ಆ್ಯಪ್ನಗರ

ಮಾನಸಿಕ ಆರೋಗ್ಯಕಡೆ ಜಾಗೃತಿ ಅಗತ್ಯ

ಅಧಿಕಾರಿಗಳು ತಮ್ಮ ದಿನ ನಿತ್ಯದ ಕೆಲಸದ ಒತ್ತಡದಿಂದ ಆರೋಗ್ಯ ನಿಲ್ರ್ಯಕ್ಷ ಮಾಡಬಾರದು ಎಂದು ಜಿಲ್ಲಾ ಮಾನಸಿಕ ರೋಗ ತಜ್ಞ ಡಾ.ವಿನಯ್‌ಕುಮಾರ್‌ ತಿಳಿಸಿದರು.

Vijaya Karnataka 18 Aug 2019, 5:00 am
ಚಿಕ್ಕಮಗಳೂರು : ಅಧಿಕಾರಿಗಳು ತಮ್ಮ ದಿನ ನಿತ್ಯದ ಕೆಲಸದ ಒತ್ತಡದಿಂದ ಆರೋಗ್ಯ ನಿಲ್ರ್ಯಕ್ಷ ಮಾಡಬಾರದು ಎಂದು ಜಿಲ್ಲಾ ಮಾನಸಿಕ ರೋಗ ತಜ್ಞ ಡಾ.ವಿನಯ್‌ಕುಮಾರ್‌ ತಿಳಿಸಿದರು.
Vijaya Karnataka Web CKM-17SHIVU-P3


ಇಲ್ಲಿನ ಮುಖ್ಯ ಅರಣ್ಯ ಸಂರಕ್ಷ ಣಾ ಅಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕದಿಂದ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದರು. ಅಧಿಕಾರಿ,ಸಿಬ್ಬಂದಿ ಪ್ರತಿ ನಿತ್ಯ ಯೋಗ, ಧ್ಯಾನ, ಕ್ರೀಡೆಯನ್ನು ಅಭ್ಯಸಿಸುವುದರಿಂದ ಮನಸ್ಸು ಹೆಚ್ಚು ಕ್ರಿಯಾಶೀಲವಾಗಿರುತ್ತದೆ ಎಂದರು.

ದೇಹಕ್ಕೆ ಕಾಯಿಲೆ ಬಂದರೆ ವೈದ್ಯರು ಅಥವಾ ಸ್ನೇಹಿತರ ಬಳಿ ಹೇಳಿಕೊಳ್ಳಬಹುದು ಮನಸ್ಸಿಗೆ ಕಾಯಿಲೆ ಬಂದರೆ ಯಾರ ಬಳಿಯೂ ಹೇಳಿಕೊಳ್ಳದೆ ಮಾನಸಿಕ ಖಿನ್ನತೆಗೆ ಒಳಗಾಗುತ್ತೇವೆ. ಮನುಷ್ಯನಿಗೆ ಯಾವುದೆ ತೊಂದರೆ ಇದ್ದರು ವೈದ್ಯರ ಬಳಿ ಚರ್ಚಿಸಿ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.

ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಡಾ.ಮುದ್ದಣ್ಣ ಮಾತನಾಡಿ, ಅಧಿಕಾರಿಗಳು ಪ್ರತಿನಿತ್ಯದ ಕೆಲಸಗಳನ್ನು ಮುಗಿಸಿಕೊಂಡು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ಚಿಂತನೆ ಮಾಡಿದಾಗ ಉತ್ತಮ ಆರೋಗ್ಯ ದೊರೆಯುತ್ತದೆ ಎಂದರು.ಅರಣ್ಯ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ ಆರ್‌.ಕೆ.ಪಂಡಿತ್‌, ಅಧೀಕ್ಷ ಕ ಕಾಂತರಾಜ್‌, ಚಿಕಿತ್ಸಾ ಮನಶಾಸ್ತ್ರಜ್ಞ ನವೀನ್‌ಕುಮಾರ್‌, ಸ್ಟಾಫ್‌ ನರ್ಸ್‌ ವನಿತ, ದಾಖಲೆ ಪಾಲಕ ಹರ್ಷಅರಸ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ