ಆ್ಯಪ್ನಗರ

ಲಂಚ ಪಡೆದ ಪಿಡಿಒಗೆ ಜೈಲು

ಆಸ್ತಿ ಅಸೆಸ್ಸ್‌ಮೆಂಟ್‌ ನಕಲು ನೀಡಲು ಲಂಚ ಪಡೆದ ಗ್ರಾ.ಪಂ.ಪಿಡಿಒಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೈಲು ಸಜೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

Vijaya Karnataka 26 Apr 2018, 5:00 am
ಚಿಕ್ಕಮಗಳೂರು : ಆಸ್ತಿ ಅಸೆಸ್ಸ್‌ಮೆಂಟ್‌ ನಕಲು ನೀಡಲು ಲಂಚ ಪಡೆದ ಗ್ರಾ.ಪಂ.ಪಿಡಿಒಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೈಲು ಸಜೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
Vijaya Karnataka Web bail received pdo jail
ಲಂಚ ಪಡೆದ ಪಿಡಿಒಗೆ ಜೈಲು


ಸಿದ್ದರಹಳ್ಳಿ ಗ್ರಾಮದ ದಯಾನಂದ್‌ ಎಂಬಾತ ತನ್ನ ತಾಯಿಯ ಹೆಸರಲ್ಲಿನಲ್ಲಿರುವ ಆಸ್ತಿಯ ಗಣಕೀಕೃತ ಅಸೆಸ್‌ಮೆಂಟ್‌ ನಕಲು ಪಡೆಯಲು ಸಿದ್ದರಹಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.

ಗ್ರಾಮ ಪಂಚಾಯಿತಿ ಪಿಡಿಒ ಎಫ್‌.ಎಫ್‌. ಅಗಸೆ ಬಾಗಿಲು, ಅಸೆಸ್ಸ್‌ಮೆಂಟ್‌ ನಕಲು ನೀಡಲು 3 ಸಾವಿರ ರೂ.ಲಂಚದ ಬೇಡಿಕೆ ಇಟ್ಟಿದ್ದರು. ಅದರಂತೆ 2013 ಡಿಸೆಂಬರ್‌ 17ರಂದು ಪಿಡಿಒ ಅಗಸೆ ಬಾಗಿಲು ಅವರು 3 ಸಾವಿರ ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಲೋಕಾಯುಕ್ತ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರಭಾವತಿ.ಎಂ.ಹಿರೇಮಠ್‌ ಅವರು, ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಎಫ್‌.ಎಫ್‌. ಅಗಸೆ ಬಾಗಿಲು ಅವರಿಗೆ ಒಂದು ವರ್ಷ ಸಜೆ ಹಾಗೂ 55 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ವಿಶೇಷ ಅಭಿಯೋಜಕ ವಿ.ಟಿ.ಥಾಮಸ್‌ ವಾದಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ