಒಬ್ಬ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ತಳ್ಳಿ ಗ್ರಾಮದ ವಿಜಯ್‌ ಕುಮಾರ್‌(ವಿಜಿ)31, ಮತೊಬ್ಬ ತರೀಕೆರೆ ತಾಲೂಕಿನ ಬೇಲೇನಹಳ್ಳಿ ತಾಂಡ್ಯದ ಪ್ರವೀಣ್‌ ಕುಮಾರ್‌(30) ಎಂದು ಗುರುತಿಸಲಾಗಿದೆ.

ಆರೋಪಿಗಳು ಕಳೆದ ಒಂದು ತಿಂಗಳ ಹಿಂದೆ ಶಿವಮೊಗ್ಗದಲ್ಲಿ 2 ಎಟಿಎಂಗಳಲ್ಲಿ ಹಣ ಬಿಡಿಸಲು ಬಂದ ವ್ಯಕ್ತಿಗಳಿಗೆ ಮೋಸಮಾಡಿ ಎಟಿಎಂ ಕಾರ್ಡ್‌ ಎಕ್ಸ್‌ ಚೇಂಜ್‌ ಮಾಡಿ ಅಕೌಂಟ್‌ಲ್ಲಿದ್ದ ಹಣವನ್ನು ಬಿಡಿಸಿರುವುದಾಗಿ ಹಾಗೂ ಕಡೂರು ಪಟ್ಟಣದಲ್ಲಿ ಕಳೆದ 3 ದಿನಗಳ ಹಿಂದೆ ಒಬ್ಬ ಹುಡುಗನಿಗೆ ಮೋಸ ಮಾಡಿ ಎಟಿಎಂ ಕಾರ್ಡ್‌ ಬದಲಿಸಿ ಹಣವನ್ನು ಬಿಡಿಸಿರುವುದಾಗಿ ತಪೊ್ಪಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ ವಿವಿಧ ಬ್ಯಾಂಕ್‌ಗಳ 5 ಎಟಿಎಂ ಕಾರ್ಡ್‌ಗಳು ಸೇರಿದಂತೆ 1.10 ಲಕ್ಷ ಹಣ, ಒಂದು ಹುಂಡೈ ವರ್ನಾ ಕಾರು, ಒಂದು ಸುಜುಕಿ ಕಂಪನಿಯ ಸ್ಕೂಟರ್‌ ವಶಪಡಿಸಿಕೊಳ್ಳಲಾಗಿದೆ. ವಂಚನೆ, ಕಳ್ಳತನದ ಪ್ರಕರಣ ದಾಖಲಿಸಲಾಗಿದ್ದು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ. ಕಾರ್ಯಚರಣೆಯನ್ನು ಪೊಲೀಸ್‌ ಉಪ ನಿರ್ದೇಶಕರು ತರೀಕೆರೆ ಹಾಗೂ ಕಡೂರು ವೃತ್ತ ನಿರೀಕ್ಷ ಕರಾದ ಟಿ.ಎಂ. ಸತ್ಯನಾರಾಯಣ ಸೂಚನೆಯಂತೆ ಪಿಎಸ್‌ಐ ವಿಶ್ವನಾಥ್‌ ಹಾಗೂ ಸಿಬ್ಬಂದಿ ವರ್ಗದವರಾದ ಅಂಜನಿ, ಕೃಷ್ಣಮೂರ್ತಿ, ಮಂಜುನಾಥ್‌, ಪ್ರದೀಪ, ಮಧುಕುಮಾರ್‌, ಮಲ್ಲಪ್ಪ ಮತ್ತು ಚಾಲಕ ನವೀನ್‌ರ ತಂಡಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಣ್ಣಮಲೈ 5 ಸಾವಿರ ನಗದನ್ನು ಘೋಷಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ