ಆ್ಯಪ್ನಗರ

ಸ್ಫೋಟಕ ಸಂಗ್ರಹಿಸಿದ ಆರೋಪಿಗೆ ಜಾಮೀನು

ಕಳಸದ ಮನೆಯೊಂದರಲ್ಲಿ ಸ್ಫೋಟಕ ಸಂಗ್ರಹಿಸಿದ ಆರೋಪಿಯನ್ನು ಬುಧವಾರ ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಜಾಮೀನು ನೀಡಲಾಗಿದೆ.

Vijaya Karnataka 28 Mar 2019, 5:00 am
ಚಿಕ್ಕಮಗಳೂರು : ಕಳಸದ ಮನೆಯೊಂದರಲ್ಲಿ ಸ್ಫೋಟಕ ಸಂಗ್ರಹಿಸಿದ ಆರೋಪಿಯನ್ನು ಬುಧವಾರ ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಜಾಮೀನು ನೀಡಲಾಗಿದೆ.
Vijaya Karnataka Web bail to be arrested by blast accused
ಸ್ಫೋಟಕ ಸಂಗ್ರಹಿಸಿದ ಆರೋಪಿಗೆ ಜಾಮೀನು


ಕಳಸದ ಮನೆಯೊಂದರ ಟೆರೇಸ್‌ನಲ್ಲಿ ಮಂಗಳವಾರ 14 ಜಿಲೆಟಿನ್‌ ಕಡ್ಡಿಗಳು, ಡಿಟೊನೇಟರ್‌, ಪ್ಯೂಸ್‌ ಪತ್ತೆಯಾಗಿದ್ದರಿಂದ ಕಳಸ ಪೊಲೀಸರು ಆರೋಪಿ ಅಜೀಜ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಪ್ರಕರಣದ ತನಿಖೆ ಮುಂದುವರಿದಿದೆ. ಆರೋಪಿ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.

ಬಂಧಿತ ಆರೋಪಿ ಯಾವುದೇ ಸಂಘಟನೆಗೆ ಸೇರಿದವನಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಸ್ಫೋಟಕಗಳು ಎಲ್ಲಿಂದ ಹೇಗೆ ಬಂದವು ಮತ್ತು ಎಲ್ಲಿಗೆ ಕೊಡಲಾಗುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ