ಆ್ಯಪ್ನಗರ

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಜಾಗೃತಿ

ತಂಬಾಕು ಮತ್ತಿತರೆ ಮಾದಕ ವಸ್ತುಗಳು ನಿಧಾನವಾಗಿ ಕೊಲ್ಲುವ ವಿಷವಸ್ತುವಾಗಿದ್ದು ಯುವ ಜನತೆ ಇವನ್ನು ಸೇವಿಸುವ ದುಶ್ಚಟದಿಂದ ದೂರ ಇರಬೇಕು ಎಂದು ಉಪನ್ಯಾಸಕ ಸಿ.ಎಚ್‌.ನಾಗರಾಜ್‌ ಹೇಳಿದರು.

Vijaya Karnataka 3 Jun 2018, 5:00 am
ಚಿಕ್ಕಮಗಳೂರು : ತಂಬಾಕು ಮತ್ತಿತರೆ ಮಾದಕ ವಸ್ತುಗಳು ನಿಧಾನವಾಗಿ ಕೊಲ್ಲುವ ವಿಷವಸ್ತುವಾಗಿದ್ದು ಯುವ ಜನತೆ ಇವನ್ನು ಸೇವಿಸುವ ದುಶ್ಚಟದಿಂದ ದೂರ ಇರಬೇಕು ಎಂದು ಉಪನ್ಯಾಸಕ ಸಿ.ಎಚ್‌.ನಾಗರಾಜ್‌ ಹೇಳಿದರು.
Vijaya Karnataka Web awareness at the ksrtc bus stand
ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಜಾಗೃತಿ


ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಇತ್ತೀಚೆಗೆ ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯದಿಂದ ಏರ್ಪಡಿಸಿದ್ದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವ ಜನತೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮಾದಕ ವಸ್ತು ಬಳಸುವವರು ಇಂದೇ ತ್ಯಜಿಸುವ ಬಗ್ಗೆ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಮನವಿ ಮಾಡಿದರು. ರಾಜಯೋಗಿನಿ ಭಾಗ್ಯ ಅವರು ಚಿತ್ರ ಪ್ರದರ್ಶನದ ಮೂಲಕ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ವಿವರಣೆ ನೀಡಿದರು.

ಕೆಎಸ್‌ಆರ್‌ಟಿಸಿ ವಿಭಾಗದ ಸಹಾಯಕ ಆಡಳಿತಾಧಿಕಾರಿ ಮುಂಜುನಾಥಮೂರ್ತಿ, ಸಹಾಯಕ ಕನೂನು ಅಧಿಕಾರಿ ಸುಲೋಚನ, ಅಧೀಕ್ಷ ಕ ಮಂಜಣ್ಣ, ಚಾಲಕ, ನಿರ್ವಾಹಕರು ಹಾಗೂ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ವೈದ್ಯರಾದ ಡಾ.ಅನಿತ, ಡಾ.ಸೌಜನ್ಯ ಹಾಜರಿದ್ದರು. ತಂಬಾಕು ದಾನ ಪೆಟ್ಟಿಗೆಗೆ 50ಕ್ಕೂ ಹೆಚ್ಚು ಜನ ತಂಬಾಕು ತ್ಯಜಿಸಿ ದಾನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ