ಆ್ಯಪ್ನಗರ

ಮುಂಜಾಗರೂಕತೆ ವಹಿಸಿ ಮಂಗನ ಕಾಯಿಲೆ ತಡೆಗಟ್ಟಿ

ಮುಂಜಾಗರೂಕತೆ ಕ್ರಮ ಕೈಗೊಂಡಲ್ಲಿ ಮಂಗನ ಕಾಯಿಲೆಯ ರೋಗದಿಂದ ದೂರವಿರಬಹುದು ಎಂದು ರೋಟರಿ ಕ್ಲಬ್‌ ಕೊಪ್ಪ ಮಲ್ನಾಡ್‌ ನೂತನ ಅಧ್ಯಕ್ಷ ಎ.ಆರ್‌.ನಾಗೇಂದ್ರ ಸಲಹೆ ಮಾಡಿದರು.

Vijaya Karnataka 21 Jul 2019, 5:00 am
ಜಯಪುರ: ಮುಂಜಾಗರೂಕತೆ ಕ್ರಮ ಕೈಗೊಂಡಲ್ಲಿ ಮಂಗನ ಕಾಯಿಲೆಯ ರೋಗದಿಂದ ದೂರವಿರಬಹುದು ಎಂದು ರೋಟರಿ ಕ್ಲಬ್‌ ಕೊಪ್ಪ ಮಲ್ನಾಡ್‌ ನೂತನ ಅಧ್ಯಕ್ಷ ಎ.ಆರ್‌.ನಾಗೇಂದ್ರ ಸಲಹೆ ಮಾಡಿದರು.
Vijaya Karnataka Web CKM-20JPR1


ಕೊಪ್ಪ ತಾಲೂಕು ಬಸರಿಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್‌ ಕೊಪ್ಪ ಮಲ್ನಾಡ್‌, ತಾಲೂಕು ಆರೋಗ್ಯ ಇಲಾಖೆ ಹಾಗೂ ಕರುಣಾ ಟ್ರಸ್ಟ್‌ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಆರೋಗ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಟ್ಟಣ ಹಾಗೂ ಗ್ರಾಮೀಣ ಪರಿಸರಕ್ಕೆ ಒಗ್ಗಿ ಹೋದ ಅನೇಕ ಜನರಲ್ಲಿ ಇಂತಹಾ ಅನೇಕ ಸಾಂಕ್ರಾಮಿಕ, ಮಾರಕ ಕಾಯಿಲೆಗಳ ಬಗ್ಗೆ ಮಾಹಿತಿ ಇರಲಾರದು. ತಾವೇ ಸಾಕಿ ಸಲಹಿದ ಜೀವಿಯಾದರೂ ಪರಸ್ಪರ ಆಹಾರ ಹಂಚಿಕೊಂಡು ತಿನ್ನುವ ಪ್ರಾಣಿ, ಪಕ್ಷಿ ಸಂಕುಲಗಳು ತಿಂದುಂಡು ಹೊರ ಹಾಕುವ ಹೊಲಸು ರೋಗವನ್ನಂಟಿಸುವ ಸೋಂಕಿನ ರೂಪದಲ್ಲಿ ಮನುಷ್ಯನ ಮೇಲೆ ಪರಿಣಾಮ ಬೀರಬಹುದು.

ಈ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಯು ಹಳ್ಳಿಗಳತ್ತ ಸಾಗಿ ಮುಂಜಾಗರೂಕತಾ ಲಸಿಕೆ ನೀಡುವ ಯೋಜನೆಗೆ ಹೆಚ್ಚಿನ ಆಧ್ಯತೆ ನೀಡಿದ್ದು, ಆರೋಗ್ಯ ಇಲಾಖೆ, ಸಾರ್ವಜನಿಕರು, ಸ್ಥಳೀಯ ಸಕ್ರಿಯ ಸಂಘ, ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಆರೋಗ್ಯ ಇಲಾಖೆಯ ಸುಬ್ರಹ್ಮಣ್ಯ ಮಾತನಾಡಿ, ಪ್ರಾಣಿ, ಪಕ್ಷಿಗಳಿಂದ ಹರಡಬಹುದಾದ ಯಾವುದೇ ರೋಗಗಳಿಗೂ ವೈಧ್ಯ ವಿಜ್ಞಾನದಲ್ಲಿ ಚಿಕಿತ್ಸಾ ವಿಧಾನ, ಪರಿಹಾರಗಳಿವೆಯಾದರೂ, ಅದಕ್ಕೂ ಮುನ್ನ ಮುಂಜಾಗರೂಕತಾ ಕ್ರಮ ತೆಗೆದುಕೊಳ್ಳುವತ್ತ ಜನರು ಹೆಚ್ಚು ಗಮನ ಹರಿಸಬೇಕು ಎಂದರು.

ಅನೇಕ ವಿದ್ಯಾರ್ಥಿಗಳು, ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡು ಶಿಬಿರದ ಪ್ರಯೋಜನ ಪಡೆದರು. ರೋಟರಿ ಕ್ಲಬ್‌ ಕೊಪ್ಪ ಮಲ್ನಾಡ್‌ ಸದಸ್ಯ ಬಸರಿಕಟ್ಟೆಯ ಬಿ.ಜೆ.ರಾಧಾಕೃಷ್ಣ ಹಾಗೂ ಕರುಣಾ ಟ್ರಸ್ಟ್‌ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ